ಕರ್ನಾಟಕ

karnataka

ETV Bharat / sports

IPL 2022: ಚೆನ್ನೈ-ಕೋಲ್ಕತ್ತಾ ಹಣಾಹಣಿ: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಕೆಕೆಆರ್​​ - Chennai Super Kings

ಹೊಡಿ ಬಡಿ ಆಟ ಇಂಡಿಯನ್​ ಪ್ರೀಮಿಯರ್ ಲೀಗ್​ಗೆ ಚಾಲನೆ ಸಿಕ್ಕಿದ್ದು, ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡಗಳ ನಡುವೆ ಕಾದಾಟ ಶುರುವಾಗಿದೆ.

Chennai Super Kings and Kolkata Knight Riders Match
Chennai Super Kings and Kolkata Knight Riders Match

By

Published : Mar 26, 2022, 7:05 PM IST

Updated : Mar 26, 2022, 7:20 PM IST

ಮುಂಬೈ:ಇಂಡಿಯನ್​ ಪ್ರೀಮಿಯರ್ ಲೀಗ್​​ನ 15ನೇ ಆವೃತ್ತಿಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್​ ಅಪ್ ತಂಡ ಕೋಲ್ಕತ್ತಾ ನೈಟ್​​ ಮುಖಾಮುಖಿಯಾಗಿವೆ. ಟಾಸ್​ ಗೆದ್ದಿರುವ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡ ಬೌಲಿಂಗ್​​ ಆಯ್ದುಕೊಂಡಿದೆ. ಮುಂಬೈನ ವಾಖೆಂಡೆ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿರುವ ಶ್ರೇಯಸ್ ಅಯ್ಯರ್​ ಕೋಲ್ಕತ್ತಾ ನೈಟ್​ ರೈಡರ್ಸ್ ಮುನ್ನಡೆಸುತ್ತಿದ್ದು, ಆಲ್​ರೌಂಡರ್​ ರವೀಂದ್ರ ಜಡೇಜಾ ಸಿಎಸ್​​ಕೆ ತಂಡದ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಉಭಯ ತಂಡದ ನಾಯಕತ್ವ ಯುವ ಆಟಗಾರರು ಹೊತ್ತುಕೊಂಡಿರುವ ಕಾರಣ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವುದರೊಂದಿಗೆ ಅಭಿಯಾನ ಆರಂಭ ಮಾಡುವ ಇರಾದೆ ಹೊಂದಿದ್ದಾರೆ.

ಕೆಕೆಆರ್ ತಂಡ ಆಡುವ 11ರ ಬಳಗದಲ್ಲಿ ವಿದೇಶಿ ಆಟಗಾರರಾದ ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನಿಲ್ ನರೈನ್​ಗೆ ಮಣೆ ಹಾಕಿದ್ದು, ಚೆನ್ನೈ ನಾಲ್ಕು ವಿದೇಶಿ ಆಟಗಾರರಾದ ಕಾನ್ವೇ, ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆಗೆ ಕಣಕ್ಕಿಳಿಸಿದೆ. ಕಳೆದ ವರ್ಷದ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಕೆಕೆಆರ್​ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.

ಉಭಯ ತಂಡಗಳ ಆಡುವ 11ರ ಬಳಗ ಇಂತಿದೆ: ಚೆನ್ನೈ ಸೂಪರ್ ಕಿಂಗ್ಸ್​: ಋತುರಾಜ್ ಗಾಯಕ್ವಾಡ್​, ಡ್ವೇನ್​ ಕಾನ್ವೇ, ರಾಬಿನ್​ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ(ಕ್ಯಾಪ್ಟನ್​), ಶಿವಂ ದುಬೆ( ಎಂಎಸ್​ ಧೋನಿ(ವಿ.ಕೀ), ಡ್ವೇನ್ ಬ್ರಾವೋ, ಮಿಚೆನ್​ ಸ್ನಾಚೆರ್​, ಆಡ್ಯಂ ಮಿಲ್ನೆ, ತುಷಾರ್ ದೇಶಪಾಂಡೆ

ಕೋಲ್ಕತ್ತಾ ನೈಟ್​ ರೈಡರ್ಸ್​:ವೆಂಕಟೇಶ್ ಅಯ್ಯರ್​, ಅಂಜಿಕ್ಯಾ ರಹಾನೆ, ಶ್ರೇಯಸ್ ಅಯ್ಯರ್​(ಕ್ಯಾಪ್ಟನ್​) ನಿತೀಶ್ ರಾಣೆ, ಸ್ಯಾಮ್ ಬಿಲ್ಲಿಂಗ್ಸ್​​(ವಿ.ಕೀ), ಸುನಿಲ್ ನರೈನ್, ಜಾಕ್​​ಸನ್​, ಉಮೇಶ್ ಯಾದವ್​, ಶಿವಂ ಮಾವಿ, ವರುಣ್​ ಚಕ್ರವರ್ತಿ

Last Updated : Mar 26, 2022, 7:20 PM IST

ABOUT THE AUTHOR

...view details