ಶಾರ್ಜಾ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 2021ರ ಐಪಿಎಲ್ನಲ್ಲಿ 400 ರನ್ಗಳ ಗಡಿ ದಾಟಿದ್ದಾರೆ. ಸ್ಫೋಟಕ ಬ್ಯಾಟರ್ ಮ್ಯಾಕ್ಸ್ವೆಲ್ 14ನೇ ಆವೃತ್ತಿಯಲ್ಲಿ 500 ಗಡಿದಾಟಿದ ಆರ್ಸಿಬಿಯ ಮೊದಲ ಬ್ಯಾಟರ್ ಆಗಿದ್ದಾರೆ.
ಶಾರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿ 34 ರನ್ಗಳಿಸಿದ್ದ ವೇಳೆ 400ರ ಗಡಿದಾಟಿದರು. ಈ ಮೂಲಕ ವಿರಾಟ್ ಕೊಹ್ಲಿ 8ನೇ ಆವೃತ್ತಿಯಲ್ಲಿ 400+ ರನ್ ಪೂರೈಸಿದ ದಾಖಲೆಗೆ ಪಾತ್ರರಾದರು.
ಸುರೇಶ್ ರೈನಾ 9 ಬಾರಿ ಈ ಸಾಧನೆ ಮಾಡಿದ್ದಾರೆ. ಪಡಿಕ್ಕಲ್ 10 ರನ್ಗಳಿಸುತ್ತಿದ್ದಂತೆ ಸತತ 2ನೇ ಐಪಿಎಲ್ನಲ್ಲಿ 400ರ ಗಡಿ ದಾಟಿದರು. ಅವರು 2020ರ ಆವೃತ್ತಿಯಲ್ಲೂ 400+ರನ್ ಬಾರಿಸಿದ್ದರು.
ಮ್ಯಾಕ್ಸ್ವೆಲ್ 500+ ರನ್
2021ರ ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ತೋರಿರುವ ಮ್ಯಾಕ್ಸ್ವೆಲ್ ಇಂದಿನ ಪಂದ್ಯದಲ್ಲಿ 2 ರನ್ಗಳಿಸುತ್ತಿದ್ದಂತೆ 500 ರನ್ ಗಡಿ ದಾಟಿದರು. ಅವರು ಒಟ್ಟಾರೆ 14 ಇನ್ನಿಂಗ್ಸ್ಗಳಲ್ಲಿ 513ರನ್ಗಳಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಗಳು ವೈಫಲ್ಯ ಅನುಭವಿಸಿ ಕೆಕೆಆರ್ಗೆ ಕೇವಲ 139 ರನ್ಗಳ ಸಾಧಾರಣ ಗುರಿ ನೀಡಿದೆ.