ಕರ್ನಾಟಕ

karnataka

ETV Bharat / sports

'ಹರಾಜಿನಲ್ಲಿ ಭಾಗಿಯಾಗಲು ಅನೇಕ ಫ್ರಾಂಚೈಸಿ ನನ್ನನ್ನು ಸಂಪರ್ಕಿಸಿದ್ದವು'... ವಿರಾಟ್​​ ಕೊಹ್ಲಿ!

ಇಂಡಿಯನ್​​ ಪ್ರೀಮಿಯರ್ ಲೀಗ್ ಆರಂಭಗೊಂಡಾಗಿನಿಂದಲೂ ವಿರಾಟ್​ ಕೊಹ್ಲಿ ಆರ್​​ಸಿಬಿ ಪರ ಬ್ಯಾಟ್​ ಬೀಸುತ್ತಿದ್ದು, ಇದರ ಮಧ್ಯೆ ಅನೇಕ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದವು ಎಂದು ತಿಳಿಸಿದ್ದಾರೆ.

By

Published : Feb 8, 2022, 2:49 AM IST

Virat Kohli on RCB podcast
Virat Kohli on RCB podcast

ಹೈದರಾಬಾದ್​:ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದಲೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯುತ್ತಿರುವ ವಿರಾಟ್​ ಕೊಹ್ಲಿ ಅನೇಕ ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಅನೇಕ ಫ್ರಾಂಚೈಸಿಗಳು ತಮ್ಮ ಬಳಿ ಮನವಿ ಮಾಡಿರುವುದಾಗಿ ವಿರಾಟ್​ ಹೇಳಿಕೊಂಡಿದ್ದಾರೆ.

ಆರ್​​ಸಿಬಿ ಪಾಡ್​ಕಾಸ್ಟ್​​ನಲ್ಲಿ ಭಾಗಿಯಾಗಿ ಮಾತನಾಡಿರುವ ವಿರಾಟ್​ ಕೊಹ್ಲಿ ಬೆಂಗಳೂರು ತಂಡದೊಂದಿಗೆ ತಾವು ಹೊಂದಿರುವ ಅವಿನಾಭಾವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ನಾಯಕನಾಗಿದ್ದ ವಿರಾಟ್​, ಕಳೆದ ಋತುವಿನ ಕೊನೆಯಲ್ಲಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದರ ಹೊರತಾಗಿ ಕೂಡ ಮುಂದಿನ ಆವೃತ್ತಿಗೋಸ್ಕರ ಆರ್​ಸಿಬಿ ಅವರನ್ನ ರಿಟೈನ್ ಮಾಡಿಕೊಂಡಿದೆ.

ಇದನ್ನೂ ಓದಿರಿ:IPL 2022 ಮೆಗಾ ಹರಾಜು: ಜೇಸನ್​ ಹೋಲ್ಡರ್​, ರಾಯುಡು, ಪರಾಗ್ ಮೇಲೆ RCB ಕಣ್ಣು!

2016ರಲ್ಲಿ ತಂಡ ಫೈನಲ್​ನಲ್ಲಿ ಸೋಲು ಕಂಡಿರುವುದಕ್ಕೆ ಈಗಲೂ ತಮಗೆ ವಿಷಾದವಿದೆ ಎಂದಿರುವ ವಿರಾಟ್​, ಈ ಹಿಂದೆ ಕೆಲ ಐಪಿಎಲ್​ ಫ್ರಾಂಚೈಸಿಗಳು ತಮ್ಮನ್ನು ಹರಾಜಿನಲ್ಲಿ ಭಾಗಿಯಾಗಲು ಸಂಪರ್ಕಿಸಿದ್ದವು. ಆದರೆ, ಆರ್​ಸಿಬಿಯಲ್ಲೇ ಉಳಿಯುವುದಾಗಿ ಹೇಳಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ನಾನು ನನ್ನ ಜೀವನವನ್ನು ಹೇಗೆ ಅನುಸರಿಸುತ್ತೇನೆಯೋ ಅದೇ ರೀತಿ ಆರ್​ಸಿಬಿ ಜೊತೆ ಇದ್ದೇನೆ. ಆರಂಭದ ಮೂರು ವರ್ಷಗಳ ಕಾಲ ಫ್ರಾಂಚೈಸಿ ನನಗೆ ಕೊಟ್ಟಿರುವ ಅವಕಾಶ, ನಂಬಿಕೆ ನಿಜಕ್ಕೂ ವಿಶೇಷವಾದದು ಎಂದಿದ್ದಾರೆ.

2008ರಲ್ಲಿ ಐಪಿಎಲ್​ ಉದ್ಘಾಟನೆಯಾದಾಗಿನಿಂದಲೂ ಒಂದೇ ಫ್ರಾಂಚೈಸಿ ಪರ ಆಡಿರುವ ಏಕೈಕ ಕ್ರಿಕೆಟಿಗ ಎಂಬ ದಾಖಲೆಗೂ ವಿರಾಟ್​ ಪಾತ್ರರಾಗಿದ್ದಾರೆ. ಇದೀಗ 15ನೇ ಆವೃತ್ತಿಯಲ್ಲೂ ವಿರಾಟ್​ ಆರ್​ಸಿಬಿ ಪರ ಬ್ಯಾಟ್​ ಬೀಸಲಿದ್ದಾರೆ.

ABOUT THE AUTHOR

...view details