ಕರ್ನಾಟಕ

karnataka

By

Published : Jun 15, 2021, 8:37 PM IST

ETV Bharat / sports

ಭಾರತಕ್ಕಾಗಿ ವಿರಾಟ್​ ಕೊಹ್ಲಿ WTC ಟ್ರೋಫಿ ಗೆಲ್ಲುವ ಅಗತ್ಯವಿದೆ: ಇಯಾನ್ ಬಿಷಪ್

WTC ಫೈನಲ್​ನ ಅಧಿಕೃತ ಪ್ರಸಾರಕರಾಗಿರುವ ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಷಪ್​, ಕಳೆದ ವರ್ಷ ಭಾರತದಲ್ಲಿನ ಕೊರೊನಾ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಅದರಲ್ಲೂ ಕಳೆದ 6 ತಿಂಗಳು ತುಂಬಾ ಕಳವಳಕಾರಿಯಾಗಿದೆ. ಹಾಗಾಗಿ ಕೊಹ್ಲಿ ಮತ್ತು ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಬೇಕಿದೆ ಎಂದು ಹೇಳಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್

ಸೌತಾಂಪ್ಟನ್: ಭಾರತ ತಂಡ ಶುಕ್ರವಾರ ನ್ಯೂಜಿಲ್ಯಾಂಡ್​ ವಿರುದ್ಧ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಸೆಣಸಾಡಲಿದೆ. ಲಕ್ಷಾಂತರ ಕಣ್ಣುಗಳು ಈ ಪಂದ್ಯಕ್ಕಾಗಿ ಎದುರು ನೋಡುತ್ತಿವೆ.

ಕೊಹ್ಲಿ ನಾಯಕನಾಗಿ ಯಶಸ್ವಿಯಾದರೂ ಇದುವರೆಗೂ ಯಾವುದೇ ದೊಡ್ಡ ಪ್ರಶಸ್ತಿಯನ್ನು ಗೆಲ್ಲದಿರುವುದರಿಂದ ಈ ಚಾಂಪಿಯನ್​ಶಿಪ್ ಕೊಹ್ಲಿ ಪಾಲಿಗೆ ಮಹತ್ವದ್ದಾಗಿದೆ. ಮತ್ತು ಗೆಲ್ಲುವುದು ಅನಿವಾರ್ಯವಾಗಿದೆ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಇಯಾನ್ ಬಿಷಪ್​ ಹೇಳಿದ್ದಾರೆ.

WTC ಫೈನಲ್​ನ ಅಧಿಕೃತ ಪ್ರಸಾರಕರಾಗಿರುವ ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಭಾರತದಲ್ಲಿನ ಕೊರೊನಾ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಅದರಲ್ಲೂ ಕಳೆದ 6 ತಿಂಗಳು ತುಂಬಾ ಕಳವಳಕಾರಿಯಾಗಿದೆ, ಹಾಗಾಗಿ ಕೊಹ್ಲಿ ಮತ್ತು ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಬೇಕಿದೆ ಎಂದು ಬಿಷಪ್ ಹೇಳಿದ್ದಾರೆ.

" ಇದು ವಿರಾಟ್​ ಕೊಹ್ಲಿಗೆ ಬಹಳ ದೊಡ್ಡ ಗೌರವವಾಗಲಿದೆ. ಅತ ನಾಯಕನಾಗಿ ತಂಡವನ್ನು ಮುಂದೆ ನಿಂತು ನಡೆಸುವುದು ದೊಡ್ಡ ವಿಷಯವಾಗಿದೆ. ಕೇನ್ ವಿಲಿಯಮ್ಸನ್​ ಜೊತೆಗೆ ಅವರು ವಿಶ್ವದ ಟಾಪ್ ಬ್ಯಾಟ್ಸ್​ಮನ್ ಆಗಿದ್ದಾರೆ. ಅವರು ಪಂದ್ಯದಲ್ಲಿ ಆಡುವುದಕ್ಕೆ ಬೌಂಡರಿಯಿಂದಾಚೆಗೂ ಸಾಕಷ್ಟು ಕಾರಣಗಳಿವೆ. ಕಳೆದ ಕೆಲವು ತಿಂಗಳಿನಿಂದ ಉಂಟಾಗಿರುವ ಕೊರೊನಾ ಕೂಡ ಒಂದಾಗಿದೆ.

ದೇಶಕ್ಕಾಗಿ ಆಡುತ್ತೇವೆ ಎಂದು ಆಟಗಾರರು ಮಾತಾನಾಡುತ್ತಾರೆ. ಇದೀಗ ಅದಕ್ಕೆ ಒಳ್ಳೆಯ ಸಮಯ ಬಂದಿದೆ. ದೇಶದಲ್ಲಿ ಲಕ್ಷಾಂತರ ಮಂದಿ ಸಮಸ್ಯೆಗೀಡಾಗಿದ್ದಾರೆ, ಈ ಸಂದರ್ಭದಲ್ಲಿ ವಿರಾಟ್​ಗೆ ಈ ಪ್ರಶಸ್ತಿ ಅನಿವಾರ್ಯವಾಗಬೇಕಾಗಿದೆ.

ಏಕೆಂದರೆ ಅವರ ಮಾಡಿರುವ ಎಲ್ಲ ಒಳ್ಳೆಯ ಕೆಲಸಗಳಿಗಾಗಿ, ಬೌಲರ್​ಗಳ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ತನ್ನ ಡೈನಾಮಿಕ್ಸ್​ ಬದಲಾಯಿಸಿಕೊಂಡಿದ್ದಕ್ಕಾಗಿ ಗೆಲ್ಲಬೇಕಿದೆ. ಅದರ ಅಗತ್ಯ ತಂಡಕ್ಕೆ ಮತ್ತು ದೇಶಕ್ಕಿದೆ ಎಂದು ಬಿಷಪ್ ಹೇಳಿದ್ದಾರೆ.

ಇದನ್ನು ಓದಿ:WTC ಫೈನಲ್​ಗೆ ಭಾರತ ತಂಡ ಪ್ರಕಟ : 15ರ ಬಳಗದಲ್ಲಿ ಕನ್ನಡಿಗರಿಗಿಲ್ಲ ಅವಕಾಶ

ABOUT THE AUTHOR

...view details