ಉಜ್ಜಯಿನಿ(ಮಧ್ಯಪ್ರದೇಶ): ಇಂದು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಜೊತೆಗೆ ಉಜ್ಜಯಿನಿಯಲ್ಲಿರುವ ವಿಶ್ವವಿಖ್ಯಾತ ಬಾಬಾ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಬಾಬಾ ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿ, ದರ್ಶನ ಪಡೆದರು.
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ತಮ್ಮ ಪತ್ನಿ ಮತ್ತು ಬಾಲಿವುಡ್ ನಟಿಯಾಗಿರುವ ಅನುಷ್ಕಾ ಶರ್ಮಾ ಜೊತೆ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ಇಬ್ಬರೂ ಬೆಳಗಿನ ಜಾವ 3 ಗಂಟೆಗೆ ಮಹಾಕಾಳ್ ಭಸ್ಮ ಆರತಿಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಬಳಿಕ ದೇವರ ಆಶೀರ್ವಾದ ಪಡೆದರು. ದರ್ಶನದ ನಂತರ ಪತಿ-ಪತ್ನಿ ಇಬ್ಬರೂ ನಂದಿ ಸಭಾಂಗಣದಲ್ಲಿ ಕುಳಿತು ಮಹಾಕಾಳನನ್ನು ಆರಾಧಿಸಿದರು. ನಂತರ ಗರ್ಭಕ್ಕೆ ತೆರಳಿ ಮಹಾಕಾಳನ ಆಶೀರ್ವಾದ ಪಡೆದರು. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಇಂದೋರ್ಗೆ ಆಗಮಿಸಿದ್ದರು. ಕಳೆದ ದಿನ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಸೋಲಿನ ಬಳಿಕ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಬಾಬಾ ಮಹಾಕಾಳ್ಗೆ ಭೇಟಿ ನೀಡಿದ ವಿರುಷ್ಕಾ:ಭಾರತ ತಂಡ ಮತ್ತು ಆಸ್ಟ್ರೇಲಿಯಾ ನಡುವೆ 4 ಟೆಸ್ಟ್ ಪಂದ್ಯಗಳ ಸರಣಿಯನ್ನು ನಡೆಸಲಾಗುತ್ತಿದ್ದು, ಅದರ ಮೂರನೇ ಟೆಸ್ಟ್ ಪಂದ್ಯವು ಇಂದೋರ್‌ನಲ್ಲಿ ಮಾರ್ಚ್ 1 ರಿಂದ ಪ್ರಾರಂಭವಾಗಿ ಮಾರ್ಚ್ 3ರಂದು ಮುಕ್ತಾಯಗೊಂಡಿತು. ಈಗಾಗಲೇ ಸರಣಿಯಲ್ಲಿ ಭಾರತ ತಂಡ 2-1 ಮುನ್ನಡೆಯಲ್ಲಿದೆ. ಪಂದ್ಯ ಮುಗಿದ ಬಳಿಕ ಅನೇಕ ಆಟಗಾರರು ತಮ್ಮ ಪತ್ನಿಯರೊಂದಿಗೆ ಬಾಬಾ ಮಹಾಕಾಳೇಶ್ವರ ದರ್ಶನ ಪಡೆಯಲು ಬಂದಿದ್ದರು. ಇದರಲ್ಲಿ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ದಂಪತಿ ಸಹ ಶನಿವಾರ ಭಾಗವಹಿಸಿದ್ದರು.
ಶನಿವಾರ ಬೆಳಗ್ಗೆ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಜೊತೆಯಾಗಿ ಬಾಬಾ ಮಹಾಕಾಳೇಶ್ವರನ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಆಗಮಿಸಿದ್ದರು. ಅಲ್ಲಿ ಅನುಷ್ಕಾ ಶರ್ಮಾ ಸರಳವಾದ ಸೀರೆಯನ್ನು ಧರಿಸಿದ್ದರು ಮತ್ತು ವಿರಾಟ್ ಕೊಹ್ಲಿ ಧೋತಿ, ಕೊರಳಲ್ಲಿ ರುದ್ರಾಕ್ಷಿಯ ಮಾಲೆ ಧರಿಸಿದ್ದರು. ಈ ಸಮಯದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ನಂದಿಹಾಲ್‌ನಲ್ಲಿ ಕುಳಿತು ಭಗವಾನ್ ಮಹಾಕಾಲ್ ಭಸ್ಮ ಆರತಿಯನ್ನು ಆನಂದಿಸಿದರು. ಅಲ್ಲಿ ಅವರು ಬಾಬಾ ಮಹಾಕಾಳ್ ಬಳಿ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.