ರಾಂಚಿ(ಜಾರ್ಖಂಡ್): ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೊಂದಿರುವ ಸಂಪತ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಅವರು ಈಗಾಗಲೇ 130 ಕೋಟಿ ರೂಪಾಯಿಗೂ ಅಧಿಕ ಆಸ್ತಿಯ ವಾರಸುದಾರ ಎಂಬ ಮಾಹಿತಿ ದೊರೆತಿದೆ. 2021-22ನೇ ಸಾಲಿನಲ್ಲಿ ಧೋನಿ ದಾಖಲೆಯ 38 ಕೋಟಿ ರೂ. ತೆರಿಗೆ ಕಟ್ಟುವ ಮೂಲಕ ಜಾರ್ಖಂಡ್ನಲ್ಲಿ ಅತಿ ಹೆಚ್ಚಿನ ತೆರಿಗೆ ಪಾವತಿದಾರ ಎನಿಸಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕ್ರಿಕೆಟ್ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ, ಆದಾಯ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ. 30ರಷ್ಟು ಏರಿಕೆಯಾಗಿದೆ. ಮುಂಗಡ ತೆರಿಗೆ ರೂಪದಲ್ಲಿ 2021-22ನೇ ಸಾಲಿಗೆ 38 ಕೋಟಿ ರೂ. ಪಾವತಿ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಆರಂಭ ಮಾಡಿದಾಗಿನಿಂದಲೂ ಪ್ರತಿ ವರ್ಷ ಹೆಚ್ಚು ಹೆಚ್ಚು ತೆರಿಗೆ ಪಾವತಿ ಮಾಡ್ತಿದ್ದಾರೆ. 2018-19 ಹಾಗೂ 2019-20ರಲ್ಲಿ 28 ಕೋಟಿ ರೂ. ಪಾವತಿ ಮಾಡಿದ್ದ ಈ ಪ್ಲೇಯರ್ 2017-18ರಲ್ಲಿ 12.17 ಕೋಟಿ ರೂ. ಹಾಗೂ 2016-17ರಲ್ಲಿ 10.93 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಕಳೆದ ವರ್ಷ 30 ಕೋಟಿ ರೂ. ತೆರಿಗೆ ಕಟ್ಟಿದ್ದರು.