ಕರ್ನಾಟಕ

karnataka

ETV Bharat / sports

ಕ್ರಿಕೆಟ್ ಅಕಾಡೆಮಿ ಸ್ಥಾಪನೆ ವಿಳಂಬ.. ಸುನಿಲ್ ಗವಾಸ್ಕರ್ ವಿರುದ್ಧ ಸಚಿವರ ಅಸಮಾಧಾನ

1986ರಲ್ಲಿ ಗವಾಸ್ಕರ್ ಅವರ ಟ್ರಸ್ಟ್​ಗೆ ಕ್ರಿಕೆಟ್ ಅಕಾಡೆಮಿ ಸ್ಥಾಪನೆ ಉದ್ದೇಶದಿಂದ ಸರ್ಕಾರ ಮಂಜೂರು ಮಾಡಿದ್ದ ಜಾಗ ಅಕಾಡೆಮಿ ಸ್ಥಾಪನೆಗೆ ಬಳಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಅಕಾಡೆಮಿ ಸ್ಥಾಪನೆಯಲ್ಲಿ ಯಾವುದೇ ಪ್ರಗತಿ ಕಾಣದ ಹಿನ್ನೆಲೆ ವಸತಿ ಸಚಿವರು ಮಾಜಿ ಆಟಗಾರನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

maha-minister-miffed-with-gavaskar-over-non-utilisation-of-mumbai-plot
ಸುನಿಲ್ ಗವಾಸ್ಕರ್

By

Published : Sep 16, 2021, 8:08 AM IST

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್​​ಗೆ ಮುಂಬೈನಲ್ಲಿ ನೀಡಲಾಗಿರುವ ಸರ್ಕಾರಿ ಜಾಗವನ್ನ ಕ್ರಿಕೆಟ್​ ಅಕಾಡೆಮಿ ಸ್ಥಾಪಿಸಲು ಬಳಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವ್ಹಾದ್​ ಸೂಚಿಸಿದ್ದಾರೆ.

ಭೂಮಿ ಹಂಚಿಕೆಯಾಗಿ 30 ವರ್ಷ ಕಳೆದರೂ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲಾಗಿಲ್ಲ. ಸರ್ಕಾರಿ ಜಾಗವನ್ನು ಅವರು ಬಳಕೆ ಮಾಡಿಲ್ಲ ಎಂದು ಗವಾಸ್ಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬಾಂದ್ರಾದಲ್ಲಿರುವ 2 ಸಾವಿರ ಚದರ ಮೀಟರ್ ಸರ್ಕಾರಿ ಭೂಮಿಯ ಹಂಚಿಕೆಯನ್ನ ಬಹುತೇಕ ರದ್ದುಗೊಳಿಸುವ ನಿರ್ಧಾರಕ್ಕೆ ನಾನು ಬಂದಿದ್ದೆ. ಇಷ್ಟು ದೊಡ್ಡ ಜಾಗ ಮತ್ತು ನಗರದ ಹೃದಯಭಾಗದಲ್ಲಿನ ಸ್ಥಳದಲ್ಲಿ ಅಕಾಡೆಮಿ ಸ್ಥಾಪನೆಯಾಗದೇ ಜಾಗ ಹಾಗೆ ಉಳಿದಿದೆ. ಗವಾಸ್ಕರ್ ಅವರು ಭಾರತೀಯ ಕ್ರಿಕೆಟ್​​ಗೆ ನೀಡಿದ ಕೊಡುಗೆ ಹಾಗೂ ಅವರ ಸಾಧನೆಗಳ ನೋಡಿ ಈ ಭೂಮಿ ಹಂಚಿಕೆಯನ್ನ ರದ್ದುಗೊಳಿಸದೇ ಹಾಗೆ ಉಳಿಸಿಕೊಂಡಿದ್ದೇನೆ ಎಂದಿದ್ದಾರೆ.

​ಕ್ರಿಕೆಟ್​ ಅಕಾಡೆಮಿ ಸ್ಥಾಪನೆ ಉದ್ದೇಶದಿಂದಲೇ ಅವರಿಗೆ ಭೂಮಿ ಹಂಚಿಕೆ ಮಾಡಲಾಗಿತ್ತು. ಅದಕ್ಕಾಗಿಯೇ ಆ ಜಾಗ ಬಳಸಿಕೊಳ್ಳಬೇಕು. ನಾನು ಆ ಜಾಗವನ್ನ ರಾಜ್ಯ ವಸತಿ ಸಂಸ್ಥೆಯ ಸ್ವಾದೀನಕ್ಕೆ ಪಡೆದು ಬೇರೆ ಉದ್ದೇಶಕ್ಕೆ ಬಳಸಲು ಸಹ ಸಿದ್ಧನಿದ್ದೇನೆ. ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆದು ಈ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡಲಿದ್ದೇವೆ ಎಂದಿದ್ದಾರೆ.

ಆ ಜಾಗದಲ್ಲಿ ಸುನಿಲ್ ಗವಾಸ್ಕರ್ ಇಲ್ಲದಿದ್ದರೆ ವಸತಿ ಸಚಿವನಾಗಿ ನಾನು ಆ ಮಂಜೂರಾತಿಯನ್ನ ರದ್ದುಗೊಳಿಸುತ್ತಿದ್ದೆ ಎಂದು ಸಚಿವ ಜಿತೇಂದ್ರ ಅವ್ಹಾದ್ ಟ್ವೀಟ್ ಮಾಡಿದ್ದಾರೆ. ಎಂಹೆಚ್​​ಎಡಿಎ (ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ) 1986ರಲ್ಲಿ ಗವಾಸ್ಕರ್ ಅವರು ಕ್ರಿಕೆಟ್ ಅಕಾಡೆಮಿಗಾಗಿ ಆರಂಭಿಸಿದ ಟ್ರಸ್ಟ್‌ಗೆ ಭೂಮಿಯನ್ನು ಗುತ್ತಿಗೆ ನೀಡಿತ್ತು, ಆದರೆ ಯೋಜನೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ.

ಓದಿ: 10 ಸಿಕ್ಸರ್‌​, 7 ಬೌಂಡರಿ, 46 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಎಬಿಡಿ: ವಿಡಿಯೋ ನೋಡಿ..

ABOUT THE AUTHOR

...view details