ಕರ್ನಾಟಕ

karnataka

ETV Bharat / sports

ಟ್ವಿಟರ್​ನಲ್ಲಿ 50 ಮಿಲಿಯನ್ ಅಭಿಮಾನಿಗಳನ್ನು ಹೊಂದಿರುವ ವಿಶ್ವದ ಮೊದಲ ಕ್ರಿಕೆಟಿಗ ಕೊಹ್ಲಿ - ವಿಶ್ವದ ಮೊದಲ ಕ್ರಿಕೆಟಿಗ ಕೊಹ್ಲಿ

ದಾಖಲೆಗಳ ವೀರ ವಿರಾಟ್​ ಕೊಹ್ಲಿ - ಮೈದಾನದ ಹೊರಗೂ ನಂಬರ್​ 1 - ಟ್ವಿಟರ್​ನಲ್ಲಿ 50 ಮಿಲಿಯನ್ ಫಾಲೋವರ್ಸ್​ ಹೊಂದಿರುವ ಮೊದಲ ಕ್ರಿಕೆಟಿಗ ಕಿಂಗ್​ ಕೊಹ್ಲಿ

2022ರ ಅತ್ಯಂತ ಜನಪ್ರಿಯ ಕ್ರಿಕೆಟಿಗ ಕಿಂಗ್​ ಕೊಹ್ಲಿ  ಕ್ರಿಕೆಟ್​ ಅಭಿಮಾನಿಗಳ ಹಾರ್ಟ್​ ಫೆವರೇಟ್ ಕೊಹ್ಲಿ  ವಿರಾಟ್​ ಕೊಹ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು  ಕಿಂಗ್ ಕೊಹ್ಲಿ  King Kohli is the most popular cricketer of 2022  Kohli is the heart favorite of cricket fans  Virat Kohli  Royal Challengers Bangalore  King Kohli  ಈಟಿವಿ ಭಾರತ್​ ಕನ್ನಡ ನ್ಯೂಸ್​ ಈಟಿವಿ ಭಾರತ್​ ಕರ್ನಾಟಕ  ETV Bharat kannada News  ETV Bharat Karnataka  ವಿಶ್ವದ ಮೊದಲ ಕ್ರಿಕೆಟಿಗ ಕೊಹ್ಲಿ  Kohli is the world first cricketer
ವಿಶ್ವದ ಮೊದಲ ಕ್ರಿಕೆಟಿಗ ಕೊಹ್ಲಿ

By

Published : Jan 31, 2023, 3:04 PM IST

ವಿರಾಟ್​ ಕೊಹ್ಲಿ ಬರೀ ಒಂದು ಹೆಸರಲ್ಲ, ಅವರು ಕ್ರಿಕೆಟ್​ ಜಗತ್ತಿನಲ್ಲಿ ಒಂದು ದಂತಕಥೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಭಾರತ ಪುರುಷರ ಕ್ರಿಕೆಟ್​ ಆಟಗಾರ ವಿರಾಟ್​ ಕೊಹ್ಲಿ ತಾವೊಬ್ಬ ಕೇವಲ ಬ್ಯಾಟ್ಸ್​ಮನ್​ ಆಗಿ ಆಟವಾಡದೆ, ನಾಯಕನಾಗಿ ತಂಡದ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಕ್ರಿಕೆಟ್​ ಜಗತ್ತಿನಲ್ಲಿ ಈ ಹಿಂದೆ ದಿಗ್ಗಜ ಆಟಗಾರರು ಮಾಡಿದ್ದ ಎಷ್ಟೋ ದಾಖಲೆಗಳನ್ನು ಪುಡಿಗಟ್ಟಿದ್ದಲ್ಲದೆ, ತಂಡದ ಜೊತೆ ತಾನು ಕೂಡ ನಂಬರ್​ ಒನ್​ ಆಗಿ ಮೆರೆದವರು.

ಇದೇ ರೀತಿ ಆಕ್ರಮಣಕಾರಿ ಆಟವಾಡುವ ಕಿಂಗ್ ಕೊಹ್ಲಿ 2022ರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪಾಲಿನ ಅತ್ಯುತ್ತಮ ಆಟಗಾರನಾಗಿದ್ದಾರೆ. ವಿರಾಟ್ ಕೊಹ್ಲಿ ಅವರ ಆಟದ ತಂತ್ರಗಾರಿಕೆಯಿಂದಲೇ ಇಂದು ಕ್ರಿಕೆಟ್​ ಅಭಿಮಾನಿಗಳಿಗೆ ಫೆವರೇಟ್ ಆಗಿದ್ದಾರೆ. ಕೊಹ್ಲಿ ಆಟ ಆಡುವಾಗ ಯಾವಾಗಲೂ ಮೈದಾನದಲ್ಲಿ ನಂಬರ್ ಒನ್. ಅದೇ ರೀತಿ ಮೈದಾನದ ಹೊರಗು ಸಹಾ ನಂಬರ್​ ಒನ್​ ಆಗಿದ್ದಾರೆ.

50 ಮಿಲಿಯನ್ ದಾಟಿತು ಫಾಲೋವರ್ಸ್​ ಸಂಖ್ಯೆ.. ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ವಿರಾಟ್ ಕೊಹ್ಲಿ ಫಾಲೋವರ್ಸ್​ ಸಂಖ್ಯೆ 50 ಮಿಲಿಯನ್ ದಾಟಿದ್ದು, ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಕೊಹ್ಲಿಯಾಗಿದ್ಧಾರೆ. ಇದೇ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನಂತರದ ಸ್ಥಾನದಲ್ಲಿ ಕೊಹ್ಲಿ 50 ಮಿಲಿಯನ್ ಹಿಂಬಾಲಕರ ಸಂಖ್ಯೆಯನ್ನು ದಾಟಿದ ಎರಡನೇ ಭಾರತೀಯ ಎಂಬ ದಾಖಲೆ ಮಾಡಿದ್ದಾರೆ. ಇನ್ನೂ ಟ್ವಿಟರ್‌ನಲ್ಲಿಯೂ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ಕೊಹ್ಲಿ ಈಗ 29ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 9ನೇ ಸ್ಥಾನದಲ್ಲಿದ್ದಾರೆ. ಸುಮಾರು 82.4 ಮಿಲಿಯನ್ ಜನರು ಪ್ರಧಾನಿ ಮೋದಿಯನ್ನು ಅನುಸರಿಸುತ್ತಿದ್ದಾರೆ.

ಕ್ರಿಕೆಟ್​ ಲೋಕದಲ್ಲಿ ಕಿಂಗ್ ಕೊಹ್ಲಿಗೆ ಯಾವುದೇ ಮತ್ತೊಬ್ಬ ಆಟಗಾರನಿಗೂ ಇರದ ಫ್ಯಾನ್ ಫಾಲೋಯಿಂಗ್ ಇದೆ. ನಮಗೆಲ್ಲ ಗೊತ್ತಿರುವಂತೆ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಪರ ಶುರುವಿಂದಲೂ ಆಡುತ್ತ ಬಂದಿದ್ದಾರೆ. ಅಲ್ಲದೆ ಕೊಹ್ಲಿಯನ್ನು ಇಷ್ಟಪಡುವ ಅಭಿಮಾನಿಗಳು, ಆರ್‌ಸಿಬಿ ತಂಡವನ್ನು ತಂಡವನ್ನು ಸಹ ತುಂಬಾ ಇಷ್ಟಪಡುತ್ತಾರೆ.

ಇನ್ನು, ಆರ್​ಸಿಬಿ ತಂಡ ಕೂಡ 2022 ರಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ತಂಡವಾಗಿ ಹೊರ ಹೊಮ್ಮಿತ್ತು. ಇದಕ್ಕೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ತೋರಿಸುವ ಪ್ರೀತಿಯೇ ಸಾಕ್ಷ್ಯಿ. ಆರ್​ಸಿಬಿ ತಂಡದಲ್ಲಿ ಇದ್ದುಕೊಂಡು ಅಭಿಮಾನಿಗಳ ಸಾಕಷ್ಟು ಪ್ರೀತಿಯನ್ನು ಅವರು ಸಂಪಾದಿಸಿದ್ದಾರೆ.

ಇದೀಗ 2023 ರ ಏಕದಿನ ವಿಶ್ವಕಪ್​ ಭಾರತದಲ್ಲೇ ನಡೆಯುತ್ತಿರುವುದರಿಂದ ಕೊಹ್ಲಿ ಐಪಿಎಲ್‌ನಿಂದ ದೂರ ಉಳಿಯುತ್ತಾರಾ? ಎಂಬ ಹಲವಾರು ಪ್ರಶ್ನೆಗಳು ಅಭಿಮಾನಿಗಳಿಗೆ ಮತ್ತು ಕ್ರಿಕೆಟ್​ ವಲಯದಲ್ಲಿ ಹರಿದಾಡುತ್ತಿವೆ. ಈ ಕಾರಣದಿಂದಾಗಿ, ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಅನೇಕ ಅನುಭವಿ ಹಿರಿಯ ಆಟಗಾರರು 2023 ರ ಐಪಿಎಲ್​ನ ಕೆಲವು ಪಂದ್ಯಗಳಲ್ಲಿ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ. ಐಪಿಎಲ್​ನಲ್ಲಿ​ ಆಡುವ ಹಿರಿಯ ಆಟಗಾರರ ಆಟದ ಒತ್ತಡವನ್ನು ಕಡಿಮೆ ಮಾಡಲು ಇದನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಇಂತಹ ಕೆಲವೊಂದು ಯೋಜನೆಗಳನ್ನು ರೂಪಿಸಿದೆ ಎನ್ನಲಾಗುತ್ತಿದೆ.

ಇನ್ನು, ಏಕದಿನ ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ​ ಕೊಹ್ಲಿ ಈ ವರ್ಷ ಟಿ20 ಪಂದ್ಯಗಳಿಂದ ಬಹು ದೂರ ಉಳಿದಿದ್ದಾರೆ. ಇದುವರೆಗೆ ಈ ವರ್ಷ ಒಂದೇ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಕಿಂಗ್​ ಕೊಹ್ಲಿ ಆಡಿಲ್ಲ. ಆದರೆ ಪ್ರಸ್ತುತ ಸಾಲಿನ 2023ರಲ್ಲಿ ಇಲ್ಲಿಯವರೆಗೆ ಒಟ್ಟು 6 ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಮ್ಮ ಹಳೆ ಅಟಕ್ಕೆ ಸ್ಟ್ರಾಂಗ್​ ಕಮ್​ ಬ್ಯಾಕ್​ ಮಾಡಿರುವ ಸಂದೇಶವನ್ನು ಉಳಿದ ಕ್ರಿಕೆಟ್ ತಂಡಗಳಿಗೆ ಕೊಟ್ಟಿದ್ದಾರೆ.

ಇತ್ತೀಚಿಗೆ ನಡೆದ ನ್ಯೂಜಿಲೆಂಡ್​ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಕೊಹ್ಲಿ ಎರಡು ಶತಕಗಳನ್ನು ಹೊಡೆದು ಕ್ರಿಕೆಟ್​ ದಿಗ್ಗಜರ ದಾಖಲೆಗಳನ್ನು ಮುರಿದಿದ್ದಾರೆ. ಈಗ ಕೊಹ್ಲಿ ಇರುವ ಫಾರ್ಮ್ ನೋಡುವುದಾರೆ 2023 ರ ಏಕದಿನ ವಿಶ್ವಕಪ್‌ನಲ್ಲಿ ಅವರಿಂದ ಮತ್ತಷ್ಟು ಶತಕಗಳನ್ನು ನಿರೀಕ್ಷಿಸಬಹುದು ಹಾಗೂ ಈ ಸಲ ಕಪ್​ ನಮ್ದೆ ಎನ್ನುವ ಧ್ಯೇಯವಾಕ್ಯ ನನಸಾಗುವ ಕಾಲ ಕೂಡಿಬಂದಂತಿದೆ ಎಂಬುದು ಅವರ ಅಭಿಮಾನಿಗಳ ಮಾತಾಗಿದೆ.

ಇದನ್ನೂ ಓದಿ :ಋಷಿಕೇಶಕ್ಕೆ ತೆರಳಿದ 'ವಿರುಷ್ಕಾ' ದಂಪತಿ: ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ, ಪೂಜೆ

ABOUT THE AUTHOR

...view details