ಮುಂಬೈ:ನಾಯಕ ಹಾರ್ದಿಕ್ ಪಾಂಡ್ಯರ ಅರ್ಧಶತಕದ ಹೊರತಾಗಿಯೂ ಗುಜರಾತ್ ಟೈಟನ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ಗಳಿಸಿದೆ.
ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ 49 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ಗಳ ಸಹಿತ 67 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ವೃಧ್ದಿಮಾನ್ ಸಹಾ 25 ಮತ್ತು ಡೇವಿಡ್ ಮಿಲ್ಲರ್ 27 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೈಟನ್ಸ್ಗೆ 7 ರನ್ಗಳಿಸಿದ್ದ ಶುಬ್ಮನ್ ಗಿಲ್ ವಿಕೆಟ್ ಪಡೆಯುವ ಮೂಲಕ ಸೌಥಿ ಮೊದಲ ಆಘಾತ ನೀಡಿದರು. ಆದರೆ 2ನೇ ವಿಕೆಟ್ಗೆ ಒಂದಾದ ಹಾರ್ದಿಕ್ ಮತ್ತು ಸಹಾ 75 ರನ್ಗಳ ಜೊತೆಯಾಟ ನೀಡಿದರು. ಯಾವುದೇ ಹಂತದಲ್ಲಿ ಟಿ20ಗೆ ತಕ್ಕಂತೆ ಬ್ಯಾಟ್ ಬೀಸದ ಸಹಾ 25 ಎಸೆತಗಳಲ್ಲಿ 25 ರನ್ ಸಿಡಿಸಿ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರು.
3ನೇ ವಿಕೆಟ್ ಡೇವಿಡ್ ಮಿಲ್ಲರ್ ಮತ್ತು ಪಾಂಡ್ಯ 23 ಎಸೆತಗಳಲ್ಲಿ 50 ರನ್ ಸೇರಿಸಿ ಬೃಹತ್ ಮೊತ್ತದ ಭರವಸೆ ಮೂಡಿಸಿದ್ದರು. ಆದರೆ 20 ಎಸೆತಗಳಲ್ಲಿ 27 ರನ್ಗಳಿಸಿದ್ದ ಮಿಲ್ಲರ್ ಶಿವಂ ಮಾವಿಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಗುಜರಾತ್ ಪತನ ಆರಂಭವಾಯಿತು. ನಂತರದ ಓವರ್ ಅಂತರದಲ್ಲಿ 67 ರನ್ಗಳಿಸಿದ್ದ ಪಾಂಡ್ಯ ಮತ್ತು ಕಳೆದ ಪಂದ್ಯದ ಹೀರೋ ರಸೆಲ್ ಒಂದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ರಸೆಲ್ ಎಸೆದ 20ನೇ ಓವರ್ನಲ್ಲಿ ಗುಜರಾತ್ ಟೈಟನ್ಸ್ 5 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿತು. ಅಭಿನವ್ ಮನೋಹರ್(2),ಲಾಕಿ ಫರ್ಗುಸನ್(0), ತೆವಾಟಿಯಾ(17) ಮತ್ತು ಯಶ್ ದಯಾಳ್ ಖಾತೆ ತೆರೆಯದೆ ರಸೆಲ್ಗೆ ವಿಕೆಟ್ ಒಪ್ಪಿಸಿದರು.