ಕೋಲ್ಕತ್ತಾ(ಪಶ್ಚಿಮ ಬಂಗಾಳ):ಲೆಜೆಂಡ್ಸ್ ಕ್ರಿಕೆಟ್ ಲೀಗ್ನ ಎರಡನೇ ಆವೃತ್ತಿ ಸೆಪ್ಟೆಂಬರ್ 16ರಂದು ಪಶ್ಚಿಮ ಬಂಗಾಳದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಭಾರತದ ಮಹರಾಜಸ್ ತಂಡಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಯಕರಾಗಿದ್ದಾರೆ. ಇವರ ನಾಯಕತ್ವದ ತಂಡ ರೆಸ್ಟ್ ಆಫ್ ದಿ ವರ್ಲ್ಡ್ ತಂಡದೆದುರು ತಮ್ಮ ಮೊದಲ ಪಂದ್ಯ ಆಡಲಿದೆ. ಈ ತಂಡದ ನಾಯಕತ್ವ ಜವಾಬ್ದಾರಿಯನ್ನು ಇಂಗ್ಲೆಂಡ್ನ ಇಯಾನ್ ಮಾರ್ಗನ್ ವಹಿಸಿಕೊಂಡಿದ್ದಾರೆ.
ಭಾರತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿಯೇ ಲೆಜೆಂಡ್ಸ್ ಕ್ರಿಕೆಟ್ ಲೀಗ್ನ ಎರಡನೇ ಆವೃತ್ತಿ ಆಯೋಜಿಸುತ್ತಿರುವುದು ಹೆಮ್ಮೆ ಉಂಟು ಮಾಡಿದೆ ಎಂದು ಲೀಗ್ನ ಆಯುಕ್ತ ರವಿಶಾಸ್ತ್ರಿ ತಿಳಿಸಿದರು. ಟೂರ್ನಿಯಲ್ಲಿ ನಾಲ್ಕು ತಂಡಗಳು ಭಾಗಿಯಾಗಲಿದ್ದು, 10 ದೇಶದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ಎರಡನೇ ಸೀಸನ್ನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಇಂಡಿಯಾ ಮಹಾರಾಜಸ್ ತಂಡದಲ್ಲಿ ಭಾರತದ ಸೆಹ್ವಾಗ್, ಕೈಫ್, ಎಸ್ ಶ್ರೀಶಾಂತ್ ಸೇರಿದಂತೆ ಮಾಜಿ ಆಟಗಾರರಿದ್ದಾರೆ.