ಕರ್ನಾಟಕ

karnataka

ETV Bharat / sports

'ಹರ್ಷಲ್ ಪಟೇಲ್​ ಉತ್ತಮ ಬೌಲರ್​​, ಆದರೆ'.. ಈ ಪ್ಲೇಯರ್​ ಇರಬೇಕಾಗಿತ್ತು ಎಂದ ಮಾಜಿ ಕ್ರಿಕೆಟಿಗ - ಈಟಿವಿ ಭಾರತ ಕರ್ನಾಟಕ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೋಸ್ಕರ ಟೀಂ ಇಂಡಿಯಾ ಪ್ರಕಟಗೊಂಡಿದೆ. 15ರ ಸದಸ್ಯರ ಬಳಗದಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ನೀಡದಿರುವ ವಿಚಾರವಾಗಿ ಅನೇಕ ಟೀಕೆ ವ್ಯಕ್ತವಾಗಲು ಶುರುವಾಗಿದೆ.

mohammed shami
mohammed shami

By

Published : Sep 13, 2022, 9:37 AM IST

ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್​ ಟೂರ್ನಾಮೆಂಟ್​​​ಗೋಸ್ಕರ ಟೀಂ ಇಂಡಿಯಾ ನಿನ್ನೆ ಪ್ರಕಟಗೊಂಡಿದೆ. ಅಳೆದು ತೂಗಿ 15 ಪ್ಲೇಯರ್ಸ್​​ಗೆ ಮಣೆ ಹಾಕಲಾಗಿದೆ. ತಂಡದಲ್ಲಿ ಮೂರನೇ ವೇಗಿಯಾಗಿ ಬೌಲಿಂಗ್ ಟ್ರಂಪ್​​ ಕಾರ್ಡ್​ ಹರ್ಷಲ್​​ ಪಟೇಲ್​​ಗೆ ಅವಕಾಶ ನೀಡಲಾಗಿದೆ.

ಟೀಂ ಇಂಡಿಯಾ ಪ್ರಕಟಗೊಳ್ಳುತ್ತಿದ್ದಂತೆ ಅನೇಕರು ತರಹೇವಾರಿ ಕಮೆಂಟ್​ ಮಾಡಲು ಶುರು ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಆಯ್ಕೆ ಸಮಿತಿ ಮಾಜಿ ಸದಸ್ಯರಾಗಿರುವ ಕೃಷ್ಣಮಾಚಾರಿ ಶ್ರೀಕಾಂತ್​​ ಸಹ ತಮ್ಮ ಅಭಿಪ್ರಾಯ ಹೊರಹಾಕಿದ್ದು, ತಂಡದಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ನೀಡಬಹುದಾಗಿತ್ತು ಎಂದು ತಿಳಿಸಿದ್ದಾರೆ. ಒಂದು ವೇಳೆ ನಾನು ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದರೆ, ಖಂಡಿತವಾಗಿ ಮೊಹಮ್ಮದ್ ಶಮಿ ಅವರಿಗೆ ತಂಡದಲ್ಲಿ ಸ್ಥಾನ ನೀಡುತ್ತಿದ್ದೆ. ನಾವು ಆಸ್ಟ್ರೇಲಿಯಾದಲ್ಲಿ ಆಡಲಿದ್ದೇವೆ. ಆ ಬೌಲರ್​ ಬಳಿ ನಿಜವಾದ ಆ್ಯಕ್ಷನ್​, ಬೌನ್ಸ್​ ಇದೆ. ಬಹುಶಃ ಹರ್ಷಲ್ ಪಟೇಲ್​ ಬದಲಿಗೆ ಶಮಿಗೆ ಚಾನ್ಸ್ ನೀಡಬಹುದಿತ್ತು ಎಂದಿದ್ದಾರೆ.

ಇದನ್ನೂ ಓದಿ:'ಕನಸು ನನಸಾಗಿದೆ'.. ವಿಶ್ವಕಪ್​​ ತಂಡದಲ್ಲಿ ಸ್ಥಾನ ಪಡೆದ ದಿನೇಶ್ ಪ್ರತಿಕ್ರಿಯೆ

ಹರ್ಷಲ್​ ಓರ್ವ ಉತ್ತಮ ಬೌಲರ್​. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಮೊಹಮ್ಮದ್​ ಶಮಿ ಉತ್ತಮ ಆಯ್ಕೆ. ಕಳೆದ ಐಪಿಎಲ್​​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಮಿ ನನ್ನ ಮೊದಲ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊಹಮ್ಮದ್ ಶಮಿ ಓರ್ವ ಮುಂಚೂಣಿ ಬೌಲರ್. ಕಳೆದ ವರ್ಷದಿಂದ ಅವರ ದಾಖಲೆಯನ್ನೊಮ್ಮೆ ಪರಿಶೀಲಿಸಿ. ಆರಂಭದಲ್ಲೇ ವಿಕೆಟ್ ಪಡೆದುಕೊಂಡು ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಈ ಸಲದ ವಿಶ್ವಕಪ್​​ನಲ್ಲಿ ಬುಮ್ರಾ, ಭುವನೇಶ್ವರ್​ ಕುಮಾರ್ ಜೊತೆ ಹರ್ಷಲ್ ಪಟೇಲ್ ಹಾಗೂ ಅರ್ಷದೀಪ್ ಸಿಂಗ್​ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಸ್ಯಾಮ್ಸನ್​​​ಗೆ ಅವಕಾಶ ನೀಡಬೇಕಾಗಿತ್ತು ಎಂದ ಕನೇರಿಯಾ: ಈ ಸಲದ ವಿಶ್ವಕಪ್​ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಕಾರಣ ಟೀಂ ಇಂಡಿಯಾ ಸಂಜು ಸ್ಯಾಮನ್ಸ್​​ಗೆ ಅವಕಾಶ ನೀಡಬೇಕಾಗಿತ್ತು ಎಂದು ಪಾಕಿಸ್ತಾನದ ಮಾಜಿ ಆಟಗಾರ ದಾನೀಶ್ ಕನೇರಿಯಾ ಅಭಿಪ್ರಾಯ ಪಟ್ಟಿದ್ದಾರೆ. ತಂಡದಲ್ಲಿ ರಿಷಭ್ ಪಂತ್ ಜಾಗದಲ್ಲಿ ಸ್ಯಾಮ್ಸನ್​​ಗೆ ಅವಕಾಶ ನೀಡಬೇಕಾಗಿತ್ತು ಎಂದಿರುವ ಅವರು, ವಿದೇಶಿ ನೆಲದಲ್ಲಿ ಆತ ಉತ್ತಮವಾಗಿ ಆಡಿದ್ದಾರೆ ಎಂದಿದ್ದಾರೆ.

ABOUT THE AUTHOR

...view details