ಕರ್ನಾಟಕ

karnataka

ETV Bharat / sports

ಐಸಿಸಿ ಏಕದಿನ ರ‍್ಯಾಂಕಿಂಗ್ : 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ, ಡಿಕಾಕ್, ಡಸೆನ್ ಗಮನಾರ್ಹ ಏರಿಕೆ - ಕ್ವಿಂಟನ್​ ಡಿಕಾಕ್​

ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ 229 ರನ್​ಗಳಿಸಿದ ಡಿಕಾಕ್​ 5ನೇ ಸ್ಥಾನಕ್ಕೇರಿದರೆ, ಶತಕ ಸಹಿತ 218 ರನ್​ಗಳಿಸಿದ ವ್ಯಾನ್ ಡರ್​ ಡಸೆನ್​ 10 ಸ್ಥಾನ ಏರಿಕೆ ಕಂಡಿದ್ದು, ನಂಬರ್​ 10ರಲ್ಲಿ ಕಾಣಿಸಿದ್ದಾರೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಬವೂಮ 21 ಸ್ಥಾನ ಏರಿಕೆ ಕಂಡು 59ನೇ ಸ್ಥಾನಕ್ಕೇರಿದ್ದಾರೆ.

ICC batting rankings
ಐಸಿಸಿ ಏಕದಿನ ರ‍್ಯಾಂಕಿಂಗ್

By

Published : Jan 26, 2022, 3:16 PM IST

ದುಬೈ :ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್​​ನಲ್ಲಿ 2ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2 ಅರ್ಧಶತಕಗಳ ಸಹಿತ 116 ರನ್​ಗಳಿಸಿದ್ದ ಕೊಹ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪಾಕಿಸ್ತಾನದ ನಾಯಕ ಬಾಬರ್ ಅಜಮ್​​ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 801 ಅಂಕಗಳೊಂದಿಗೆ ರಾಸ್​ ಟೇಲರ್​ ಜೊತೆಗೆ ಜಂಟಿ 3ನೇ ಸ್ಥಾನದಲ್ಲಿದ್ದಾರೆ.

ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ 229 ರನ್​ಗಳಿಸಿದ ಡಿಕಾಕ್​ 5ನೇ ಸ್ಥಾನಕ್ಕೇರಿದರೆ, ಶತಕ ಸಹಿತ 218 ರನ್​ಗಳಿಸಿದ ವ್ಯಾನ್ ಡರ್​ ಡಸೆನ್​ 10 ಸ್ಥಾನ ಏರಿಕೆ ಕಂಡಿದ್ದು, ನಂಬರ್​ 10ರಲ್ಲಿ ಕಾಣಿಸಿದ್ದಾರೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಬವೂಮ 21 ಸ್ಥಾನ ಏರಿಕೆ ಕಂಡು 59ನೇ ಸ್ಥಾನಕ್ಕೇರಿದ್ದಾರೆ.

ಐಸಿಸಿ ಟಿ20 ರ‍್ಯಾಂಕಿಂಗ್‌ : ಅಗ್ರಸ್ಥಾನಕ್ಕೆ ಮರಳಿದ ಭಾರತದ ಶೆಫಾಲಿ ವರ್ಮಾ

ಬೌಲಿಂಗ್ ಶ್ರೇಯಾಂಕದಲ್ಲಿ ಲುಂಗಿ ಎಂಗಿಡಿ ಮತ್ತು ಕೇಶವ್ ಮಹಾರಾಜ್​ ಗಮನಾರ್ಹ ಏರಿಕೆ ಕಂಡಿದ್ದಾರೆ. ಎಂಗಿಡಿ 4 ಸ್ಥಾನ ಏರಿಕೆ ಕಂಡು 20ರಲ್ಲಿದ್ದರೆ, ಮಹಾರಜ್​ 18 ಸ್ಥಾನ ಏರಿಕೆ ಕಂಡು 33ನೇ ರ‍್ಯಾಂಕ್​ಗಳಿಸಿಕೊಂಡಿದ್ದಾರೆ.

ನ್ಯೂಜಿಲ್ಯಾಂಡ್​ನ ಟ್ರೆಂಟ್​ ಬೌಲ್ಟ್​ ಮತ್ತು ಆಸ್ಟ್ರೇಲಿಯಾದ ಜೋಶ್ ಹೆಜಲ್​ವುಡ್​ ಅಗ್ರ 2ರಲ್ಲಿ ಮುಂದುವರಿದಿದ್ದಾರೆ. ಸರಣಿಯಲ್ಲಿ ಗರಿಷ್ಠ(6) ವಿಕೆಟ್ ಪಡೆದಿದ್ದ ಆ್ಯಂಡಿಲ್ ಪೆಹ್ಲುಕ್ವಾಯೋ 3 ಸ್ಥಾನ ಏರಿಕೆ ಕಂಡು 15ನೇ ರ‍್ಯಾಂಕಿಂಗ್​ನಲ್ಲಿದ್ದಾರೆ.

ಇದನ್ನೂ ಓದಿ:ನನ್ನ ಕೆರಿಯರ್ ಉಳಿಸಿದ್ದು ಧೋನಿ ಭಾಯ್, ನನ್ನ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದು: ಹಾರ್ದಿಕ್ ಪಾಂಡ್ಯ

ABOUT THE AUTHOR

...view details