ಕರ್ನಾಟಕ

karnataka

By

Published : Mar 13, 2022, 3:46 PM IST

ETV Bharat / sports

ಜರ್ಮನ್ ಓಪನ್: ವಿಶ್ವದ ನಂ.​1, ಒಲಿಂಪಿಕ್ಸ್​ ಚಾಂಪಿಯನ್ ವಿಕ್ಟರ್ ಆಕ್ಸೆಲ್ಸನ್ ಮಣಿಸಿದ ಲಕ್ಷ್ಯ ಸೇನ್

ಶನಿವಾರ ನಡೆದ ಫೈನಲ್​ನಲ್ಲಿ 20 ವರ್ಷದ ಲಕ್ಷ್ಯ 21-13, 12-21,22-20ರಲ್ಲಿ ವಿಶ್ವದ ನಂಬರ್​​ ಶಟ್ಲರ್​ ಡೆನ್ಮಾರ್ಕ್​ನ ಆಕ್ಸೆಲ್ಸನ್​ ವಿರುದ್ಧ ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 2-1ರ ಗೇಮ್​ಗಳ ರೋಚಕ ಜಯ ಸಾಧಿಸಿದರು.

Lakshya Sen stuns Olympic champion Axelsen
ಆಕ್ಸೆಲ್ಸನ್ ಮಣಿಸಿದ ಲಕ್ಷ್ಯ ಸೇನ್

ಮುಲ್ಹೆಮ್‌ ಆ್ಯನ್ ಡರ್‌ ರುಹ್ರ್‌ (ಜರ್ಮನಿ): ಭಾರತದ ಭರವಸೆಯ ಶಟ್ಲರ್, ವಿಶ್ವ ಚಾಂಪಿಯನ್​ಶಿಪ್​ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್​ ಜರ್ಮನ್​ ಓಪನ್​ ಸೆಮಿಫೈನಲ್​ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ ಜಯ ಸಾಧಿಸಿ, ಜರ್ಮನ್ ಓಪನ್ ಸೂಪರ್ 300 ಟೂರ್ನಮೆಂಟ್​​ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಮೊದಲ ಭಾರತೀಯ ಎಂಬ ಶ್ರೇಯ ಕೂಡ ಅವರ ಪಾಲಾಗಿದೆ.

ಶನಿವಾರ ನಡೆದ ಫೈನಲ್​ನಲ್ಲಿ 20 ವರ್ಷದ ಲಕ್ಷ್ಯ 21-13, 12-21,22-20ರಲ್ಲಿ ವಿಶ್ವದ ನಂಬರ್​​ ಶಟ್ಲರ್​ ಡೆನ್ಮಾರ್ಕ್​ನ ಆಕ್ಸೆಲ್ಸನ್​ ವಿರುದ್ಧ ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 2-1ರ ಗೇಮ್​ಗಳ ರೋಚಕ ಜಯ ಸಾಧಿಸಿದರು.

ಡಿಸೆಂಬರ್​ನಲ್ಲಿ ವಿಶ್ವಚಾಂಪಿಯನ್​ಶಿಪ್​​ನಲ್ಲಿ ಕಂಚಿನ ಪದಕ, ಈ ವರ್ಷದಲ್ಲಿ ಜನವರಿಯಲ್ಲಿ ಇಂಡಿಯಾ ಓಪನ್​ ಸೂಪರ್​ 500 ಟೈಟಲ್ ಜಯಸಿರುವ ಲಕ್ಷ್ಯ ತಮ್ಮ ಅಮೋಘ ಫಾರ್ಮ್​ಅನ್ನು ಮುಂದುವರಿಸಿದ್ದಾರೆ.

ವಿಶ್ವದ 12ನೇ ಶ್ರೇಯಾಂಕದ ಲಕ್ಷ್ಯ ಶನಿವಾರ ನಡೆದ ಪಂದ್ಯಕ್ಕೂ ಮುನ್ನ 0-4ರಲ್ಲಿ ವಿಕ್ಟರ್ ವಿರುದ್ಧ ಸೋಲಿನ ಹಿನ್ನಡೆ ಅನುಭವಿಸಿದ್ದರು. ಕೊನೆಗೂ ಟಾಪ್ ಆಟಗಾರನನ್ನು ಮಣಿಸುವ ಮೂಲಕ ಜರ್ಮನ್ ಓಪನ್​ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಸೇನ್ ಪ್ರಶಸ್ತಿ ಸುತ್ತಿನಲ್ಲಿ ಥಾಯ್ಲೆಂಡ್​ನ ಕುನ್ಲಾವತ್ ವಿತಿದ್ಸ​ರ್ನ್ ವಿರುದ್ಧ ಭಾನುವಾರ ಪೈಪೋಟಿ ನಡೆಸಲಿದ್ದಾರೆ. ಕುನ್ಲಾವತ್​ ಸೆಮಿಫೈನಲ್​ನಲ್ಲಿ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಗೆಲುವು ಸಾಧಿಸಿದರು.

ಇದನ್ನೂ ಓದಿ:ಬುಮ್ರಾಗೆ 5 ವಿಕೆಟ್; 109ಕ್ಕೆ ಆಲೌಟ್ ಆದ ಶ್ರೀಲಂಕಾ, ಭಾರತಕ್ಕೆ 143ರನ್​ಗಳ ಮುನ್ನಡೆ

ABOUT THE AUTHOR

...view details