ನವದೆಹಲಿ:ವಿರಾಟ್ ಕೊಹ್ಲಿ ಒಬ್ಬ ಅದ್ಭುತ ನಾಯಕನಾಗಿದ್ದು, ತಂಡದಲ್ಲಿ ಆಟಗಾರರ ಮನೋಬಲವನ್ನು ಕಾಪಾಡುವುದರಲ್ಲಿ ಸದಾ ಮುಂದಿರುತ್ತಾರೆ. ಶೀಘ್ರದಲ್ಲೇ ಅವರಿಂದ ದೊಡ್ಡ ಮೊತ್ತದ ಆಟ ಬರಲಿದೆ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಭಾನುವಾರ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ತಂಡ, ಸೋಮವಾರದಿಂದ ನಡೆಯಲಿರುವ ಜೋಹಾನ್ಸ್ಬರ್ಗ್ ಟೆಸ್ಟ್ ಪಂದ್ಯವನ್ನು ಗೆದ್ದ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಕೊಹ್ಲಿ ಬದಲಿಗೆ ಮಾಧ್ಯಮಗೋಷ್ಟಿ ನಡೆಸಿದ ದ್ರಾವಿಡ್, ಹೊರಗಡೆ ಸಾಕಷ್ಟು ವಿಷಯಗಳು ಚರ್ಚೆಯಾಗುತ್ತಿದ್ದರೂ ತಂಡವನ್ನು ಉತ್ಸಾಹದಲ್ಲಿಡಲು ಹೇಗೆ ಸಾಧ್ಯವಾಗಿದೆ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ದ್ರಾವಿಡ್, " ಗುಂಪಿನ ಹೊರಗಡೆ ಸಾಕಷ್ಟು ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ವಿವಾದಗಳಿದ್ದ ಸಂದರ್ಭದಲ್ಲಿ ಆತ್ಮಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವೇನಲ್ಲ. ಏಕೆಂದರೆ ಅದನ್ನು ನಾಯಕ ನೋಡಿಕೊಳ್ಳುತ್ತಾನೆ. ನಾವಿಲ್ಲಿಗೆ ಬಂದು 20 ದಿನಗಳಾಗಿವೆ, ಗೊಂದಲಗಳ ನಡುವೆಯೂ ವಿರಾಟ್ ಕೊಹ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ" ಎಂದು ಹೇಳಿದ್ದಾರೆ.