ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​ನಲ್ಲಿ ವೈಫಲ್ಯ: ಕೊಹ್ಲಿ ODI ನಾಯಕತ್ವದಲ್ಲಿ ಮುಂದುವರಿಯುವುದು ಅನುಮಾನ! - ಏಕದಿನ ಕ್ರಿಕೆಟ್​ಗೆ ಕೊಹ್ಲಿ ನಾಯಕತ್ವ

2023ರ ಏಕದಿನ ವಿಶ್ವಕಪ್​ಗೂ ಮುನ್ನ ಭಾರತ ತವರಿನಲ್ಲಿ ಕೇವಲ 3 ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಆದರೆ, 2023ರ ಜೂನ್ ​ವೇಳೆಗೆ ಭಾರತ 17 ಟಿ20 ಪಂದ್ಯಗಳನ್ನಾಡಲಿದೆ. ಏಕದಿನ ವಿಶ್ವಕಪ್​ಗೆ ಇನ್ನೂ ಸಮಯವಿದ್ದರೂ ಸೀಮಿತ ಓವರ್​ಗಳ ತಂಡವನ್ನು ಇಬ್ಬರು ನಾಯಕರು ಮುನ್ನಡೆಸುವುದಕ್ಕೆ ಬಿಸಿಸಿಐ ಆಸಕ್ತಿ ತೋರದಿರಬಹುದು ಎಂದು ಹೇಳಲಾಗುತ್ತಿದೆ..

Kohli's captaincy future to be discussed
ವಿರಾಟ್ ಕೊಹ್ಲಿ ನಾಯಕತ್ವ

By

Published : Nov 2, 2021, 4:55 PM IST

ನವದೆಹಲಿ :ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವುದರಿಂದ ಏಕದಿನ ಕ್ರಿಕೆಟ್​ ತಂಡದ ನಾಯಕತ್ವದಲ್ಲಿ ವಿರಾಟ್​ ಕೊಹ್ಲಿ ಮುಂದುವರಿಯುವ ಸಾಧ್ಯತೆ ಕಷ್ಟ ಎನ್ನಲಾಗುತ್ತಿದೆ.

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ತಂಡ ಮತ್ತು ಹೊಸ ಟಿ20 ನಾಯಕನನ್ನು ಆಯ್ಕೆ ಮಾಡಲು ನಡೆಸುವ ಸಭೆಯಲ್ಲಿ ಕೊಹ್ಲಿ ಏಕದಿನ ನಾಯಕತ್ವದ ಬಗ್ಗೆಯೂ ಚರ್ಚೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಈಗಾಗಲೇ ಟಿ20 ವಿಶ್ವಕಪ್ ಬಳಿಕ ಟಿ20 ವಿಶ್ವಕಪ್​​ ನಂತರ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್​ ಕೊಹ್ಲಿ ಹೇಳಿದ್ದಾರೆ. ಆದರೆ, ಪ್ರಸ್ತುತ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸುವಲ್ಲಿ ಕೊಹ್ಲಿ ವಿಫಲರಾಗಿರುವುದರಿಂದ ಭವಿಷ್ಯದಲ್ಲಿ ಏಕದಿನ ಕ್ರಿಕೆಟ್​​ ತಂಡದ ನಾಯಕನಾಗಿ ಮುಂದುವರಿಯುವ ಸಾಧ್ಯತೆ ಕಡಿಮೆಯಿದೆ.

ನವೆಂಬರ್ 17ರಿಂದ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ ನಡೆಯಲಿದೆ. ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಸಿ ಮುಂದಿನ ಎರಡು ಮೂರು ದಿನಗಳಲ್ಲಿ ಹೊಸ ನಾಯಕನನ್ನು ಘೋಷಿಸಲಿದ್ದಾರೆ.

ವಿರಾಟ್​ ಕೊಹ್ಲಿ ನಾಯಕನಾಗಿ ಮತ್ತೊಂದು ಐಸಿಸಿ ಟೂರ್ನಮೆಂಟ್​ನಲ್ಲಿ ವಿಫಲರಾದರೆ, ಭವಿಷ್ಯದಲ್ಲಿ ಸೀಮಿತ ಓವರ್​ಗಳ ತಂಡದ ನಾಯಕನಾಗಿ ಮುಂದುವರಿಯುವುದು ಅನುಮಾನ ಎಂಬ ಸುದ್ದಿ ಟಿ20 ವಿಶ್ವಕಪ್​ಗೂ ಮುನ್ನವೇ ಕೇಳಿ ಬಂದಿದ್ದವು.

ಇದೀಗ ಭಾರತ ಕೊಹ್ಲಿ ನಾಯಕತ್ವದಲ್ಲಿ 2 ಹೀನಾಯ ಸೋಲು ಕಂಡಿದೆ. ಆದ್ದರಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಆಯ್ಕೆ ಸಮಿತಿಯೊಂದಿಗೆ ಚರ್ಚೆ ನಡೆಸಿ ನಾಯಕತ್ವದ ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

2023ರ ಏಕದಿನ ವಿಶ್ವಕಪ್​ಗೂ ಮುನ್ನ ಭಾರತ ತವರಿನಲ್ಲಿ ಕೇವಲ 3 ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಆದರೆ, 2023ರ ಜೂನ್ ​ವೇಳೆಗೆ ಭಾರತ 17 ಟಿ20 ಪಂದ್ಯಗಳನ್ನಾಡಲಿದೆ. ಏಕದಿನ ವಿಶ್ವಕಪ್​ಗೆ ಇನ್ನೂ ಸಮಯವಿದ್ದರೂ ಸೀಮಿತ ಓವರ್​ಗಳ ತಂಡವನ್ನು ಇಬ್ಬರು ನಾಯಕರು ಮುನ್ನಡೆಸುವುದಕ್ಕೆ ಬಿಸಿಸಿಐ ಆಸಕ್ತಿ ತೋರದಿರಬಹುದು ಎಂದು ಹೇಳಲಾಗುತ್ತಿದೆ.

"ಪ್ರಸ್ತುತ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ತಂಡವನ್ನು ನಿರ್ಧರಿಸುವುದು ಮೊದಲ ಕೆಲಸವಾಗಿದೆ. ರೋಹಿತ್ ಶರ್ಮಾ ತಾವೂ ಕಿವೀಸ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುವುದಿಲ್ಲ ಎಂದೂ ಇನ್ನೂ ಹೇಳಿಲ್ಲ. ಅವರೇಕೆ ತಂಡವನ್ನು ಮುನ್ನಡೆಸಬಾರದು?. ಇದು ಅವರ ಸಂಪೂರ್ಣ ನಾಯಕನಾಗಿ ಮೊದಲ ಸರಣಿಯಾಗಿದೆ" ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಇದನ್ನು ಓದಿ:T20 World Cup:ಚಹಾಲ್ ಟಿ20 ವಿಶ್ವಕಪ್​ ಆಡದಿರುವುದು ದುರಾದೃಷ್ಟಕರ: ಇಮ್ರಾನ್ ತಾಹೀರ್​

ABOUT THE AUTHOR

...view details