ಹೈದರಾಬಾದ್:ಟೀಂ ಇಂಡಿಯಾ ಸದ್ಯ ಎಲ್ಲ ಮೂರು ಮಾದರಿಯ ಕ್ರಿಕೆಟ್ ರ್ಯಾಂಕಿಂಗ್ನಲ್ಲಿಅಗ್ರ 10ರಲ್ಲಿದ್ದು ಬಲಿಷ್ಠ ತಂಡವಾಗಿದೆ. ಅದರಲ್ಲೂ ಟಿ-20 ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ ಭಾರತ. ಆದರೇ, ಮೊನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ T-20 ಸರಣಿಯ ಮೊದಲ ಪಂದ್ಯದಲ್ಲಿ ಸಾಧಾರಣ ಗುರಿಯನ್ನು ಚೇಸ್ ಮಾಡುವಲ್ಲಿ ತಂಡ ವಿಫಲವಾಗಿ 4 ರನ್ಗಳಿಂದ ಸೋಲು ಕಂಡಿತ್ತು. ಹೀಗೆ ಅಲ್ಪ ಮೊತ್ತದ ಗುರಿಯೊಂದಿಗೆ ಬಲಿಷ್ಠ ಭಾರತದ ಎದುರು ಗೆದ್ದಿರುವ ತಂಡಗಳು ಈ ಕೆಳಗಿವೆ.
ಭಾರತ vs ನ್ಯೂಜಿಲ್ಯಾಂಡ್;2016ರಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತ 47 ರನ್ಗಳ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 126 ರನ್ಗಳ ಸಾಧರಣ ಗುರಿಯನ್ನು ನೀಡಿತ್ತು. ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಭಾರತ 79 ರನ್ಗಳಿಗೆ ಸರ್ವ ಪತನ ಕಂಡಿತ್ತು. ಈ ಮೂಲಕ ಅಲ್ಪಮೊತ್ತದ ಗುರಿಯೊಂದಿಗೆ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿತ್ತು.
ಭಾರತ vs ದಕ್ಷಿಣ ಆಫ್ರಿಕಾ :2009ರಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 12ರನ್ಗಳ ಜಯಗಳಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಹರಿಣಗಳು 130 ರನ್ಗಳ ಸಾಧರಣ ಗುರಿಯನ್ನು ನೀಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ 118ರನ್ಗಳಿಸಿ 12 ರನ್ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ(29), ಗೌತಮ್ ಗಂಭೀರ್(21), ಯೂವರಾಜ್ ಸಿಂಗ್(25) ಹೈಸ್ಕೋರರ್ ಆಗಿದ್ದರು.