ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿದೆ ಎಂದು ಹೇಳುವುದನ್ನು ಕೇಳಿದ್ದೇವೆ. ಅಲ್ಲದೇ ಈ ದೇಶದಲ್ಲಿ ಕ್ರಿಕೆಟ್ ಇರುವ ಕ್ರೇಜ್ ಬೇರಾವ ಕ್ರೀಡೆಗೂ ಇಲ್ಲ. ಈ ಅಭಿಮಾನವನ್ನೇ ಕೆಲ ಜನರು ದುರ್ಬಳಕೆ ಮಾಡಿಕೊಂಡು, ಹಣ ಮಾಡುತ್ತಿದ್ದಾರೆ. ಆನ್ಲೈನಲ್ನಲ್ಲಿ ಮಾರಾಟವಾದ ಟಿಕೆಟ್‌ಗಳನ್ನು ದುಬಾರಿ ಹಣಕ್ಕೆ ಮಾರಾಟ ಮಾಡುವ ದಂಧೆ ಬೆಳಕಿಗೆ ಬಂದಿದೆ. ಕೋಲ್ಕತ್ತಾ ಪೊಲೀಸರು ಈ ಜಾಡಿನ ಮೂಲ ಪತ್ತೆ ಹಚ್ಚಲು ಬುಕ್ ಮೈ ಶೋ ಅಧಿಕಾರಿಗಳನ್ನೇ ವಿಚಾರಣೆಗೆ ಒಳಪಡಿಸಿದ್ದಾರೆ.
ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ಭಾರತ - ದಕ್ಷಿಣ ಆಫ್ರಿಕಾ ಪಂದ್ಯ ನಡೆಯಲಿದೆ. ಈ ಪಂದ್ಯದ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದೆ. ಆದರೆ ಪಂದ್ಯ ಇನ್ನು ಎರಡು ದಿನ ಬಾಕಿ ಇರುವಾಗ ಟಿಕೆಟ್ ಕಳ್ಳದಂಧೆ ಹೆಚ್ಚಾಗಿದೆ. ಇದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಅನ್ನು ತಲೆನೋವಿಗೂ ಕಾರಣ ಆಗಿದೆ. ಈ ಕಳ್ಳದಂಧೆ ಬೆನ್ನಟ್ಟಿದ ಕೋಲ್ಕತ್ತಾ ಪೊಲೀಸರು ಸಿಎಬಿ ಅಧ್ಯಕ್ಷ ಸ್ನೇಹಶಿಸ್ ಗಂಗೋಪಾಧ್ಯಾಯ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಾಶಿಸ್ ಗಂಗೋಪಾಧ್ಯಾಯ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೇ ಈ ಬಗ್ಗೆ ಗಂಗೂಲಿ ಅವರಿಂದ ಲಿಖಿತ ಉತ್ತರ ಕೇಳಲಾಗಿದೆ.
ಇದರ ಜೊತೆಗೆ ಕೋಲ್ಕತ್ತಾ ಪೊಲೀಸ್ ಡಿಸಿ ದಕ್ಷಿಣ ಪ್ರಿಯಬ್ರತಾ ರಾಯ್ ಮತ್ತು ಕೋಲ್ಕತ್ತಾ ಪೊಲೀಸರ ರೌಡಿ ನಿಗ್ರಹ ದಳದ ಪತ್ತೆದಾರರು ಈಗಾಗಲೇ ಮೈದಾನ್ ಪೊಲೀಸ್ ಠಾಣೆಯಲ್ಲಿ 'ಬುಕ್ ಮೈ ಶೋ' ಅಧಿಕಾರಿಗಳನ್ನು ಕರೆಸಿ ವಿಚಾರಣೆ ಆರಂಭಿಸಿದ್ದಾರೆ. ಈ ಪ್ರಕರಣ ತನಿಖೆ ಕೈಗೊಂಡಿರುವ ಪೊಲೀಸರು ಲಾಲ್ ಬಜಾರ್ ವಿವಿಧ ಸ್ಥಳಗಳಿಂದ ಏಳು ಜನರನ್ನು ಬಂಧಿಸಿದೆ. ತನಿಖಾ ಅಧಿಕಾರಿಗಳು ಆನ್‌ಲೈನ್‌ನಲ್ಲಿ ವಿಶ್ವಕಪ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಯಾರು ಖರೀದಿಸಿದ್ದಾರೆ ಮತ್ತು ಅವರು ಆ ಟಿಕೆಟ್‌ಗಳನ್ನು ಹೇಗೆ ಬ್ಲಾಕ್ ಮಾರ್ಕೆಟ್ ಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.