ಕರ್ನಾಟಕ

karnataka

ETV Bharat / sports

ವಿರಾಟ್ 100ನೇ ಟೆಸ್ಟ್​: ಕ್ರಿಕೆಟ್‌ ದಿಗ್ಗಜರಿಂದ ಕೊಹ್ಲಿ ಗುಣಗಾನ, ಶುಭಹಾರೈಕೆ - ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

100ನೇ ಟೆಸ್ಟ್​ ಮೈಲುಗಲ್ಲಿನ ಹೊಸ್ತಿಲಿನಲ್ಲಿರುವ 33 ವರ್ಷದ ಬ್ಯಾಟರ್​ ಬಗ್ಗೆ ಲೆಜೆಂಡರಿ ಕ್ರಿಕೆಟಿಗರು ಶುಭಕೋರಿದ್ದು, ಈ ಸಂದರ್ಭದಲ್ಲಿ ಕೊಹ್ಲಿಯ ವೃತ್ತಿಜೀವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

legendary cricketers  wishes to Kohli's 100th test
ವಿರಾಟ್​ ಕೊಹ್ಲಿ

By

Published : Mar 2, 2022, 10:05 PM IST

Updated : Mar 2, 2022, 10:34 PM IST

ಮೊಹಾಲಿ: ಶ್ರೀಲಂಕಾ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್​ ಪಂದ್ಯ ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿಗೆ 100ನೇ ಟೆಸ್ಟ್​ ಪಂದ್ಯವಾಗಲಿದೆ. ಈ ವಿಶೇಷ ಮೈಲುಗಲ್ಲನ್ನು ಸ್ಥಾಪಿಸಲಿರುವ ವಿರಾಟ್​ಗೆ ದಿಗ್ಗಜರಾದ ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್​, ಸಚಿನ್​ ತೆಂಡೂಲ್ಕರ್​ ಶುಭಕೋರಿದ್ದಾರೆ.

ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕೊಹ್ಲಿ ಭಾರತ ತಂಡದ ಪರ 100ನೇ ಟೆಸ್ಟ್​ ಪಂದ್ಯವನ್ನಾಡುತ್ತಿರುವ 12ನೇ ಕ್ರಿಕೆಟಿಗನಾಗಿದ್ದಾರೆ. ಶ್ರೀಲಂಕಾ ವಿರುದ್ಧ ಮಾರ್ಚ್​ 4-8ರವರೆಗೆ ಮೊಹಾಲಿಯ ಪಂಜಾಬ್ ಕ್ರಿಕೆಟ್​ ಅಸೋಸಿಯೇಷನ್​ನ ಬಿಂದ್ರಾ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

100ನೇ ಟೆಸ್ಟ್​ ಮೈಲುಗಲ್ಲಿನ ಹೊಸ್ತಿಲಲ್ಲಿರುವ 33 ವರ್ಷದ ಬ್ಯಾಟರ್​ ಬಗ್ಗೆ ಲೆಜೆಂಡರಿ ಕ್ರಿಕೆಟಿಗರು ಶುಭಕೋರಿದ್ದು, ಈ ಸಂದರ್ಭದಲ್ಲಿ ಕೊಹ್ಲಿಯ ವೃತ್ತಿಜೀವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾವು 2007ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ನಿಮ್ಮ ಬಗ್ಗೆ ಮೊದಲ ಬಾರಿಗೆ ಕೇಳಿದ ನೆನಪಿದೆ. ನೀವೆಲ್ಲರೂ ಅಂಡರ್​ 19 ವಿಶ್ವಕಪ್​ಗಾಗಿ ಮಲೇಷ್ಯಾಗೆ ತೆರಳುವ ಯೋಜನೆಯಲ್ಲಿದ್ದಿರಿ. ಆ ವೇಳೆ ಕೆಲವು ಭಾರತೀಯ ಆಟಗಾರರು ನಿಮ್ಮ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವಿಶ್ವಕಪ್​ನಲ್ಲಿ ಎದುರು ನೋಡಬಹುದಾದ ಆಟಗಾರ, ಆತ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲ ಎಂದು ಅವರು ಮಾತನಾಡುತ್ತಿದ್ದರು ಎಂದು ಸಚಿನ್​ ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್​ ಒಂದು ಪಂದ್ಯವನ್ನು ಆಡಲು ಸಾಧ್ಯವಾಗುವುದು ಅದ್ಭುತ. ಆದರೆ ನೂರು ಬಾರಿ ಆಡಲು ಸಾಧ್ಯವಾದರೆ ಅದು ಒಂದು ಅದ್ಭುತ ಸಾಧನೆ. ವಿರಾಟ್​ ಕೊಹ್ಲಿ ಅವರ ಈ ಸಾಧನೆ ಹೆಮ್ಮೆ ಪಡುವಂತಹದ್ದು ಎಂದು ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್​ ಅದ್ಭುತವಾದ ಕ್ರಿಕೆಟ್​ ಜರ್ನಿಯನ್ನು ಹೊಂದಿದ್ದಾರೆ. 10-11 ವರ್ಷಗಳ ಹಿಂದೆ ಪ್ರಾರಂಭವಾಗಿ, ಇಲ್ಲಿಯವರೆಗೆ ತಲುಪಿರುವುದು ಅಸಾಧಾರಣ ಸಾಧನೆಯಾಗಿದೆ. ಬಿಸಿಸಿಐ ಪರವಾಗಿ ಮತ್ತು ಮಾಜಿ ನಾಯಕ ಮತ್ತು 100 ಪಂದ್ಯಗಳನ್ನಾಡಿರುವ ಮಾಜಿ ಕ್ರಿಕೆಟಿಗನಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಬಿಸಿಸಿಐ ಕೇಂದ್ರೀಯ ಗುತ್ತಿಗೆ: ರಹಾನೆ, ಪೂಜಾರ B ಗ್ರೇಡ್​ಗೆ, ಪಾಂಡ್ಯ C ಗ್ರೇಡ್​ಗೆ ಹಿಂಬಡ್ತಿ

ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಬಿಸಿಸಿಐ: ಕೊಹ್ಲಿಯ 100ನೇ ಟೆಸ್ಟ್​ಗೆ ಪ್ರೇಕ್ಷಕರಿಗೆ ಅವಕಾಶ

Last Updated : Mar 2, 2022, 10:34 PM IST

ABOUT THE AUTHOR

...view details