ಕರ್ನಾಟಕ

karnataka

ETV Bharat / sports

ಕ್ರಿಕೆಟ್​ನಿಂದ ನಿವೃತ್ತಿಯಾದರೂ ಧೋನಿ ಆದಾಯ ಹೆಚ್ಚು: ಆರು ತಿಂಗಳಲ್ಲಿ ಕಟ್ಟಿದ ತೆರಿಗೆ ಎಷ್ಟು? - ಧೋನಿ ಆದಾಯ

2022ರ ಏಪ್ರಿಲ್‌ನಿಂದ ಅಕ್ಟೋಬರ್​ವರೆಗೆ ಕ್ಯಾಪನ್​ ಕೂಲ್​ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಆದಾಯ ತೆರಿಗೆ ಇಲಾಖೆಯಲ್ಲಿ ಮುಂಗಡ ತೆರಿಗೆಯಾಗಿ 17 ಕೋಟಿ ರೂ.ಗಳನ್ನು ಠೇವಣಿ ಮಾಡಿದ್ದಾರೆ. ಜಾರ್ಖಂಡ್​ನಲ್ಲಿ ಧೋನಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ.

mahendra-singh-dhoni-income-increased-by-30-percent-in-one-year-17-crore-tax-paid
ಕ್ರಿಕೆಟ್​ನಿಂದ ನಿವೃತ್ತಿಯಾದರೂ ಧೋನಿ ಆದಾಯಕ್ಕಿಲ್ಲ ಬ್ರೇಕ್

By

Published : Nov 9, 2022, 7:45 PM IST

Updated : Nov 10, 2022, 12:32 PM IST

ರಾಂಚಿ (ಜಾರ್ಖಂಡ್​): ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರವೂ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ವೈಯಕ್ತಿಕ ಆದಾಯವು ನಿರಂತರವಾಗಿ ಹೆಚ್ಚುತ್ತಿದೆ. ವ್ಯಾಪಾರ ಜಗತ್ತಿನಲ್ಲಿ ಯಶಸ್ಸಿನ ಹೊಸ ಮೆಟ್ಟಿಲುಗಳನ್ನು ಏರುತ್ತಿರುವ ಧೋನಿ, ಮುಂಗಡ ತೆರಿಗೆಯಾಗಿ 17 ಕೋಟಿ ರೂ.ಗಳನ್ನು ಠೇವಣಿ ಮಾಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅಂದರೆ 2022ರ ಏಪ್ರಿಲ್‌ನಿಂದ ಅಕ್ಟೋಬರ್​ವರೆಗೆ ಮಹೇಂದ್ರ ಸಿಂಗ್ ಧೋನಿ, ಆದಾಯ ತೆರಿಗೆ ಇಲಾಖೆಯಲ್ಲಿ ಮುಂಗಡ ತೆರಿಗೆಯಾಗಿ 17 ಕೋಟಿ ರೂ.ಗಳನ್ನು ಠೇವಣಿ ಮಾಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ಮುಂಗಡ ತೆರಿಗೆಯಾಗಿ ಧೋನಿ 13 ಕೋಟಿ ರೂ. ಠೇವಣಿ ಮಾಡಿದ್ದರು.

ಇದನ್ನೂ ಓದಿ:ಇವು ಧೋನಿ ಬಳಿಯಿರುವ ಐಷಾರಾಮಿ ವಸ್ತುಗಳು

2020ರ ಆಗಸ್ಟ್ 15ರಿಂದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಂದ ದೂರವಿದ್ದರೂ ಅವರ ಆದಾಯದಲ್ಲಿ ಇಳಿಮುಖವಾಗಿಲ್ಲ. ಆದಾಯ ತೆರಿಗೆ ಅಂಕಿ - ಅಂಶಗಳ ಪ್ರಕಾರ, ಧೋನಿ 2017-18ರಲ್ಲಿ 12.17 ಕೋಟಿ ಮತ್ತು 2016-17ರಲ್ಲಿ 10.93 ಕೋಟಿ ತೆರಿಗೆ ಪಾವತಿಸಿದ್ದರು. ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದಾಗಿನಿಂದ ನಿರಂತರವಾಗಿ ಜಾರ್ಖಂಡ್‌ನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ.

ಧೋನಿ 'ಸೆವೆನ್' ಎಂಬ ತಮ್ಮದೇ ಆದ ಕ್ರೀಡಾ ಉಡುಪು ಬ್ರಾಂಡ್ ಪ್ರಾರಂಭಿಸಿದ್ದಾರೆ. ಅಲ್ಲದೆ, ಅನೇಕ ಪ್ರಸಿದ್ಧ ಕಂಪನಿಗಳ ಜಾಹೀರಾತುಗಳಲ್ಲಿ ಈಗಲೂ ಸಹ ಮಾಹಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾವಯವ ಕೃಷಿಯಲ್ಲಿ ಧೋನಿ ಹೂಡಿಕೆ ಮಾಡಿರುವ ಧೋನಿ, ರಾಂಚಿಯಲ್ಲಿ ಸುಮಾರು 43 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.

'ಧೋನಿ ಕ್ರಿಕೆಟ್‌ನಿಂದ ನಿವೃತ್ತರಾದ ನಂತರವೂ ಅವರ ಆರ್ಥಿಕಮಟ್ಟ ಕುಸಿದಿಲ್ಲ, ಬದಲಿಗೆ ಅವರು ದಾಖಲೆ ಮಾಡುತ್ತಿದ್ದಾರೆ ಎಂದಿರುವ ಜಾರ್ಖಂಡ್​​ ರಾಜ್ಯ ಹಣಕಾಸು ಸಚಿವ ರಾಮೇಶ್ವರ ಓರಾನ್, ಧೋನಿ ಜಾರ್ಖಂಡ್‌ನ ಬಡ ಜನರ ಶ್ರೇಯೋಭಿವೃದ್ಧಿಗೆ ತಮ್ಮ ಹಣ ಬಳಸಬೇಕು. ಯುವಕರು ಶಿಕ್ಷಣ ಪಡೆದರೆ ರಾಜ್ಯ ಹಾಗೂ ದೇಶವು ಅಭಿವೃದ್ಧಿಗೊಳ್ಳುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಸಿನಿಮಾ ರಂಗದಲ್ಲಿ ಇನ್ನು ಧೋನಿ ಎಂಟರ್​ಟೈನ್​ಮೆಂಟ್

Last Updated : Nov 10, 2022, 12:32 PM IST

ABOUT THE AUTHOR

...view details