ಏಷ್ಯಾ ಕಪ್- 2022 ಯುಎಇಯಲ್ಲಿ ಆಗಸ್ಟ್ 27 ರಂದು ಪ್ರಾರಂಭವಾಗಲಿದೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಪೂರ್ವ ತಯಾರಿ ಸರಣಿ ಇದಾಗಲಿದೆ. 7 ಬಾರಿಯ ಚಾಂಪಿಯನ್ ಭಾರತ ಮತ್ತು 2 ಬಾರಿ ಪ್ರಶಸ್ತಿ ವಿಜೇತ ಪಾಕಿಸ್ತಾನ ಟೂರ್ನಿಯ ಫೇವರಿಟ್ ತಂಡಗಳಾಗಿವೆ.
ಒಂದು ಬಾರಿಯೂ ಪ್ರಶಸ್ತಿ ಗೆಲ್ಲದ ಡಾರ್ಕ್ ಹಾರ್ಸ್ಗಳಾದ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿವೆ. ಇನ್ನು ಶ್ರೀಲಂಕಾ ಕೂಡ ಟೂರ್ನಿಯಲ್ಲಿ ಕಮಾಲ್ ಮಾಡುವ ಇರಾದೆಯಲ್ಲಿದೆ. ಹಾಲಿ ಚಾಂಪಿಯನ್ ತಂಡವಾಗಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಲಿದೆ. ಆಗಸ್ಟ್ 28 ರಂದು ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ 1984 ರ ಉದ್ಘಾಟನಾ ಆವೃತ್ತಿಯಿಂದ ಈವರೆಗೂ 7 ಬಾರಿ ಟೂರ್ನಿಯನ್ನು ಗೆದ್ದಿದ್ದು ಅತ್ಯಂತ ಯಶಸ್ವಿ ತಂಡವಾಗಿದೆ. 2000 ದಿಂದ ನಡೆದ 9 ಟೂರ್ನಿಗಳಲ್ಲಿ ಕೇವಲ 3 ಬಾರಿ ಮಾತ್ರ ಭಾರತ ಜಯ ಕಂಡಿದೆ. ಏಷ್ಯಾ ಕಪ್‌ನ 2000 ದ ಬಳಿಕದ ಆವೃತ್ತಿಗಳ ವಿಜೇತರ ಸಂಕ್ಷಿಪ್ತ ನೋಟ ಇಲ್ಲಿದೆ.
2000- ಪಾಕಿಸ್ತಾನಕ್ಕೆ ಮೊದಲ ಟ್ರೋಫಿ:ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್‌ನ 7ನೇ ಆವೃತ್ತಿಯಲ್ಲಿ ಭಾರತ ಮೊದಲ ಬಾರಿಗೆ ಫೈನಲ್ ತಲುಪದಲ್ಲಿ ವಿಫಲವಾಯಿತು. ಇದರ ಲಾಭ ಪಡೆದ ಪಾಕಿಸ್ತಾನ ಫೈನಲ್ನಲ್ಲಿ ಶ್ರೀಲಂಕಾವನ್ನು 39 ರನ್ಗಳಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನು ಸಂಪಾದಿಸಿತು. ಟೂರ್ನಿಯಲ್ಲಿ ಭಾರತ, ಬಾಂಗ್ಲಾ, ಶ್ರೀಲಂಕಾ ಪಾಕ್ ತಂಡಗಳು ಸೆಣಸಾಡಿದ್ದವು.
2004- ಭಾರತ ಸೋಲಿಸಿದ ಲಂಕಾಗೆ 3ನೇ ಪ್ರಶಸ್ತಿ 2004- ಭಾರತ ಸೋಲಿಸಿದ ಲಂಕಾಗೆ 3ನೇ ಪ್ರಶಸ್ತಿ:ಶ್ರೀಲಂಕಾದಲ್ಲಿ ನಡೆದ ಟೂರ್ನಿಯಲ್ಲಿ ಶ್ರೀಲಂಕಾ ಬಲಿಷ್ಠ ಭಾರತವನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಜಯಿಸಿತು. ಕೊಲಂಬೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಲಂಕಾದ ಮಾಜಿ ನಾಯಕ ಮರ್ವನ್ ಅಟಪ್ಪಟ್ಟು 87 ಎಸೆತಗಳಲ್ಲಿ 65 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರೆ, ಕುಮಾರ ಸಂಗಕ್ಕಾರ ಅರ್ಧಶತಕದಿಂದ 228 ರನ್ ಗಳಿಸಿತು. ಭಾರತ 203 ರನ್‌ಗಳಿಗೆ ಆಲೌಟ್ ಆಗಿ ಪ್ರಶಸ್ತಿ ಕೈಚೆಲ್ಲಿತ್ತು.
2010- 5 ಟೂರ್ನಿ ಬಳಿಕ ಭಾರತಕ್ಕೆ ಪಟ್ಟ 2010- 5 ಟೂರ್ನಿ ಬಳಿಕ ಭಾರತಕ್ಕೆ ಪಟ್ಟ:ರಾಜಕೀಯ ತಿಕ್ಕಾಟದ ಕಾರಣದಿಂದಾಗಿ 6 ವರ್ಷಗಳ ಬಳಿಕ ಏಷ್ಯಾ ಕಪ್ ಟೂರ್ನಿ ನಡೆಯಿತು. ಶ್ರೀಲಂಕಾದಲ್ಲಿ ನಡೆದ 10 ನೇ ಆವೃತ್ತಿಯ ಟೂರ್ನಿಯಲ್ಲಿ ಭಾರತ ತವರು ತಂಡವನ್ನು 81 ರನ್ಗಳ ಅಂತರದಲ್ಲಿ ಸೋಲಿಸಿ 5ನೇ ಬಾರಿಗೆ ಚಾಂಪಿಯನ್ ಆಯಿತು.
2012- ಜಯದ ಅಂಚಿನಲ್ಲಿ ಸೋತ ಬಾಂಗ್ಲಾ, ಪಾಕ್ಗೆ ಟ್ರೋಫಿ 2012- ಜಯದ ಅಂಚಿನಲ್ಲಿ ಸೋತ ಬಾಂಗ್ಲಾ, ಪಾಕ್ಗೆ ಟ್ರೋಫಿ:ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿ ರೋಚಕ ಅಂತ್ಯ ಕಂಡಿತು. ತವರು ತಂಡವಾದ ಬಾಂಗ್ಲಾ ಮೊದಲ ಬಾರಿಗೆ ಭಾರತ, ಶ್ರೀಲಂಕಾದಂತಹ ತಂಡಗಳನ್ನು ಸೋಲಿಸಿ ಫೈನಲ್ ತಲುಪಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ದುರಾದೃಷ್ಟವಶಾತ್ 2 ರನ್ಗಳಿಂದ ವೀರೋಚಿತ ಸೋಲು ಕಂಡಿತು. ಈ ಮೂಲಕ ಪಾಕಿಸ್ತಾನ 2ನೇ ಬಾರಿಗೆ ಪ್ರಶಸ್ತಿ ಜಯಿಸಿತು.
2014- ಅಫ್ಘನ್ ಎಂಟ್ರಿ, ಶ್ರೀಲಂಕಾಗೆ ಟ್ರೋಫಿ 2014- ಅಫ್ಘನ್ ಎಂಟ್ರಿ, ಶ್ರೀಲಂಕಾಗೆ ಟ್ರೋಫಿ:ಬಾಂಗ್ಲಾದೇಶದಲ್ಲಿ ನಡೆದ 12ನೇ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ತಂಡ ಮೊದಲ ಬಾರಿಗೆ ಅವಕಾಶ ಪಡೆದುಕೊಂಡಿತು. ಭಾರತ ಈ ಬಾರಿಯೂ ಪ್ರಶಸ್ತಿ ಸುತ್ತು ತಲುಪವಲ್ಲಿ ವಿಫಲವಾಯಿತು. ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್ ಪಾಕಿಸ್ತಾನ ಮಧ್ಯೆ ನಡೆದ ಫೈನಲ್ ಪಂದ್ಯದಲ್ಲಿ ಸಿಂಹಳೀಯರು ಜಯ ಸಾಧಿಸಿದರು.
2016- ಬದಲಾದ ಫಾರ್ಮೆಟ್ ಗೆದ್ದ ಭಾರತ 2016- ಬದಲಾದ ಫಾರ್ಮೆಟ್ ಗೆದ್ದ ಭಾರತ:50 ಓವರ್ಗಳ ಮಾದರಿಯಲ್ಲಿ ನಡೆಯುತ್ತಿದ್ದ ಏಷ್ಯಾ ಕಪ್ ಟೂರ್ನಿಯನ್ನು ಬದಲಿಸಿ ಟಿ20 ಮಾದರಿಯಲ್ಲಿ ಮೊದಲ ಬಾರಿಗೆ ನಡೆಸಲಾಯಿತು. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಯಿತು. ಈ ಮೂಲಕ 6ನೇ ಬಾರಿಗೆ ಪ್ರಶಸ್ತಿ ಜಯಿಸಿತು. ಬಾಂಗ್ಲಾದೇಶ ಮತ್ತೆ ಅಂತಿಮ ಹಂತದಲ್ಲಿ ಸೋಲು ಕಂಡು ಪ್ರಶಸ್ತಿಯಿಂದ ವಂಚಿತವಾಯಿತು.
2018- ಕೊನೆಯ ಬಾಲಲ್ಲಿ ಗೆದ್ದ ಭಾರತ 2018- ಕೊನೆಯ ಬಾಲಲ್ಲಿ ಗೆದ್ದ ಭಾರತ:14 ನೇ ಆವೃತ್ತಿಯ ಏಷ್ಯಾ ಕಪ್ ಈ ಹಿಂದಿಗಿಂತಲೂ ಅತಿರೋಚಕ ಘಟ್ಟದಲ್ಲಿ ಅಂತ್ಯ ಕಂಡಿತು. ಭಾರತ ಮತ್ತು ಬಾಂಗ್ಲಾದೇಶ ಮಧ್ಯೆ ನಡೆದ ಫೈನಲ್ ಪಂದ್ಯದಲ್ಲಿ 223 ರನ್ಗೆ ಭಾರತ ಆಲೌಟ್ ಆಯಿತು. ಇದನ್ನು ಬೆನ್ನತ್ತಿದ ಬಾಂಗ್ಲಾ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್ಗಳಿದ್ದಾಗ ಬಾಂಗ್ಲಾ ಆಟಗಾರ ರನೌಟ್ ಆಗುವ ಮೂಲಕ ಟ್ರೋಫಿ ಮಿಸ್ ಮಾಡಿಕೊಂಡಿತು. ನಾಯಕನಾಗಿ ರೋಹಿತ್ ಶರ್ಮಾ ಮೊದಲ ಏಷ್ಯಾ ಕಪ್ ಪ್ರಶಸ್ತಿ ಗೆದ್ದರು.
ಇದನ್ನೂ ಓದಿ:ಭಾರತಕ್ಕೆ ಅದೃಷ್ಟ ತಂದ ದೀಪಕ್ ಹೂಡಾ.. ಈತ ಆಡಿದ ಪಂದ್ಯಗಳಲ್ಲಿ ಸೋತಿಲ್ಲ ಟೀಂ ಇಂಡಿಯಾ