ಮಕಾಯ್(ಆಸ್ಟ್ರೇಲಿಯಾ): ಭಾರತದ ಸ್ಟಾರ್ ಮಹಿಳಾ ಕ್ರಿಕೆಟಿಗರಾದ ಸ್ಮೃತಿ ಮಂಧಾನ (Smriti Mandhana) ಮತ್ತು ಹರ್ಮನ್ ಪ್ರೀತ್ ಕೌರ್ (Harmanpreet Kaur) ವುಮೆನ್ಸ್ ಬಿಗ್ಬ್ಯಾಶ್ನಲ್ಲಿ (Women's Big Bash League) ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ.
ಮಂಧಾನ ದಾಖಲೆಯ 114 ರನ್ಗಳಿಸಿದರೆ, ಕೌರ್ ಅಜೇಯ 81 ರನ್ಗಳಿಸಿದರು. ಆದರೆ ಕೌರ್ ಆಲ್ರೌಂಡ್ ಆಟ ಮಂಧಾನ ಶತಕ ಹಿಂದಿಕ್ಕಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ 4 ರನ್ಗಳ ರೋಚಕ ಜಯ ತಂದುಕೊಟ್ಟಿತು.
ಬುಧವಾರ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಥಂಡರ್ (Sydney Thunder) ಎದುರಾಳಿಗಳಾಗಿದ್ದವು. ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades) ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 175 ರನ್ಗಳಿಸಿತ್ತು. ಕೇವಲ 9 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮಿಸಿದ ಕೌರ್ 3ನೇ ಓವರ್ನಿಂದ 20ನೇ ಓವರ್ ತನಕ ಬ್ಯಾಟಿಂಗ್ ಮಾಡಿದರು. ಅವರು 55 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 81 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಕೌರ್ಗೆ ಸಾಥ್ ನೀಡಿದ ಜೆಸ್ ಡಫ್ಫಿನ್ 22 ಎಸೆತಗಳಲ್ಲಿ 33 ರನ್ಗಳಿಸಿದರು.
ಇನ್ನು 175 ರನ್ಗಳ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ ತಂಡ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತು. ಸ್ಮೃತಿ ಮಂಧಾನ 64 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 114 ರನ್ಗಳಿಸಿದರೂ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು. ಮಂಧಾನ ಜೊತೆ 14 ಓವರ್ಗಳ ಜೊತೆಯಾಟ ಮಾಡಿದ ವಿಕೆಟ್ ಕೀಪರ್ ತಹಿಲಾ ವಿಲ್ಸನ್ 39 ಎಸೆತಗಳಲ್ಲಿ 38 ರನ್ಗಳಿಸಿ ಸೋಲಿಗೆ ಪರೋಕ್ಷ ಕಾರಣರಾದರು.