ಬೆಂಗಳೂರು:ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಮೊದಲ ಬಾರಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದ ಶಿವಮೊಗ್ಗ ಸ್ಟ್ರೈಕರ್ಸ್ ತಂಡ ಇಂದು ಮಂಗಳೂರು ಯುನೈಟೆಡ್ ವಿರುದ್ಧ 8 ವಿಕೆಟ್ ಅಂತರದ ಜಯ ಗಳಿಸಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್, 137 ರನ್‌ಗಳ ಜಯದ ಗುರಿಯನ್ನು ಇನ್ನೂ 46 ಎಸೆತಗಳು ಬಾಕಿ ಇರುವಾಗಲೇ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು.
ಜವಾಬ್ದಾರಿಯುತ ಆಟ ಪ್ರದರ್ಶಿಸಿದ ನಾಯಕ ಕೃಷ್ಣಪ್ಪ ಗೌತಮ್ (72) ಹಾಗೂ ಸ್ಟಾಲಿನ್ ಹೂವರ್ (53*) ಆರ್ಕಷಕ ಅರ್ಧ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಶಿವಮೊಗ್ಗ ಸ್ಟ್ರೈಕರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ನಾಯಕ ಕೃಷ್ಣಪ್ಪ ಗೌತಮ್ ಬೌಲಿಂಗ್ ದಾಳಿಗೆ ಸಿಲುಕಿದ ಮಂಗಳೂರು ಯುನೈಟೆಡ್ ಕೇವಲ 136 ರನ್ ಪೇರಿಸಿತು.
ಮಂಗಳೂರು ಯುನೈಟೆಡ್ ಪರ ನಿಕಿನ್ ಜೋಸ್ (38) ಹಾಗೂ ಅಭಿನವ್ ಮನೋಹರ್ (36) ಹೊರತುಪಡಿಸಿದರೆ ಉಳಿದ ಆಟಗಾರರು ಹೆಚ್ಚಿನ ರನ್ ಗಳಿಸುವಲ್ಲಿ ವಿಫಲರಾದರು. ನಾಯಕ ರವಿಕುಮಾರ್ ಸಮರ್ಥ್ ಕೇವಲ 12 ರನ್ ಗಳಿಸಿ ಕೆಸಿ ಕಾರಿಯಪ್ಪಗೆ ವಿಕೆಟ್ ಒಪ್ಪಿಸಿದರು. ರಘವೀರ್ ಪಾವಲೂರುಗೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಿದರೂ ಆ ಪ್ರಯೋಗ ಮಂಗಳೂರು ಯುನೈಟೆಡ್‌ಗೆ ಯಶಸ್ಸು ನೀಡಲಿಲ್ಲ.