ಕರ್ನಾಟಕ

karnataka

ETV Bharat / sports

ಟೆಸ್ಟ್​​ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ ಬಾಂಗ್ಲಾ ಟಿ20 ಕ್ಯಾಪ್ಟನ್​​ ಮಹ್ಮದುಲ್ಲಾ - ಬಾಂಗ್ಲಾ ಕ್ರಿಕೆಟರ್​ ಮಹ್ಮದುಲ್ಲಾ

ಬಾಂಗ್ಲಾದೇಶದ ಟಿ20 ಕ್ರಿಕೆಟ್​ ತಂಡದ ಕ್ಯಾಪ್ಟನ್​ ಮಹ್ಮದುಲ್ಲಾ ಅಂತಾರಾಷ್ಟ್ರೀಯ ಟೆಸ್ಟ್​​​ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Mahmudullah
Mahmudullah

By

Published : Nov 24, 2021, 8:50 PM IST

ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶ ಟಿ20 ಕ್ರಿಕೆಟ್​ ತಂಡದ ಕ್ಯಾಪ್ಟನ್​​ ಮಹ್ಮದುಲ್ಲಾ ಅಂತಾರಾಷ್ಟ್ರೀಯ ಟೆಸ್ಟ್​ಗೆ ವಿದಾಯ ಘೋಷಣೆ ಮಾಡಿದ್ದು, ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಮಹ್ಮದುಲ್ಲಾ, ಅಧಿಕೃತವಾಗಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ. ನನ್ನ ಚೊಚ್ಚಲ ಮತ್ತು ಕೊನೆಯ ಟೆಸ್ಟ್​​ ಪಂದ್ಯ ಎರಡರಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದೇನೆ. ಟೆಸ್ಟ್​​​ ಕ್ರಿಕೆಟ್​​ನಲ್ಲಿ ಅದ್ಭುತ ಪ್ರಯಾಣ. ನನ್ನ ಕುಟುಂಬ, ತಂಡದ ಸದಸ್ಯರು, ತರಬೇತುದಾರರು ಮತ್ತು ಬಾಂಗ್ಲಾ ಕ್ರಿಕೆಟ್​ ಬೋರ್ಡ್​​ಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಬಾಂಗ್ಲಾದೇಶದ ಪರ 50 ಟೆಸ್ಟ್​​ ಪಂದ್ಯಗಳನ್ನಾಡಿರುವ ಮಹ್ಮದುಲ್ಲಾ 5 ಶತಕ, 16 ಅರ್ಧಶತಕ ಸೇರಿದಂತೆ 2914 ರನ್​ಗಳಿಕೆ ಮಾಡಿದ್ದಾರೆ. ಇದರಲ್ಲಿ 43 ವಿಕೆಟ್‌ಗಳು ಸೇರಿವೆ. 2009ರಲ್ಲಿ ಟೆಸ್ಟ್​ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಆಲ್​ರೌಂಡರ್​​ ಮಹ್ಮದುಲ್ಲಾ 2021ರ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಕೊನೆ ಟೆಸ್ಟ್​​ ಪಂದ್ಯವನ್ನಾಡಿದ್ದಾರೆ.

ಈ ಹಿಂದೆ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ವೇಳೆ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಿದ್ದ ಮಹ್ಮದುಲ್ಲಾ, ಸರಣಿ ಮಧ್ಯದಲ್ಲೇ ಸುದೀರ್ಘ ಮಾದರಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದೀಗ ಅಧಿಕೃತವಾಗಿ ತಮ್ಮ ನಿರ್ಧಾರ ಬಹಿರಂಗಗೊಳಿಸಿದ್ದಾರೆ.

ಜಿಂಬಾಬ್ವೆ ವಿರುದ್ಧದ ಟೆಸ್ಟ್​ ಸರಣಿ ವೇಳೆ ಮಹ್ಮದುಲ್ಲಾ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡುವ ನಿರ್ಧಾರ ಮಾಡಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್​, ಮಹ್ಮದುಲ್ಲಾ ದಿಢೀರ್​ ನಿರ್ಧಾರ ಬಾಂಗ್ಲಾದೇಶ ತಂಡಕ್ಕೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದಿದ್ದರು.

ABOUT THE AUTHOR

...view details