ಮುಂಬೈ: ಭಾರತ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಅತ್ಯಂತ ಯಶಸ್ವಿ ಸ್ಪಿನ್ ಜೋಡಿ. ಇವರಿಬ್ಬರು ಭಾರತದಲ್ಲಿ ಮಾತ್ರವಲ್ಲದೆ, ಇಂಗ್ಲೆಂಡ್, ದಕ್ಷಿಣ ಅಫ್ರಿಕಾದಂತಹ ಬೌನ್ಸ್ ಸ್ನೇಹಿ ವಿಕೆಟ್ಗಳಲ್ಲಿ ಅದ್ಭುತ ಪ್ರದರ್ಶನ ತೋರಿ ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿದ್ದರು. ಇದೀಗ ಅವರ ಪ್ರದರ್ಶನ ಕ್ಷೀಣಿಸಿದೆ. ಮೈದಾನದಲ್ಲಿ ಅವರಿಗೆ ಮಾರ್ಗದರ್ಶಕನಾಗಿದ್ದ ಧೋನಿ ಇಂದು ಇಲ್ಲದಿರುವುದೇ ಅವರಿಬ್ಬರ ವೈಫಲ್ಯಕ್ಕೆ ಕಾರಣ ಎಂದು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
"2019 ರ ವಿಶ್ವಕಪ್‌ನ ನಂತರ ಎಂ ಎಸ್ ಧೋನಿಯಂತಹವರು ಮೈದಾನದಲ್ಲಿ ಇಲ್ಲದ ಕಾರಣ ಕುಲದೀಪ್ ಮತ್ತು ಯುಜ್ವೇಂದ್ರ ಚಹಲ್ ಅಂತಹವರ ಬೌಲಿಂಗ್ ಪ್ರದರ್ಶನ ಕುಸಿದಿದೆ ಎಂದು ನಾನು ಭಾವಿಸುತ್ತೇನೆ. ಧೋನಿ ಅವರಿಗೆ ಎಷ್ಟು ನೆರವಾಗುತ್ತಿದ್ದರು ಎಂಬುದನ್ನು ನಾನು ನೋಡಿದ್ದೇನೆ. ಬೌಲರ್ಗಳ ಪ್ರದರ್ಶನ ಒಳ್ಳೆಯ ರೀತಿಯಲ್ಲಿ ಹೋಗುತ್ತಿದ್ದಾಗ ಅವರಿಗೆ ಸಹಾಯದ ಅಗತ್ಯವಿರುವುದಿಲ್ಲ. ಆದರೆ ವೈಫಲ್ಯ ಅನುಭವಿಸಿದಾಗ ಕೆಲವು ಒಳ್ಳೆಯ ನುಡಿಗಳು ಅಗತ್ಯವಿರುತ್ತದೆ" ಎಂದು ಕ್ರಿಕ್ಬಜ್ ಚರ್ಚೆಯ ಸಂದರ್ಭದಲ್ಲಿ ಕಾರ್ತಿಕ್ ಅವರು ಧೋನಿ ಅನುಪಸ್ಥಿತಿಯ ಬಗ್ಗೆ ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ