ಭಾರತಕ್ಕೆ ಸರಿಸುಮಾರು 10 ವರ್ಷಗಳಿಂದ ಐಸಿಸಿ ನಡೆಸುವ ಪ್ರತಿಷ್ಠಿತ ಕಪ್ಗಳು ದೊರೆತಿಲ್ಲ. ಭಾರತ 2013 ಇಂಗ್ಲೆಂಡ್ ಅನ್ನು ಮಣಿಸಿ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಂಡಿತ್ತು. ಆದಾದ ನಂತರ 7 ಐಸಿಸಿ ಆಯೋಜನೆ ಟೂರ್ನಿಗಳು ನಡೆದಿದ್ದು ಯಾವುದರಲ್ಲೂ ಗೆಲುವು ದಾಖಲಿಸಿಲ್ಲ. 2013ರದ್ದೇ ಭಾರತಕ್ಕೆ ಬಂದ ಕೊನೆಯ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಪ್ರಶಸ್ತಿಯಾಗಿದೆ.
ನಂತರ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದರು ಫೈನಲ್‌ವರೆಗೆ ಹೋಗಿ ರನ್ನರ್ ಆಪ್ ಆಗಿದೆ. ಸತತ ಐಸಿಸಿ ಟ್ರೋಫಿಯ ಸೋಲಿನ ಕಾರಣ ಭಾರತ ತಂಡನ ನಾಯಕತ್ವ ವಹಿಸಿದ್ದ ವಿರಾಟ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತಂಡದಲ್ಲಿ ಕೇವಲ ಆಟಗಾರರಾಗಿ ಉಳಿದು ಕೊಂಡರು. ಈಗ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶ ಪಡೆದುಕೊಂಡಿದ್ದು ಓವೆಲ್ನಲ್ಲಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ಗೆದ್ದು ಗದೆ ವಶಪಡಿಸಿಕೊಳ್ಳುತ್ತಾ? ಎಂಬ ಕುತೂಹಲ ಎಲ್ಲರಲ್ಲಿದೆ.
2014 ಟಿ20 ವಿಶ್ವಕಪ್ ಫೈನಲ್ ಸೋಲು: 2013ರಲ್ಲಿ ಚಾಪಿಂಯನ್ಸ್ ಟ್ರೋಫಿ ಗೆದ್ದಿದ್ದ ಭಾರತ ಅದೇ ತಂಡದೊಂದಿಗೆ ಟಿ20 ವಿಶ್ವ ಕಪ್ ಎದುರಿಸಿತ್ತು. ಗುಂಪು ಹಂತದಲ್ಲಿ ನಾಲ್ಕು ಪಂದ್ಯದಲ್ಲಿ ಸೋಲನ್ನೇ ಕಾಣದೇ ಫೈನಲ್ ಪ್ರವೇಶ ಪಡೆದಿತ್ತು. ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಶ್ರೀಲಂಕಾ ಎದುರಾಳಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ನೀಡಿದ್ದ 130 ರನ್ನ ಗುರಿಯನ್ನು ಲಂಕಾ 4 ವಿಕೆಟ್ ನಷ್ಟದಲ್ಲಿ ಸಾಧಿಸಿತ್ತು. ಭಾರತ 6 ವಿಕೆಟ್ಗಳ ಸೋಲನುಭವಿಸಿತ್ತು.
2015ರ ಏಕದಿನ ವಿಶ್ವಕಪ್ ಸೆಮೀಸ್ ಸೋಲು:2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತಕ್ಕೆ ನಾಲ್ಕು ವರ್ಷಗಳ ನಂತರ ಮತ್ತೆ ವಿಶ್ವಕಪ್ ಪಂದ್ಯ ಎದುರಾಗಿತ್ತು. ಗುಂಪು ಹಂತದ 6 ಪಂದ್ಯದಲ್ಲಿ ಒಂದೂ ಸೋಲು ಕಾಣದೇ ಸೆಮೀಸ್ ಪ್ರವೇಶ ಪಡೆದಿದ್ದ ಭಾರತ ಆಸ್ಟ್ರೇಲಿಯಾದ ಎದುರು ಸೋಲನುಭವಿಸಿತು. ಆಸಿಸ್ ನೀಡಿದ್ದ 328 ರನ್ ಗುರಿ ಬೆನ್ನು ಹತ್ತಿದ್ದ ಭಾರತ 233 ರನ್ಗೆ ಆಲ್ಔಟ್ ಆಗಿ ಸೆಮಿಸ್ನಿಂದ ಹೊರ ಬಂದಿತ್ತು.
2016 ಟಿ20 ವಿಶ್ವಕಪ್ ಸೆಮೀಸ್ ಅಪಜಯ:ಎರಡನೇ ಸೆಮೀಸ್ ಕದನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 7 ವಿಕೆಟ್ಗಳ ಸೋಲನುಭವಿಸಿತ್ತು. ಭಾರತ ಕೊಟ್ಟಿದ್ದ 192 ರನ್ನ ಗುರಿಯನ್ನು ಮೂರು ವಿಕೆಟ್ ಕಳೆದಕೊಂಡು 2 ಬಾಲ್ ಉಳಿಸಿಕೊಂಡು ಕೆರಿಬಿಯನ್ನರು ಗೆದ್ದಿದ್ದರು. ಫೈನಲ್ನಲ್ಲಿ ಸಹ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಮಣಿಸಿ ಗೆಲುವು ದಾಖಲಿಸಿತ್ತು.