ಮುಂಬೈ: ಒಂದೆರಡು ವರ್ಷಗಳಿಂದ ಭಾರತ ತಂಡದ ಪ್ರಭಾವಿ ಸ್ಪಿನ್ನರ್ ಆಗಿದ್ದ ಕುಲ್ದೀಪ್ ಯಾದವ್, ಇದೀಗ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಹೆಚ್ಚು ಅವಕಾಶ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಬೌಲರ್ಗೆ ಫ್ರಾಂಚೈಸಿ ಲೀಗ್ನಲ್ಲಿ ನಿರೀಕ್ಷಿತ ಅವಕಾಶಗಳು ಸಿಗದಿದ್ದಾಗ ತುಂಬಾ ನಿರಾಶೆಯಾಗುತ್ತದೆ ಎಂದಿದ್ದಾರೆ.
ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಪರ ಪದಾರ್ಪಣೆ ಮಾಡಿದ್ದ ಕುಲ್ದೀಪ್ ಯಾದವ್ ಐಪಿಎಲ್ನ ಎಲ್ಲಾ ಪಂದ್ಯಗಳಲ್ಲೂ ಅವಕಾಶ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ತಂಡದ ಯಾದವ್ ಕೆಕೆಆರ್ ಪಾಲಿನ ಮ್ಯಾಚ್ ವಿನ್ನರ್ ಆಗಿದ್ದರು. ಗೌತಿ ನಾಯಕತ್ವದಲ್ಲಿ ಯಾದವ್ 15 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದರು. ಆದರೆ ಕಳೆದ ಒಂದೆರಡು ಐಪಿಎಲ್ಗಳಲ್ಲಿ ರಿಸ್ಟ್ ಸ್ಪಿನ್ನರ್ಗೆ ನಿರೀಕ್ಷಿಸಿದಷ್ಟು ಅವಕಾಶಗಳು ಕೆಕೆಆರ್ನಲ್ಲಿ ಸಿಗುತ್ತಿಲ್ಲ.
"ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗೆಲುವಿಗಾಗಿ ತೋರುವ ಹಸಿವನ್ನು ನಾನು ನೋಡಿದ್ದೇನೆ. ನಾವು ಕೆಕೆಆರ್ನಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಅದನ್ನು ಕಾಣುತ್ತಿದ್ದೆವು. ಕೊಹ್ಲಿ ಮತ್ತು ಗೌತಮ್ ಗಂಭೀರ್ ಮನಸ್ಥಿತಿ ತಂಡವನ್ನು ಮುನ್ನಡೆಸುವಾಗ ಒಂದೇ ಇರುತ್ತಿತ್ತು. ಆದರೆ ಈ ಮನಸ್ಥಿತಿ ಈಗ ಕೆಕೆಆರ್ ತಂಡದಲ್ಲಿ ಕಾಣದಿರುವುದೇ ತಂಡದ ಸೋಲಿಗೆ ಕಾರಣವಾಗುತ್ತಿದೆ. ಅಲ್ಲದೆ ಅವರು ಟೂರ್ನಮೆಂಟ್ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ" ಎಂದು ಕುಲ್ದೀಪ್ ಯಾದವ್ ತಿಳಿಸಿದ್ದಾರೆ.
ನನ್ನ ಮೇಲೆ ಗಂಭೀರ್ ತೋರಿದ ನಂಬಿಕೆ ಈಗ ಕಾಣೆಯಾಗಿದೆ