ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ಸರಣಿ ಕಿವೀಸ್​​ಗೆ ಅನುಕೂಲವಾಗಿದೆ, ಆದರೆ ಭಾರತ ಮ್ಯಾಚ್​ ವಿನ್ನರ್ಸ್​ಗಳ ತಂಡ: ಯುವರಾಜ್​ - ಭಾರತ vs ನ್ಯೂಜಿಲ್ಯಾಂಡ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್

ಶುಕ್ರವಾರ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ. ಈ ಚಾಂಪಿಯನ್​ಶಿಪ್ ಫೈನಲ್​ 50 ಓವರ್​ಗಳ ವಿಶ್ವಕಪ್​ಗೆ ಇದ್ದಷ್ಟೇ ಮಹತ್ವ ಇದೆ. ಕೊಹ್ಲಿ ಈ ಟೂರ್ನಿ ಗೆಲ್ಲಲು ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಯುವಿ ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್

By

Published : Jun 17, 2021, 3:33 PM IST

ನವದೆಹಲಿ: ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಗೆದ್ದಿರುವ ಅನುಕೂಲದೊಂದಿಗೆ ನ್ಯೂಜಿಲ್ಯಾಂಡ್​ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶಿಸಿದೆ. ಆದರೆ, ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡದಲ್ಲಿ ಮ್ಯಾಚ್​ ವಿನ್ನರ್ಸ್​ಗಳ ದಂಡೇ ಇದೇ, ಅವರು ಪಂದ್ಯವನ್ನು ಏಕಾಂಗಿಯಾಗಿ ಬದಲಾಯಿಸಬಲ್ಲರು ಎಂದು ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ಹೇಳಿದ್ದಾರೆ.

ಶುಕ್ರವಾರ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ. ಈ ಚಾಂಪಿಯನ್​ಶಿಪ್ ಫೈನಲ್​ 50 ಓವರ್​ಗಳ ವಿಶ್ವಕಪ್​ಗಿದ್ದಷ್ಟೇ ಮಹತ್ವ ಇದೆ. ಕೊಹ್ಲಿ ಈ ಟೂರ್ನಿ ಗೆಲ್ಲಲು ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಯುವಿ ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಖಂಡಿತವಾಗಿ, ಭಾರತ ನನ್ನ ನೆಚ್ಚಿನ ತಂಡ. ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಗೆದ್ದಿರುವುದು ನ್ಯೂಜಿಲ್ಯಾಂಡ್​ ತಂಡ ಹೆಚ್ಚಿನ ಅನುಕೂಲ​ ಹೊಂದಿದೆ. ಅವರು 2 ಟೆಸ್ಟ್​ ಪಂದ್ಯಗಳನ್ನಾಡುವ ಮೂಲಕ ಮೈದಾನದಲ್ಲಿ ಹೆಚ್ಚು ಸಮಯ ಕಳೆದಿದ್ದಾರೆ. ಆದರೆ, ಭಾರತ ಕೇವಲ ಒಂದು ಅಭ್ಯಾಸ ಪಂದ್ಯವನ್ನಾಡಿದೆ. ಕ್ರಿಕೆಟ್​ ಒಂದು ಅದ್ಭುತ ಕ್ರೀಡೆ, ಒಂದು ಪಂದ್ಯ ಅಥವಾ ಒಂದು ಸೆಷನ್​ ಇಡೀ ಆಟವನ್ನೇ ಬದಲಾಯಿಸಬಲ್ಲದೆಂದು ನಾನು ಭಾವಿಸುತ್ತೇನೆ. ಭಾರತ ತಂಡ ಸಾಕಷ್ಟು ಮ್ಯಾಚ್​ವಿನ್ನರ್​ಗಳನ್ನು ಹೊಂದಿದೆ ಎಂದು ಯುವರಾಜ್​ ಸಿಂಗ್​ ಹೇಳಿದ್ದಾರೆ.

" ಆಶಾದಾಯಕವಾಗಿ, ಇದು ರೋಚಕ ಟೆಸ್ಟ್ ಪಂದ್ಯವಾಗಿದೆ. ಕೆಲವೊಮ್ಮೆ ಟೆಸ್ಟ್ ಕ್ರಿಕೆಟ್ ಸಾಯುತ್ತಿದೆ ಎಂದು ನೀವು ಭಾವಿಸುತ್ತೀರಿ. ಆದರೆ, ಆಸ್ಟ್ರೇಲಿಯಾದಲ್ಲಿ ಭಾರತ ರೋಚಕವಾಗಿ ಗೆದ್ದಿರುವುದನ್ನು ನೀವು ನೋಡುತ್ತೀರಿ. ಹಾಗಾಗಿ ಟೆಸ್ಟ್ ಕ್ರಿಕೆಟ್ ಮತ್ತೆ ಪುನರುಜ್ಜೀವನಗೊಳ್ಳುತ್ತಿದೆ. ಬಹುಶಃ ನಾನು ವೀಕ್ಷಿಸಿರುವ ಮತ್ತು ನಾನು ಆಡಿದ ಅತ್ಯುತ್ತಮ ಸ್ವರೂಪದ ಕ್ರಿಕೆಟ್​ ಟೆಸ್ಟ್​ "ಎಂದು ಅವರು ಹೇಳಿದರು.

WTC ಮತ್ತು 50 ಓವರ್​ಗಳ ವಿಶ್ವಕಪ್ ಒಂದೇ ಆಗುತ್ತದೆಯೇ ಎಂದು ಕೇಳಿದ್ದಕ್ಕೆ, ನನಗೆ ಗೊತ್ತಿಲ್ಲ, ಆದರೆ, 50 ಓವರ್​ಗಳ ವಿಶ್ವಕಪ್​ ಸಾಕಷ್ಟು ಇತಿಹಾಸ ಹೊಂದಿದೆ. ಟೆಸ್ಟ್​ ಕ್ರಿಕೆಟ್​ ಕೂಡ ಅದಕ್ಕಿಂತ ಹೆಚ್ಚಿನ ಇತಿಹಾಸ ಹೊಂದಿದೆಯಾದರೂ, WTC ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಮೊದಲ ಪ್ರಶಸ್ತಿ ಗೆಲ್ಲುವುದು ಎಂದಿಗೂ ದೊಡ್ಡ ವಿಷಯ. ಆದರೆ, ನಾನು ಎರಡು ಟೂರ್ನಿಯ ಭಾಗವಾಗಿಲ್ಲವಾದ್ದರಿಂದ ಹೋಲಿಕೆ ಮಾಡಲು ಹೋಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನು ವಿವರಿಸಲು ವಿರಾಟ್​ ಕೊಹ್ಲಿ ಅಥವಾ ರೋಹಿತ್ ಶರ್ಮಾ ಉತ್ತಮ ಸ್ಥಾನದಲ್ಲಿದ್ದಾರೆ. ಅದರಲ್ಲೂ ವಿರಾಟ್​ ಕೊಹ್ಲಿ 2011ರ ಏಕದಿನ ವಿಶ್ವಕಪ್​ ಗೆದ್ದಿದ್ದಾರೆ, ಜೊತೆಗೆ ನಾಯಕ ಕೂಡ. ಅವರು ಇವೆರಡು ಪ್ರಶಸ್ತಿಗಳನ್ನು ನಡುವೆ ಹೋಲಿಕೆ ಮಾಡಬಲ್ಲರು ಎಂದು ವಿವರಿಸಿದ್ದಾರೆ.

ಇದನ್ನು ಓದಿ:'ಟೀಂ ಇಂಡಿಯಾ ರಬ್ಬರ್ ಚೆಂಡು ಇದ್ದಂತೆ, ಪುಟಿಯುತ್ತದೆ, ಪುಟಿಯುತ್ತಲೇ ಇರುತ್ತದೆ'

ABOUT THE AUTHOR

...view details