ನವದೆಹಲಿ: ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರು ಮಂಗಳವಾರ ಕ್ರಿಕೆಟ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೇತುವೆ ಎಂದು ಕರೆದಿದ್ದಾರೆ. ತಮ್ಮ ದೇಶದಲ್ಲಿ ಆಡುವ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗಳನ್ನು ಭಾರತದಲ್ಲಿ ಪ್ರಸಾರಕ್ಕೆ ಅನುಕೂಲ ಮಾಡಿಕೊಡುವ ಒಪ್ಪಂದವನ್ನು ಶ್ಲಾಘಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸ್ನಿ + ಹಾಟ್ ಸ್ಟಾರ್ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಏಳು ವರ್ಷಗಳ ಒಪ್ಪಂದದಲ್ಲಿ ಆಸ್ಟ್ರೇಲಿಯಾದಲ್ಲಿ ಆಡುವ ಎಲ್ಲಾ ಪುರುಷ ಮತ್ತು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಭಾರತದಲ್ಲಿ ಪ್ರಸಾರ ಮಾಡುವ ವಿಶೇಷ ಹಕ್ಕುಗಳನ್ನು ಪಡೆದುಕೊಂಡಿರುವ ಒಪ್ಪಂದದ ಬಗ್ಗೆ ಪೆನ್ನಿ ವಾಂಗ್ ಘೋಷಿಸಿದ್ದಾರೆ.
"ಎರಡು ರಾಷ್ಟ್ರಗಳು ಕ್ರಿಕೆಟ್ನ್ನು ಹೆಚ್ಚು ಪ್ರೀತಿಸುತ್ತವೆ, ಇದೇ ಉಭಯ ರಾಷ್ಟ್ರಗಳನ್ನು ಬೆಸೆಯುವ ಸೇತುವೆ ಅಗುತ್ತದೆ ಎಂದು ಆಶಿಸುತ್ತೇನೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಸ್ಟಾರ್ ಸ್ಪೋರ್ಟ್ಸ್ ನಡುವಿನ ಈ ಪ್ರಸಾರ ಒಪ್ಪಂದದ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಇದರ ಮೂಲಕ ಹೆಚ್ಚಿನ ಭಾರತೀಯರು ಆಸ್ಟ್ರೇಲಿಯಾದ ಮಹಿಳಾ ಮತ್ತು ಪುರುಷರ ಬಿಗ್ ಬ್ಯಾಷ್ ಲೀಗ್ ಪಂದ್ಯಾವಳಿಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ" ಎಂದು ವಾಂಗ್ ಹೇಳಿದ್ದಾರೆ.
"ಈ ಒಪ್ಪಂದದ ಮೂಲಕ ನೂರಾರು ಮಿಲಿಯನ್ ಭಾರತೀಯ ಅಭಿಮಾನಿಗಳು ಆಸ್ಟ್ರೇಲಿಯಾದಲ್ಲಿ ನಮ್ಮ ಅದ್ಭುತ ನಗರ, ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳು ಮತ್ತು ಭಾರತೀಯ ಕ್ರಿಕೆಟಿಗರ ಅನೇಕ ಸ್ಮರಣೀಯ ಕ್ಷಣಗಳನ್ನು ಹೊಂದಿರುವ ಮೈದಾನದ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ" ಎಂದಿದ್ದಾರೆ.