ಬೆಂಗಳೂರು:ಲವ್ನೀತ್ ಸಿಸೋಡಿಯಾ (62) ಹಾಗೂ ಬಿಯು ಶಿವಕುಮಾರ್ (61*) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಟೂರ್ನಿಯ ಇಂದಿನ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. 147 ರನ್ ಜಯದ ಗುರಿ ಹೊತ್ತ ಟೈಗರ್ಸ್ ಇನ್ನೂ 16 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿತು.
ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಶಿವಮೊಗ್ಗಕ್ಕೆ ಶರತ್ ಹಾಗೂ ಹೂವರ್ ಮೊದಲ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿದರು. ಶರತ್ 36 ಹಾಗೂ ಸ್ಟಾಲಿನ್ ಹೂವರ್ 38 ರನ್ ಗಳಿಸಿದರು. ಆದರೆ ಈ ಇಬ್ಬರೂ ನಿರ್ಗಮಿಸುತ್ತಿದ್ದಂತೆ ಶಿವಮೊಗ್ಗದ ರನ್ ಗಳಿಕೆಗೆ ಕಡಿವಾಣ ಬಿತ್ತು. ಬೌಲರ್ಗಳಾದ ಆನಂದ್ ಮತ್ತು ಶಿವಕುಮಾರ್ ಆರಂಭಿಕ ಆಟಗಾರರ ವಿಕೆಟ್ ಪಡೆದು ಹುಬ್ಬಳ್ಳಿ ತಂಡಕ್ಕೆ ಮೇಲುಗೈ ಒದಗಿಸಿದರು.
ಇದನ್ನೂ ಓದಿ:ರಾಷ್ಟ್ರಗೀತೆ ನುಡಿಸುವ ವೇಳೆ ಮೆಚ್ಚುಗೆ ಗಳಿಸಿದ ಕ್ರಿಕೆಟಿಗ ಕೆ ಎಲ್ ರಾಹುಲ್ ನಡೆ