ಕರ್ನಾಟಕ

karnataka

ETV Bharat / sports

ಕೆ.ಎಲ್​.ರಾಹುಲ್​ ಅವರನ್ನು Vice Captain ಮಾಡಿ: ಗವಾಸ್ಕರ್ ಸಲಹೆ

ಭಾರತ ಕ್ರಿಕೆಟ್ ತಂಡದ ಉಪನಾಯಕನಾಗಿ ಕೆ.ಎಲ್. ರಾಹುಲ್ ಅವರನ್ನು ನೇಮಿಸಬೇಕೆಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ.

KL Rahul
ಕೆ.ಎಲ್​.ರಾಹುಲ್​

By

Published : Sep 17, 2021, 10:09 AM IST

ನವದೆಹಲಿ: ಟಿ-20 ವಿಶ್ವಕಪ್ ಬಳಿಕ ನಾಯಕತ್ವವನ್ನು ತ್ಯಜಿಸುವುದಾಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ ನಂತರ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ಮಧ್ಯೆ, ಭಾರತ ಕ್ರಿಕೆಟ್ ತಂಡದ ಉಪನಾಯಕನಾಗಿ ಕೆ.ಎಲ್. ರಾಹುಲ್ ಅವರನ್ನು ನೇಮಿಸಬೇಕೆಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್​​, ಟಿ-20 ಪಂದ್ಯದ ನಾಯಕನನ್ನು ಬದಲಾವಣೆ ಮಾಡುತ್ತಿರುವ ಬಿಸಿಸಿಐ ನಿರ್ಧಾರ ಸರಿಯಾಗಿದೆ. ಭಾರತ ತಂಡಕ್ಕೆ ಹೊಸ ನಾಯಕನನ್ನು ರೂಪಿಸಲು ಪ್ರಯತ್ನಿಸುತ್ತಿದ್ದರೆ, ಕೆ.ಎಲ್. ರಾಹುಲ್ ಅವರನ್ನು ಪರಿಗಣಿಸಬಹುದು. ಇಲ್ಲಿಯವರೆಗೂ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಇಂಗ್ಲೆಂಡ್‌ನಲ್ಲೂ ಅವರ ಪ್ರದರ್ಶನ ಗಮನ ಸೆಳೆದಿತ್ತು. ಐಪಿಎಲ್ ಮತ್ತು 50 ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಾಗಿ, ಅವರನ್ನು ವೈಸ್​ ಕ್ಯಾಪ್ಟನ್​ ಆಗಿ ಆಯ್ಕೆ ಮಾಡಬಹುದು ಹೇಳಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ತೋರಿದ ನಾಯಕತ್ವದ ಗುಣಕ್ಕಾಗಿ ಕರ್ನಾಟಕದ ಬ್ಯಾಟ್ಸ್‌ಮನ್‌ ಕೆ.ಎಲ್. ರಾಹುಲ್ ಅವರನ್ನು ಗವಾಸ್ಕರ್ ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಟಿ-20 ನಾಯಕತ್ವ ತೊರೆದ ಕಿಂಗ್ ಕೊಹ್ಲಿ: ಚುಟುಕು ಕ್ರಿಕೆಟ್​​ನಲ್ಲಿ ಅವರ ಸಾಧನೆ ಏನು?

ಐಪಿಎಲ್‌ನಲ್ಲಿ ಅವರು ಉತ್ತಮ ನಾಯಕತ್ವದ ಗುಣಗಳನ್ನು ತೋರಿದ್ದಾರೆ. ನಾಯಕತ್ವದ ಹೊರೆ ತನ್ನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲು ಅವರು ಬಿಡಲಿಲ್ಲ. ನಾಯಕನ ಆಯ್ಕೆ ವಿಷಯ ಬಂದಾಗ ಅವರ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ಗವಾಸ್ಕರ್ ತಿಳಿಸಿದ್ದಾರೆ.

ABOUT THE AUTHOR

...view details