ಮುಂಬೈ: ಭಾರತ ತಂಡದ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಹಿಂದೆ ಘೋಷಿಸಿದಂತೆ 200 ಆಕ್ಸಿಜನ್ ಕಾಂನ್ಸಟ್ರೇಟರ್ಗಳನ್ನು ಕೋವಿಡ್-19 ಕೇಂದ್ರಗಳಿಗೆ ತಲುಪಿಸಿದ್ದಾರೆ.
"ದೇಶ ಎರಡನೇ ಅಲೆಯ ಕೋವಿಡ್ನಿಂದ ಸಾಕಷ್ಟು ಸಾವು ನೋವಿಗೆ ಒಳಗಾಗಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೆ ನಿಂತು ಹೋರಾಡಬೇಕಿದೆ. ಪ್ರತಿಯೊಬ್ಬರು ತ್ವರಿತ ಚೇತರಿಕೆಗಾಗಿ ನಮ್ಮ ಹೃದಯದಲ್ಲಿ ಪ್ರಾರ್ಥಿಸುತ್ತಾ ಹೊಸದಾಗಿ ಬಂದಿರುವ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಕೋವಿಡ್ 19 ಸೆಂಟರ್ಗಳಿಗೆ ಕಳುಹಿಸಲಾಗುತ್ತಿದೆ." ಎಂದು ಕೃನಾಲ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಹೋದರ ಹಾರ್ದಿಕ್, ನಾವು ಕಠಿಣ ಯುದ್ಧದ ಮಧ್ಯದಲ್ಲಿ ಸಿಲುಕಿದ್ದೇವೆ. ಹಾಗಾಗಿ ಅದನ್ನು ಜಯಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.
"ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ದೇಶವು ಅನುಭವಿಸುತ್ತಿರುವ ಕಷ್ಟವನ್ನು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಇಂತಹ ಕಷ್ಟದ ಸಂದರ್ಭದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳು, ಮುಂಚೂಣಿ ಕಾರ್ಮಿಕರಿಗೆ ಕೃತಜ್ಞತೆಗಳನ್ನು ಅರ್ಪಿಸಬೇಕು. ಕೃನಾಲ್, ನಾನು ಮತ್ತು ನಮ್ಮ ತಾಯಿ ಒಟ್ಟಾರೆ ನಮ್ಮ ಕುಟುಂಬ ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧಿಸಿದ್ದು, 200 ಆಕ್ಸಿಜನ್ ಕಾನ್ಸಂಟ್ರೇಟರ್ (ಆಮ್ಲಜನಕ ಸಾಂದ್ರಕ)ಗಳನ್ನು ಅಗತ್ಯವಿರುವ ಭಾರತದ ಗ್ರಾಮೀಣ ಪ್ರದೇಶಗಳಿಗೆ ದಾನ ಮಾಡಲು ತೀರ್ಮಾನಿಸಿದ್ದೇವೆ" ಎಂದು ತಿಳಿಸಿದ್ದಾರೆ. ಇದೀಗ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಇದನ್ನು ಓದಿ:ಕೊರೊನಾ ಹೋರಾಟಕ್ಕೆ ಬಿಸಿಸಿಐ ಸಾಥ್.. 2000 ಆಕ್ಸಿಜನ್ ಕಾನ್ಸಂಟ್ರೇಟರ್ ದೇಣಿಗೆ ನೀಡಲು ನಿರ್ಧಾರ