ಕ್ವೀನ್ಸ್ಲ್ಯಾಂಡ್:ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿರುವ ಭಾರತ ತಂಡದ ಓಪನರ್ ಸ್ಮೃತಿ ಮಂದಾನ, ಕಾಂಗರೂ ನಾಡಿನಲ್ಲಿ ಟೆಸ್ಟ್ನಲ್ಲಿ ವೈಯಕ್ತಿಕ ಗರಿಷ್ಠ ರನ್ಗಳಿಸಿದ ಮಹಿಳಾ ಕ್ರಿಕೆಟರ್ ಎಂಬ ದಾಖಲೆ ಬರೆದರು.
ಮಂದಾನ 64 ರನ್ಗಳಿಸಿದ್ದ ವೇಳೆ ಈ ದಾಖಲೆಗೆ ಪಾತ್ರರಾದರು. ಅಲ್ಲದೆ, ಡೇ ಆ್ಯಂಡ್ ನೈಟ್ ಟೆಸ್ಟ್ನಲ್ಲಿ ಮೊದಲ ಅರ್ಧಶತಕ ಸಿಡಿಸಿದ ಭಾರತದ ಮಹಿಳಾ ಕ್ರಿಕೆಟರ್ ಎಂಬ ಶ್ರೇಯವೂ ಅವರ ಪಾಲಾಗಿದೆ. ಮಳೆಯಿಂದ ಸ್ಥಗಿತಗೊಂಡಿರುವ ಪಂದ್ಯದಲ್ಲಿ ಸ್ಮೃತಿ 129 ಎಸೆತಗಳಲ್ಲಿ 14 ಬೌಂಡರಿಸಹಿತ ಅಜೇಯ 70 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಭಾರತ ಒಟ್ಟಾರೆ 39.3 ಓವರ್ಗಳಲ್ಲಿ ಶೆಫಾಲಿ ವರ್ಮಾ(31) ವಿಕೆಟ್ ಕಳೆದುಕೊಂಡು 114 ರನ್ಗಳಿಸಿದೆ.