ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಮತ್ತು ಪ್ಲೇ ಆಫ್ ನಡೆಯುವ ಸ್ಥಳಗಳು ಅಂತಿಮವಾಗಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಎಲಿಮಿನೇಟರ್ ಮತ್ತು ಮೊದಲ ಕ್ವಾಲಿಫೈಯರ್ ಪಂದ್ಯಗಳು ಹಾಗೂ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2ನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ನಡೆಯಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈಗಾಗಲೇ 15ನೇ ಆವೃತ್ತಿಯ ಐಪಿಎಲ್ ಚಾಲ್ತಿಯಲ್ಲಿದೆ. 22 ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಇದೀಗ ವರದಿಗಳ ಪ್ರಕಾರ, ಬಿಸಿಸಿಐ ನಾಕೌಟ್ ಪಂದ್ಯಗಳ ಸ್ಥಳ ಮತ್ತು ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದು, ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎನ್ನಲಾಗಿದೆ.
ಮುಂದಿನ ವಾರ ಐಪಿಎಲ್ ಗವರ್ನರ್ ಕೌನ್ಸಿಲ್ ಸಭೆ ನಡೆಯಲಿದ್ದು, 15ನೇ ಆವೃತ್ತಿಯ ಪ್ಲೇ ಆಫ್ ಬಗ್ಗೆ ಅಧಿಕೃತ ಮಾಹಿತಿಯನ್ನು ಘೋಷಿಸಲಿದೆ ಎನ್ನಲಾಗಿದೆ. ಈಗಾಗಲೆ ಬಿಡುಗಡೆಯಾಗಿರುವ ವೇಳಾಪಟ್ಟಿಯ ಪ್ರಕಾರ 70 ಪಂದ್ಯಗಳ ಲೀಗ್ ಮೇ 22ಕ್ಕೆ ಅಂತ್ಯವಾಗಲಿದೆ. ಕೊನೆಯ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.
ಪ್ರಸ್ತುತ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು, ಒಂದು ಸೋಲಿನೊಂದಿಗೆ 6 ಅಂಕ ಪಡೆದು ಅಗ್ರಸ್ಥಾನ ಪಡೆದುಕೊಂಡಿದೆ. ಕೆಕೆಆರ್ ಮತ್ತು ಲಖನೌ ಸೂಪರ್ ಜೈಂಟ್ಸ್ 5 ಪಂದ್ಯಗಳಿಂದ 6 ಮತ್ತು ಗುಜರಾತ್ ಲಯನ್ಸ್ 4 ಪಂದ್ಯಗಳಿಂದ 6 ಮತ್ತು ಆರ್ಸಿಬಿ 5 ಪಂದ್ಯಗಳಿಂದ 6 ಅಂಕ ಪಡೆದು ಕ್ರಮವಾಗಿ ಮೊದಲ 5 ಸ್ಥಾನ ಪಡೆದುಕೊಂಡಿವೆ.
ಇದನ್ನೂ ಓದಿ:2018ರಲ್ಲಿ 105 ಕೆಜಿ, 2021ರಲ್ಲಿ 78: U-19 ತಂಡದಿಂದ ಹೊರಬಿದ್ದು ವಿಶ್ವಕಪ್, IPL ಸಾಧಕನಾದ ತೀಕ್ಷಣ!