ಹೈದರಾಬಾದ್: ಐಪಿಎಲ್ 2021ರ ಉಳಿದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಎಂ ಎಸ್ ಧೋನಿ ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ದುಬೈನಲ್ಲಿ ಅಭ್ಯಾಸ ಆರಂಭಿಸಿರುವ ಧೋನಿ, ಟೂರ್ನಿಗೂ ಮುನ್ನವೇ ಮಿಸ್ಟರ್ ಕೂಲ್ ಕ್ಯಾಪ್ಟನ್ ತಮ್ಮ ನ್ಯೂ ಲುಕ್ನಿಂದಾಗಿ ಸಖತ್ ಸದ್ದು ಮಾಡುತ್ತಿದ್ದಾರೆ.
ಇತ್ತೀಚಿಗೆ ಧೋನಿ ಜಾಹೀರಾತಿನಲ್ಲಿ ಅಭಿನಿಯಸಿದ್ದು, ಈ ಆ್ಯಡ್ ಎಂಎಸ್ಡಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ಬಹಳಷ್ಟು ಜಾಹೀರಾತುಗಳಲ್ಲಿ ವಿಭಿನ್ನವಾಗಿ ಕಾಣಿಸಿ ಗಮನ ಸೆಳೆದಿದ್ದ ಮಿಸ್ಟರ್ ಕೂಲ್, ಈ ಬಾರಿಯೂ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಜಾಹೀರಾತಿನಲ್ಲಿ ಧೋನಿ ಯಾವ ನಟನಿಗೂ ಕಮ್ಮಿಯಿಲ್ಲ ಎಂಬಂತಿದ್ದಾರೆ. ಈ ಜಾಹೀರಾತನ್ನ ಸ್ಟಾರ್ ಸ್ಪೋರ್ಟ್ಸ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿವೆ.
ಈ ಜಾಹೀರಾತಿನಲ್ಲಿ ದ್ವಿತೀಯ ಹಂತದ ಐಪಿಎಲ್‌ನಲ್ಲಿ ಡ್ರಾಮಾ, ಕ್ಲೈಮ್ಯಾಕ್ಸ್, ಸಸ್ಪೆನ್ಸ್ ಎಲ್ಲವೂ ಇರಲಿದೆ. ಹಿಟ್‌ಮ್ಯಾನ್, ಗಬ್ಬರ್, ಹೆಲಿಕ್ಯಾಪ್ಟರ್ ಶಾಟ್ ಎಲ್ಲವೂ ಈ ಬಾರಿ ಗಮನ ಸೆಳೆಯಲಿದೆ. ಲೀಗ್ ಇದೆ, ಪ್ಲೇ ಆಫ್ ಇದೆ, ಸೂಪರ್ ಓವರ್ ಕೂಡ ಇದೆ.
ಆರಂಭಿಕವಾಗಿ ಅರ್ಧ ನಿಲ್ಲಿಸಲ್ಪಟ್ಟರೇನಂತೆ ಮತ್ತೊಂದು ಅರ್ಧ ಶುರುವಾಗಲಿದೆ' ಎಂಬ ಡೈಲಾಗ್ ಮೂಲಕ ಧೋನಿ ದ್ವಿತೀಯ ಹಂತದ ಐಪಿಎಲ್ ಬಗ್ಗೆ ಈ ಜಾಹೀರಾತಿನಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುವ ಧೋನಿ, ಈಗಾಗಲೇ ತಂಡದ ಜೊತೆ ಯುಎಇಗೆ ತೆರಳಿದ್ದಾರೆ. ಸಿಎಸ್‌ಕೆ ಈಗಾಗಲೇ ಅಭ್ಯಾಸ ಆರಂಭಿಸಿದೆ. ಸದ್ಯದ ಐಪಿಎಲ್ ಅಂಕಪಟ್ಟಿಯಲ್ಲಿ ಸಿಎಸ್‌ಕೆ ದ್ವಿತೀಯ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ಚೆನ್ನೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ನಂತರ ದ್ವಿತೀಯ ಸ್ಥಾನದಲ್ಲಿದೆ.
ಇದನ್ನೂ ಓದಿ : ಆರ್‌ಸಿಬಿಗೆ ಶಾಕ್: ಮುಂದುವರಿದ ಭಾಗದ ಐಪಿಎಲ್‌ಗೆ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ ಅಲಭ್ಯ?