ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ ಟ್ವಿಟರ್ ಖಾತೆಯನ್ನು ಗುರುವಾರ ಹ್ಯಾಕ್ ಮಾಡಿ ಕೆಲವು ಅಲಹ್ಯವಾದ ಕಮೆಂಟ್ಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ.
ಕೃನಾಲ್ ಪಾಂಡ್ಯರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ ಹ್ಯಾಕರ್ ಬಿಟ್‌ಕಾಯಿನ್‌ಗಳಿಗೆ ಬದಲಾಗಿ ಕ್ರಿಕೆಟಿಗನ ಖಾತೆಯನ್ನು ಮಾರಾಟ ಮಾಡಲಾಗುವುದು ಎಂದು ಟ್ವೀಟ್ ಮಾಡಿದ್ದಾನೆ.
ವರದಿಯ ಪ್ರಕಾರ ಹ್ಯಾಕರ್ ಕೆಲವು ಟ್ವಿಟರ್ ಬಳಕೆದಾರರಿಗೆ ಅಸಹ್ಯ ಕಮೆಂಟ್ ಮಾಡಿದ್ದಾನೆ. ಹ್ಯಾಕಿಂಗ್ ಮಾಡಿದ್ದ ಸಮಯದಲ್ಲಿ ಸುಮಾರು 10 ಟ್ವೀಟ್ ಮಾಡಲಾಗಿದೆ. ಇದೀಗ ಟ್ವಿಟರ್ ರೀಸ್ಟೋರ್ ಮಾಡಲಾಗಿದ್ದು, ಎಲ್ಲಾ ಕಮೆಂಟ್ಗಳು ಮತ್ತು ಟ್ವೀಟ್ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೃನಾಲ್ ಖಾತೆಯನ್ನು ಹ್ಯಾಕ್ ಮಾಡಿದ ವ್ಯಕ್ತಿ ಕಳೆದ ವರ್ಷ 2020 ರಂದು 100 ಕ್ಕೂ ಹೆಚ್ಚು ಉನ್ನತ ಪ್ರೋಫೈಲ್ ಹೊಂದಿರುವ ವ್ಯಕ್ತಿಗಳ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ವರದಿಯಾಗಿದೆ.
2019ರಲ್ಲಿ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವಾಟ್ಸನ್ ಅವರ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಕೆಲವು ಅಸಹ್ಯವಾದ ಫೋಟೋಗಳನ್ನು ಶೇರ್ ಮಾಡಲಾಗಿತ್ತು. 2021ರಲ್ಲಿ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥೀವ್ ಪಟೇಲ್ ಹ್ಯಾಕ್ ಮಾಡಲಾಗಿತ್ತು. ಅವರು ತಮ್ಮ ಹಿಂಬಾಲಕರಿಗೆ ತಮ್ಮ ಖಾತೆಯಿಂದ ಯಾವುದೇ ಚಟುವಟಿಕೆ ಕಂಡುಬಂದರೆ ಕಡೆಗಣಿಸಬೇಕೆಂದು ಮನವಿ ಮಾಡಿಕೊಂಡಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ