ಕರ್ನಾಟಕ

karnataka

ETV Bharat / sports

ಕೆಕೆಆರ್ ಸೇರಿದ ಸ್ಫೋಟಕ ಬ್ಯಾಟರ್​: ಅಲೆಕ್ಸ್​ ಹೇಲ್ಸ್​ ಸ್ಥಾನಕ್ಕೆ ಆ್ಯರೋನ್​​ ಫಿಂಚ್​ ಆಯ್ಕೆ

ಬಯೋಬಬಲ್​ನಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತೋರೆದಿರುವ ಅಲೆಕ್ಸ್ ಹೇಲ್ಸ್ ಸ್ಥಾನಕ್ಕೆ ಇದೀಗ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​​ ಆಯ್ಕೆಯಾಗಿದ್ದಾರೆ.

By

Published : Mar 11, 2022, 10:12 PM IST

Kolkata Knight Riders Sign Aaron Finch
Kolkata Knight Riders Sign Aaron Finch

ಮುಂಬೈ:ಇಂಡಿಯನ್​ ಪ್ರೀಮಿಯರ್ ಲೀಗ್​ ಆರಂಭಗೊಳ್ಳಲು ದಿನಗಣನೆ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದಿಂದ ಹೊರಗುಳಿದಿದ್ದ ಅಲೆಕ್ಸ್​ ಹೇಲ್ಸ್​ ಸ್ಥಾನಕ್ಕೆ ಇದೀಗ ಮತ್ತೋರ್ವ ಸ್ಫೋಟಕ ಬ್ಯಾಟರ್ ಆಯ್ಕೆಯಾಗಿದೆ.

ಇಂಡಿಯನ್​ ಪ್ರೀಮಿಯರ್ ಲೀಗ್​​ಗೋಸ್ಕರ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅನ್​​ಸೋಲ್ಡ್​​ ಆಗಿದ್ದ ಫಿಂಚ್​​ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿಕೊಳ್ಳಲಿದ್ದಾರೆ. 2021ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಚಾಂಪಿಯನ್​​ ಪಟ್ಟಕ್ಕೇರಿಸಿದ್ದ ಆ್ಯರೋನ್ ಫಿಂಚ್​ 1.5 ಕೋಟಿ ರೂ ಮೂಲ ಬೆಲೆ ಹೊಂದಿದ್ದರು. ಆದರೆ, ಇವರ ಖರೀದಿಗೆ ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಿಸಿರಲಿಲ್ಲ. ಆದರೆ, ಇದೀಗ ಕೆಕೆಆರ್ ತಂಡ ಇವರ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಕೆಕೆಆರ್​​ ಅಲೆಕ್ಸ್ ಹೆಲ್ಸ್ ಸ್ಥಾನಕ್ಕೆ ಫಿಂಚ್​ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದೆ. ಇವರಿಗೆ 1.5 ಕೋಟಿ ರೂ. ನೀಡಿದೆ.

ಇದನ್ನೂ ಓದಿ:IPLಗೆ ರಿಎಂಟ್ರಿ ಕೊಟ್ಟ ಯಾರ್ಕರ್ ಕಿಂಗ್: ರಾಜಸ್ಥಾನ ರಾಯಲ್ಸ್​​ ಪಾಳಯ ಸೇರಿದ ಮಲಿಂಗ

ಆಸ್ಟ್ರೇಲಿಯಾ ಪರ 88 ಟಿ20 ಪಂದ್ಯಗಳನ್ನಾಡಿರುವ ಫಿಂಚ್​​ 2,686 ರನ್​ಗಳಿಕೆ ಮಾಡಿದ್ದು, ಇದರಲ್ಲಿ ಎರಡು ಶತಕ ಹಾಗೂ 15 ಅರ್ಧಶತಕಗಳಿವೆ. ಐಪಿಎಲ್​​ನಲ್ಲಿ 87 ಪಂದ್ಯಗಳನ್ನಾಡಿದ್ದು, 2000 ರನ್​ಗಳಿಸಿದ್ದಾರೆ. 2020ರಲ್ಲಿ ಆರ್​ಸಿಬಿ ಪರ ಆಡಿರುವ ಫಿಂಚ್​​ 12 ಪಂದ್ಯಗಳಿಂದ 268ರನ್​ಗಳಿಕೆ ಮಾಡಿದ್ದು, ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಇವರನ್ನ ಕೈಬಿಡಲಾಗಿತ್ತು. ಇದಾದ ಬಳಿಕ ಇವರು ಅನ್​​ಸೋಲ್ಡ್​ ಆಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೆಕೆಆರ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ವಿರುದ್ಧ ಸೆಣಸಾಡಲಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ 'ಪಿಂಕ್​ ಬಾಲ್'​ ಟೆಸ್ಟ್​​​: ರೋಹಿತ್ ಪಡೆಗೆ ಕ್ಲೀನ್‌ಸ್ವೀಪ್​ ಗುರಿ, ಕೊಹ್ಲಿ ಶತಕದಾಟದ ನಿರೀಕ್ಷೆ

15ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ ಮಾರ್ಚ್ 26ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಸಲ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ABOUT THE AUTHOR

...view details