ಕರ್ನಾಟಕ

karnataka

ETV Bharat / sports

U19 ವಿಶ್ವಕಪ್ ​ವಿಜೇತ ತಂಡದ ಆಟಗಾರನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬಿಸಿಸಿಐಗೆ ಪತ್ರ - ರಾಜವರ್ಧನ್ ಹಂಗರ್ಗೆಕರ್ ಬಿಸಿಸಿಐ

ರಾಜವರ್ಧನ್ ಹಂಗರ್ಗೆಕರ್ ಅವರ ನಡವಳಿಕೆಯು ಕ್ರೀಡಾ ಸಮಗ್ರತೆ ಮತ್ತು ನೈತಿಕತೆಗೆ ವಿರುದ್ಧವಾಗಿದೆ. ಇದು ನ್ಯಾಯೋಚಿತ ಆಟವನ್ನು ಕಸಿದುಕೊಳ್ಳುತ್ತದೆ ಮತ್ತು ಇದರಿಂದ ರಾಷ್ಟ್ರದ ಖ್ಯಾತಿಗೆ ಹಾನಿಯಾಗುತ್ತದೆ. ಆದ್ದರಿಂದ, ಕಾನೂನಿನ ಪ್ರಕಾರ ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿಮ್ಮನ್ನು ವಿನಂತಿಸಿಕೊಳ್ಳುತ್ತೇನೆ" ಎಂದು ಬಕೋರಿಯಾ ಪತ್ರದಲ್ಲಿ ತಿಳಿಸಿದ್ದಾರೆ..

Hangargekar for age fraud
ರಾಜವರ್ಧನ್ ಹಂಗರ್ಗೆಕರ್​

By

Published : Feb 19, 2022, 6:57 PM IST

ಮುಂಬೈ :ವಯಸ್ಸಿನಸುಳ್ಳು ಮಾಹಿತಿ ನೀಡಿ ವಂಚನೆ ಮಾಡಿ ವಿಶ್ವಕಪ್ ಗೆದ್ದ ಭಾರತ ಅಂಡರ್ 19 ತಂಡದ ಆಲ್​ರೌಂಡರ್​ ರಾಜವರ್ಧನ್​ ಹಂಗರ್ಗೆಕರ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಕ್ರೀಡಾ ಇಲಾಖೆಯ ಕಮಿಷನರ್​ ಬಿಸಿಸಿಐಗೆ ಪತ್ರ ಬರೆದಿದ್ದಾರೆ.

ಮಹಾರಾಷ್ಟ್ರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಮಿಷನರ್‌ ಓಂಪ್ರಕಾಶ್‌ ಬಕೋರಿಯಾ ಫೆಬ್ರವರಿ 8ರಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪತ್ರ ಬರೆದಿದೆ.

ವೇಗಿ ಅಂಡರ್-19 ವಿಶ್ವಕಪ್​ನಲ್ಲಿ ಆಡುವುದಕ್ಕಾಗಿ ತಮ್ಮ ಜನ್ಮದಿನಾಂಕವನ್ನು ಜನವರಿ 10, 2001ರಿಂದ ನವೆಂಬರ್ 10, 2002ಕ್ಕೆ ಅಕ್ರಮವಾಗಿ ಬದಲಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜವರ್ಧನ್ ಹಂಗರ್ಗೆಕರ್ ಅವರ ನಡವಳಿಕೆಯು ಕ್ರೀಡಾ ಸಮಗ್ರತೆ ಮತ್ತು ನೈತಿಕತೆಗೆ ವಿರುದ್ಧವಾಗಿದೆ. ಇದು ನ್ಯಾಯೋಚಿತ ಆಟವನ್ನು ಕಸಿದುಕೊಳ್ಳುತ್ತದೆ ಮತ್ತು ಇದರಿಂದ ರಾಷ್ಟ್ರದ ಖ್ಯಾತಿಗೆ ಹಾನಿಯಾಗುತ್ತದೆ.

ಆದ್ದರಿಂದ, ಕಾನೂನಿನ ಪ್ರಕಾರ ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿಮ್ಮನ್ನು ವಿನಂತಿಸಿಕೊಳ್ಳುತ್ತೇನೆ" ಎಂದು ಬಕೋರಿಯಾ ಪತ್ರದಲ್ಲಿ ತಿಳಿಸಿದ್ದಾರೆ. ಒಸ್ಮನಾಬಾದ್​​ನ ತೆರ್ನಾ ಪಬ್ಲಿಕ್‌ ಶಾಲೆಯಲ್ಲಿ ರಾಜವರ್ಧನ್‌ 1ನೇ ತರಗತಿಗೆ ಸೇರಿದಾಗ ಜನ್ಮ ದಿನಾಂಕವನ್ನು ಜನವರಿ 10,2001 ಎಂದು ನಮೂದಿಸಲಾಗಿದೆ.

ಶಾಲಾ ದಾಖಲೆಗಳ ಪ್ರಕಾರ ಆತ 7ನೇ ತರಗತಿಯವರೆಗೂ ಜನವರಿ 10, 2001 ಅವರ ಜನ್ಮದಿನಾಂಕವಾಗಿಯೇ ಇದೆ. ಆದರೆ, 8ನೇ ತರಗತಿಗೆ ಮರು ಪ್ರವೇಶ ಪಡೆಯುವ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು ಆತನ ಜನ್ಮ ದಿನಾಂಕವನ್ನು 2002ರ ನವೆಂಬರ್‌ 10 ಎಂದು ಅನಧಿಕೃತವಾಗಿ ತಿದ್ದುಪಡಿ ಮಾಡಿದ್ದಾರೆ.

ಒಂದು ವೇಳೆ ಮುಖ್ಯಶಿಕ್ಷಕರು ಜನ್ಮದಿನಾಂಕವನ್ನು ತಿದ್ದುಪಡಿ ಮಾಡಬೇಕಾದರೆ, ಜಿಲ್ಲೆಯ ಶಿಕ್ಷಣಾಧಿಕಾರಿಗಳ ಅನುಮತಿ ಪಡೆಯಬೇಕು. ಆದರೆ, ಈ ವಿಚಾರದಲ್ಲಿ ಅವರು ಯಾವುದೇ ಅನುಮತಿ ಪಡೆಯದೇ ರಾಜವರ್ಧನ್​ ಹಂಗರ್ಗೆಕರ್​ ಜನ್ಮದಿನಾಂಕವನ್ನು ತಿದ್ದುಪಡಿ ಮಾಡಿದ್ದಾರೆ.

ಇಲ್ಲಿ ಅಧಿಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ ಮತ್ತು ಸರ್ಕಾರಿ ದಾಖಲೆಗಳಲ್ಲಿ ವಂಚನೆ ಮತ್ತು ಫೋರ್ಜರಿ ಮಾಡಲಾಗಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ವಿವರಿಸಿದ್ದಾರೆ.

ಈ ಹಿಂದೆ 2018ರ ವಿಶ್ವಕಪ್​ ವಿಜೇತ ತಂಡದ ಮಂಜೋತ್​ ಕಾಲ್ರಾ ಅವರು ಕೂಡ ವಯಸ್ಸಿನ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ 2 ವರ್ಷ ನಿಷೇಧಕ್ಕೆ ಒಳಗಾಗಿದ್ದರು. ಅಂಡರ್‌ 19 ವಿಶ್ವಕಪ್​ನಲ್ಲಿ ರಾಜವರ್ಧನ್​ ಆಡಿದ್ದ 6 ಪಂದ್ಯಗಳಲ್ಲಿ ಐದು ವಿಕೆಟ್‌ ಮತ್ತು 52 ರನ್‌ ಗಳಿಸಿದ್ದರು. ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು 1.50 ಕೋಟಿ ರೂ. ನೀಡಿ ಸಿಎಸ್​ಕೆ ಖರೀದಿಸಿತ್ತು.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿ: ಪೂಜಾರ, ರಹಾನೆ ಸಹಿತ ನಾಲ್ವರನ್ನು ತಂಡದಿಂದ ಕೈಬಿಟ್ಟ ಆಯ್ಕೆ ಸಮಿತಿ

ABOUT THE AUTHOR

...view details