ಮ್ಯಾಂಚೆಸ್ಟರ್(ಇಂಗ್ಲೆಂಡ್):ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟ ಮತ್ತು ರಿಷಭ್ ಪಂತ್ ಅವರ ಅಬ್ಬರದ ಚೊಚ್ಚಲ ಶತಕದ ಬಗ್ಗೆ ಶ್ಲಾಘಿಸಿದ್ದಾರೆ. ಭಾರತ 38ರನ್‌ಗೆ ಮೊದಲ ಮೂರು ವಿಕೆಟ್ಗಳನ್ನು ಕಳೆದು ಕೊಂಡು ಸಂಕಷ್ಟದಲ್ಲಿದ್ದಾಗ ಹಾರ್ದಿಕ್ ಮತ್ತು ಪಂತ್ರ 133 ರನ್‌ಗಳ ಜೊತೆಯಾಟ ಭಾರತದ ಗೆಲುವಿಗೆ ಪ್ರಮುಖ ಕಾರಣವಾಯಿತು.
’’ಅದ್ಭುತ ರನ್ ಚೇಸ್ ಮತ್ತು ಶ್ರೇಷ್ಠ ಸರಣಿ" ಎಂದು ಕೋಹ್ಲಿ ಟ್ವೀಟ್ ಮಾಡಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಟೀಮ್ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿ, ಇಂಗ್ಲೆಂಡ್ ಪ್ರವಾಸದ ಟಿ-20 ಮತ್ತು ಏಕದಿನ ಸರಣಿಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ.
ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ತಂಡಕ್ಕೆ ಅಭಿನಂದನೆ ಸಲ್ಲಿಸಿ ಹಾರ್ದಿಕ್ ಮತ್ತು ಪಂತ್ರ ಜೊತೆಯಾಟ ಉತ್ತಮವಾಗಿತ್ತು ಮತ್ತು ತಂಡದ ಗೆಲುವಿಗೆ ಮುಖ್ಯ ಕಾರಣವಾಯಿತು ಎಂದು ಹೇಳಿದ್ದಾರೆ. ಅಲ್ಲದೇ ಇಂಗ್ಲೆಂಡ್ ನೆಲದಲ್ಲಿ ಪ್ರಾಬಲ್ಯ ಸಾಧಿಸಿರುವುದು ತುಂಬಾ ಸಂತೋಷವಾಗಿದೆ. ಏಕದಿನ ಪಂದ್ಯ ಗೆಲುವಿನ ಉತ್ತಮ ಚೇಸ್ ಎಂದು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ 46ನೇ ಓವರ್‌ನಲ್ಲಿ 259 ರನ್‌ಗೆ ಆಲ್ ಔಟ್ ಆಯಿತು. 260 ರನ್ ಗುರಿ ಬೆನ್ನುಹತ್ತಿದ ಭಾರತ 42.1 ಓವರ್‌ಗಳಲ್ಲಿ ಪೂರೈಸಿತು. ಈ ಮೂಲಕ 2-1 ರಿಂದ ಸರಣಿಯನ್ನು ಗೆದ್ದುಕೊಂಡಿತು. ಈ ಗೆಲುವಿನಲ್ಲಿ ಪಂತ್ರ ಚೊಚ್ಚಲ ಶತಕ ಮತ್ತು ಹಾರ್ದಿಕ್ ಪಾಂಡ್ಯರ ಆಟ ಮೆಚ್ಚುಗೆಗೆ ಕಾರಣವಾಯಿತು.
ಇದನ್ನೂ ಓದಿ:ಮ್ಯಾಚೆಂಸ್ಟರ್ನಲ್ಲಿ ರಿಷಭ್ ಶತಕ.. ಇಂಗ್ಲೆಂಡ್ ನೆಲದಲ್ಲಿ ಈ ದಾಖಲೆ ಬರೆದ ಏಷ್ಯಾದ ಏಕೈಕ ವಿಕೆಟ್ ಕೀಪರ್!