ಕರ್ನಾಟಕ

karnataka

ETV Bharat / sports

ಶತಕಗಳು ಮುಂದೆ ಬರ್ತಾವೆ.. ಆದ್ರೆ, ಈಗ ಕೊಹ್ಲಿ ಸಾಧನೆ ಮೆಚ್ಚಲೇಬೇಕು : ಯೂಸೂಫ್ - ಕೊಹ್ಲಿ 100 ಶತಕ

ಕೊಹ್ಲಿ ಸಾಧಿಸಿದ್ದಾರೆ, ಅವರ ಸಾಧನೆಯನ್ನು ಎಷ್ಟು ಪ್ರಶಂಸಿದರೂ ಕಡಿಮೆಯೇ. ಆದರೆ, ನಾನು ಸಚಿನ್​ರೊಂದಿಗೆ ಹೋಲಿಕೆ ಮಾಡುವುದನ್ನು ಬಯಸಲ್ಲ. ಯಾಕೆಂದರೆ, ಸಚಿನ್ ಸಂಪೂರ್ಣ ವಿಭಿನ್ನ ವರ್ಗದವರಾಗಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಬಾರಿಸಿದ್ದಾರೆ. ಜೊತೆಗೆ ಅವರ ಕಾಲದಲ್ಲಿ ಎಂತಹ ಬೌಲರ್​ಗಳನ್ನು ಎದುರಿಸಿದ್ದಾರೆ ಎನ್ನುವುದನ್ನು ಮನದಲ್ಲಿಟ್ಟುಕೊಳ್ಳಬೇಕು..

ವಿರಾಟ್ ಕೊಹ್ಲಿ ಯೂಸೂಫ್
ವಿರಾಟ್ ಕೊಹ್ಲಿ ಯೂಸೂಫ್

By

Published : May 1, 2021, 4:20 PM IST

ಕರಾಚಿ : ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಉತ್ತುಂಗದ ಶಿಖರದಲ್ಲಿದ್ದಾರೆ. ಶೀಘ್ರದಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಶತಕ ಬಾರಿಸುವುದನ್ನು ಶುರು ಮಾಡಲಿದ್ದಾರೆ ಎಂದು ಪಾಕಿಸ್ತಾನ ಲೆಜೆಂಡರಿ ಬ್ಯಾಟ್ಸ್​ಮನ್ ಮೊಹಮದ್ ಯೂಸುಫ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್​ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಮಾದರಿಯ ಕ್ರಿಕೆಟ್​ನಲ್ಲಿ ಶತಕ ಬಾರಿಸಿಲ್ಲ. ಅವರು 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಡೇ ಅಂಡ್ ನೈಟ್​ ಟೆಸ್ಟ್​ನಲ್ಲಿ ಕೊನೆಯ ಶತಕ ಬಾರಿಸಿದ್ದರು. ಎಲ್ಲಾ ಮಾದರಿಯಲ್ಲಿ 70 ಶತಕ ಸಿಡಿಸಿರುವ ಕೊಹ್ಲಿಯಿಂದ ಮತ್ತಷ್ಟು ಶತಕಗಳು ಶೀಘ್ರದಲ್ಲೇ ಹೊರ ಬರಲಿವೆ ಎಂದು ಯೂಸುಫ್ ಹೇಳಿದ್ದಾರೆ.

ಕೊಹ್ಲಿಗೆ ಕೇವಲ 32 ವರ್ಷ ಮತ್ತು ಈ ವಯಸ್ಸಿಗೆ ಅವರು ಟಾಪ್​ ಬ್ಯಾಟ್ಸ್​ಮನ್​ ಆಗಿ ಸಾಕಷ್ಟು ಎತ್ತರಕ್ಕೇರಿದ್ದಾರೆ. ಅವರು ಮತ್ತೆ ಶತಕಗಳನ್ನು ಬಾರಿಸಲು ಕೆಲವು ಸಮಯ ತೆಗೆದುಕೊಂಡಿದ್ದಾರೆ, ಮತ್ತೆ ಮುಂದಿನ ದಿನಗಳಲ್ಲು ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಅವರು ಶತಕ ಸಿಡಿಸಲಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನನ್ನ ಪ್ರಕಾರ 32 ವರ್ಷಕ್ಕೆ ಕೊಹ್ಲಿ ಈಗ ಏನು ಸಾಧನೆ ಮಾಡಿದ್ದಾರೋ ಅದು ಅಸಾಧಾರಣವಾದದ್ದು. ಅವರು ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಈಗಾಗಲೇ 70 ಶತಕ ಸಿಡಿಸಿರುವುದು ದೊಡ್ಡ ಹಿರಿಮೆ ಎಂದು ಪಾಕಿಸ್ತಾನ ಪರ 90 ಟೆಸ್ಟ್ ಮತ್ತು 288 ಏಕದಿನ ಪಂದ್ಯಗಳನ್ನಾಡಿರುವ ಯೂಸುಫ್ ಹೇಳಿದ್ದಾರೆ.

ಇನ್ನು, ಒಂದೇ ವರ್ಷ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ರನ್(1788)​ ಸಿಡಿಸಿರುವ ದಾಖಲೆಯನ್ನು ಈಗಲೂ ತಮ್ಮ ಹೆಸರಿನಲ್ಲಿಯೇ ಇರಿಸಿಕೊಂಡಿರುವ ಯೂಸುಫ್, ಕೊಹ್ಲಿಯನ್ನು ಲೆಜೆಂಡರಿ ಸಚಿನ್ ತೆಂಡೂಲ್ಕರ್​ರೊಂದಿಗೆ ಹೋಲಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ.

"ಕೊಹ್ಲಿ ಸಾಧಿಸಿದ್ದಾರೆ, ಅವರ ಸಾಧನೆಯನ್ನು ಎಷ್ಟು ಪ್ರಶಂಸಿದರೂ ಕಡಿಮೆಯೇ. ಆದರೆ, ನಾನು ಸಚಿನ್​ರೊಂದಿಗೆ ಹೋಲಿಕೆ ಮಾಡುವುದನ್ನು ಬಯಸಲ್ಲ. ಯಾಕೆಂದರೆ, ಸಚಿನ್ ಸಂಪೂರ್ಣ ವಿಭಿನ್ನ ವರ್ಗದವರಾಗಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಬಾರಿಸಿದ್ದಾರೆ. ಜೊತೆಗೆ ಅವರ ಕಾಲದಲ್ಲಿ ಎಂತಹ ಬೌಲರ್​ಗಳನ್ನು ಎದುರಿಸಿದ್ದಾರೆ ಎನ್ನುವುದನ್ನು ಮನದಲ್ಲಿಟ್ಟುಕೊಳ್ಳಬೇಕು" ಎಂದು ಪಾಕಿಸ್ತಾನ ಮಾಜಿ ನಾಯಕ ಹೇಳಿದ್ದಾರೆ.

ABOUT THE AUTHOR

...view details