ನವದೆಹಲಿ :ವಾರಗಳ ಅಂತರದಲ್ಲಿ ಕುಟುಂಬದಲ್ಲಿನ ಅವಳಿ ದುರಂತಗಳಿಂದ ನೊಂದಿರುವ ವೇದಾ ಕೃಷ್ಣಮೂರ್ತಿಯ ಬಗ್ಗೆ ವಿಚಾರಣೆ ಮಾಡದೆ ಮತ್ತು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಅವರನ್ನು ಪರಿಗಣಿಸದಿರುವ ನಿರ್ಧಾರವನ್ನು ಅವರಿಗೆ ತಿಳಿಸಿಲ್ಲ ಎಂದು ಬಿಸಿಸಿಐ ವಿರುದ್ಧ ಆಸ್ಟ್ರೇಲಿಯಾದ ಮಾಜಿ ನಾಯಕಿ ಲಿಸಾ ಸ್ಥಾಲೇಕರ್ ಕಿಡಿ ಕಾಡಿದ್ದಾರೆ.
ಕರ್ನಾಟಕದ ವೇದಾ ಕೃಷ್ಣಮೂರ್ತಿಯ ಅವರ ತಾಯಿ ಮತ್ತು ಸಹೋದರಿ ವತ್ಸಲ ಶಿವಕುಮಾರ್ ಅವರನ್ನು ಎರಡು ವಾರಗಳ ಅಂತರದಲ್ಲಿ ಕಳೆದುಕೊಂಡಿದ್ದರು. ಅವರು ಕೋವಿಡ್-19 ಕಾರಣದಿಂದ ಸಾವನ್ನಪ್ಪಿದ್ದರು.
ಇನ್ನು, ದುಃಖದ ಸಂದರ್ಭದಲ್ಲಿ ಅವರನ್ನು ಬಿಸಿಸಿಐ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಯಾವುದೇ ಮಾದರಿಯ ತಂಡಕ್ಕೆ ಆಯ್ಕೆ ಮಾಡಿಲ್ಲ. ಆದರೆ, ಭಾರತಕ್ಕಾಗಿ ಆಡುತ್ತಿರುವ ಕ್ರಿಕೆಟರ್ ಮನೆಯಲ್ಲಿ ಇಷ್ಟೆಲ್ಲಾ ಆದರೂ ಅವರ ಬಗ್ಗೆ ಬಿಸಿಸಿಐ ನಡೆದುಕೊಂಡ ರೀತಿಯನ್ನು ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿರುವ ಸ್ಥಾಲೇಕರ್ ಖಂಡಿಸಿದ್ದಾರೆ.
" ಮುಂಬರುವ ಸರಣಿಗೆ ವೇದಾರನ್ನು ಆಯ್ಕೆ ಮಾಡದಿದ್ದನ್ನು ಅವರ ದೃಷ್ಟಿಕೋನದಿಂದ ಸಮರ್ಥಿಸಬಹುದಾಗಿದೆ. ಆದರೆ ಗುತ್ತಿಗೆ ಆಟಗಾರಳಾಗಿ ಅವಳು ಕಷ್ಟದಲ್ಲಿರುವಾಗ ಬಿಸಿಸಿಐನಿಂದ ಯಾವುದೇ ಸಂವಹನವನ್ನು ಸ್ವೀಕರಿಸಲಿಲ್ಲ.