ಕರ್ನಾಟಕ

karnataka

ETV Bharat / sports

ಶತಕ ಸಿಡಿಸಿದ ಶ್ರೇಯಸ್‌​ಗೆ 2ನೇ ಟೆಸ್ಟ್​ನಲ್ಲಿ ಅವಕಾಶ ಸಿಗುತ್ತಾ? ರಹಾನೆ ಏನಂದ್ರು? - ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ, ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆದಿದ್ದ ಶ್ರೇಯಸ್ ಅಯ್ಯರ್ ಮೊದಲ ಇನ್ನಿಂಗ್ಸ್​ನಲ್ಲಿ 105 ಮತ್ತು 2ನೇ ಇನ್ನಿಂಗ್ಸ್​ನಲ್ಲಿ 65 ರನ್​ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ ವಿರಾಟ್​ ಕೊಹ್ಲಿ 2ನೇ ಟೆಸ್ಟ್​ ಪಂದ್ಯಕ್ಕೆ ಹಿಂದಿರುಗಿದರೆ ಶ್ರೇಯಸ್​ ಆಡಲಿದ್ದಾರಾ ಎಂಬ ಪ್ರಶ್ನೆಗೆ ರಹಾನೆ ಟೀಂ ಮ್ಯಾನೇಜ್​ಮೆಂಟ್​ ನಿರ್ಧರಿಸಲಿದೆ ಎಂದರು.

Rahane on next match playing XI
ಶ್ರೇಯಸ್​ ಅಯ್ಯರ್​ ರಹಾನೆ

By

Published : Nov 29, 2021, 9:48 PM IST

ಕಾನ್ಪುರ: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರಿದೆ.

ದಿಗ್ಗಜರ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶ ಸದ್ವಿನಿಯೋಗ ಮಾಡಿಕೊಂಡಿರುವ ಶ್ರೇಯಸ್​ ಅಯ್ಯರ್​ಗೆ ಮುಂಬೈನಲ್ಲಿ ನಡೆಯಲಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಅವಕಾಶ ಸಿಗುವುದೋ ಇಲ್ಲವೋ ಎನ್ನುವುದು ಕುತೂಹಲಕಾರಿ ಸಂಗತಿ.

ವಿರಾಟ್​ ಕೊಹ್ಲಿ, ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆದಿದ್ದ ಶ್ರೇಯಸ್ ಅಯ್ಯರ್ ಮೊದಲ ಇನ್ನಿಂಗ್ಸ್​ನಲ್ಲಿ 105 ಮತ್ತು 2ನೇ ಇನ್ನಿಂಗ್ಸ್​ನಲ್ಲಿ 65 ರನ್​ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ ವಿರಾಟ್​ ಕೊಹ್ಲಿ 2ನೇ ಟೆಸ್ಟ್​ ಪಂದ್ಯಕ್ಕೆ ಹಿಂದುರಿಗಿದರೆ ಶ್ರೇಯಸ್​ ಆಡಲಿದ್ದಾರೆ ಎಂಬ ಪ್ರಶ್ನೆಗೆ ರಹಾನೆ ಮ್ಯಾನೇಜ್​ಮೆಂಟ್​ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.

ನಾವು ಈ ಪಂದ್ಯವನ್ನು ಗೆಲ್ಲುವುದಕ್ಕೆ ನಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಕೊನೆಯವರೆಗೆ ಮಾಡಿದೆವು. ಸ್ಪಿನ್ನರ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಶ್ರೇಯಸ್​ ಅಯ್ಯರ್ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ. ಟೆಸ್ಟ್​ ಕ್ರಕೆಟ್​​ ಆಡುವುದಕ್ಕೆ ಸಾಕಷ್ಟು ಸಮಯದಿಂದ ಕಾಯುತ್ತಿದ್ದ ಅವರು ಸಿಕ್ಕ ಈ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ ಕೊಹ್ಲಿ ಆಡಲಿದ್ದಾರೆ. ಹಾಗಾಗಿ ಮುಂದಿನ ಪಂದ್ಯದ ಆಯ್ಕೆಯ ಬಗ್ಗೆ ನಾನೇನು ಹೇಳಲು ಸಾಧ್ಯವಿಲ್ಲ. ಆಯ್ಕೆಯ ವಿಚಾರ ಮ್ಯಾನೇಜ್​ಮೆಂಟ್​ ನಿರ್ಧರಿಸಲಿದೆ ಎಂದು ಪಂದ್ಯದ ಬಳಿಕ ರಹಾನೆ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ತಂಡಕ್ಕೆ ಆಗಮಿಸಿದ ನಂತರ ಶ್ರೇಯಸ್​ ಅಯ್ಯರ್​​ಗೆ ಅವಕಾಶ ನೀಡಿ ಫಾರ್ಮ್​ನಲ್ಲಿಲ್ಲದ ರಹಾನೆಯನ್ನೇ ಹೊರಹಾಕಬಹುದು ಎನ್ನಲಾಗುತ್ತಿದೆ. ಒಂದು ವೇಳೆ ರಹಾನೆ ಅವಕಾಶ ನೀಡಿದರೆ ಅನಿವಾರ್ಯವಾಗಿ ಅಯ್ಯರ್​ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಬೇಕಾಗಬಹುದು.

ಇದನ್ನೂ ಓದಿ: ಭಾರತದಲ್ಲಿ 2010ರ ಬಳಿಕ ಮೊದಲ ಬಾರಿಗೆ ಸೋಲು ತಪ್ಪಿಸಿಕೊಂಡು ಡ್ರಾ ಸಾಧಿಸಿದ ಕಿವೀಸ್!

ABOUT THE AUTHOR

...view details