ದುಬೈ :ಐಪಿಎಲ್ನಲ್ಲಿ ಕಡಿಮೆ ಅಂತರದಿಂದ ಸೋಲು ಕಾಣುವುದು ಪಂಜಾಬ್ ಕಿಂಗ್ಸ್ಗೆ ಆಭರಣವಾಗಿಬಿಟ್ಟಿದೆ. ಈ ಎರಡು ರನ್ಗಳ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಪಂಜಾಬ್ ಮಂಗಳವಾರ ನಡೆದ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಎಸೆದ ಕೊನೆಯ ಓವರ್ನಲ್ಲಿ 4 ರನ್ಗಳಿಸಿಲಾಗದೇ 2 ರನ್ಗಳಿಂದ ಸೋಲು ಕಂಡಿತು. ಪೂರನ್, ಮಾರ್ಕ್ರಮ್, ದೀಪಕ್ ಹೂಡಾ ಹಾಗೂ ಅಲೆನ್ ಕೇವಲ 4 ರನ್ಗಳಿಸುವಲ್ಲಿ ವಿಫಲರಾದರು.
"ಈ ರೀತಿ ಸೋಲು ಕಾಣುವುದು ನಮಗೆ ಆಭರಣವಾಗಿಬಿಟ್ಟಿದೆ. ಅದರಲ್ಲೂ ದುಬೈನಲ್ಲಿ ಅದು ನಮಗೆ ಮತ್ತೊಮ್ಮೆ ತೋರಿಸಿದೆ. ಆದರೆ, ಇದು ನಮಗೆ ಇನ್ಮುಂದೆ ಪಂದ್ಯವನ್ನು ಕೇವಲ 19 ಓವರ್ಗಳಲ್ಲಿ ಮುಗಿಸುವುದು ಅಗತ್ಯ ಎಂದು ಸ್ಪಷ್ಟವಾದ ಪಾಠವನ್ನು ಕಲಿಸಿದೆ. ಅದೇ ನಮ್ಮ ಮುಂದಿನ ವಿಧಾನ " ಎಂದು ಕುಂಬ್ಳೆ ಪಂದ್ಯ ಮುಗಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.