ದುಬೈ :ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ನೂತನ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಉತ್ತಮ ಲಯದಲ್ಲಿರುವ ಮಾರ್ನಸ್ ಲಾಬುಶೇನ್ ತಮ್ಮ ರಾಷ್ಟ್ರದ ಸ್ಟೀವ್ ಸ್ಮಿತ್ ಮತ್ತು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ರನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದ್ದಾರೆ.
ಮೊದಲ ಆ್ಯಶಸ್ ಟೆಸ್ಟ್ನಲ್ಲಿ 74 ರನ್ಗಳಿಸಿದ್ದ ಲಾಬುಶೇನ್(894 ಅಂಕ) 2 ಸ್ಥಾನ ಏರಿಕೆ ಕಂಡು 2ನೇ ರ್ಯಾಂಕ್ ಪಡೆದಿದ್ದರೆ, 94 ರನ್ಗಳಿಸಿದ್ದ ಡೇವಿಡ್ ವಾರ್ನರ್ 3 ಸ್ಥಾನ ಏರಿಕೆ ಕಂಡು ಭಾರತ ತಂಡದ ನಾಯಕ ಕೊಹ್ಲಿ ಜೊತೆಗೆ ಜಂಟಿ 6ನೇ ಸ್ಥಾನ ಪಡೆದಿದ್ದಾರೆ.
ಸ್ಫೋಟಕ ಶತಕ(152) ಸಿಡಿಸಿದ್ದ ಟ್ರಾವಿಸ್ ಹೆಡ್ ಬರೋಬ್ಬರಿ 16 ಸ್ಥಾನ ಏರಿಕೆ ಕಂಡು ಕ್ವಿಂಟನ್ ಡಿಕಾಕ್ ಜೊತೆಗೆ 10ನೇ ಸ್ಥಾನ ಅಲಂಕರಿಸಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್(903) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
3ರಲ್ಲಿ ಸ್ಟೀವ್ ಸ್ಮಿತ್(881) ಇದ್ದರೆ, ಕೇನ್ ವಿಲಿಯಮ್ಸನ್(879), ರೋಹಿತ್ ಶರ್ಮಾ(797), ವಿರಾಟ್ ಕೊಹ್ಲಿ(756) ಮತ್ತು ವಾರ್ನರ್(756) ನಂತರದಲ್ಲಿ ಇದ್ದಾರೆ.