ಕರ್ನಾಟಕ

karnataka

ETV Bharat / sports

ಕೊಹ್ಲಿ ಮುಡಿಗೆ ಮತ್ತೊಂದು ಗರಿ: ಟಿ20 ಕ್ರಿಕೆಟ್​ನಲ್ಲಿ 10,000 ರನ್​ ಪೂರೈಸಿದ ಮೊದಲ ಭಾರತೀಯ

ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 13 ರನ್​ಗಳಿಸುತ್ತಿದ್ದಂತೆ ಕೊಹ್ಲಿ ಈ ಮೈಲುಗಲ್ಲು ಸ್ಥಾಪಿಸಿದರು.

ವಿರಾಟ್ ಕೊಹ್ಲಿ 10,000 ರನ್​
ವಿರಾಟ್ ಕೊಹ್ಲಿ 10,000 ರನ್​

By

Published : Sep 26, 2021, 8:54 PM IST

Updated : Sep 26, 2021, 9:33 PM IST

ದುಬೈ:ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 10,000 ರನ್​ ಪೂರೈಸಿದ್ದಾರೆ. ಈ ಮುಖೇನ ವಿಶಿಷ್ಟ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್​ ಎಂಬ ಗೌರವಕ್ಕೆ ಪಾತ್ರರಾದರು.

ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 13 ರನ್​ಗಳಿಸುತ್ತಿದ್ದಂತೆ ಕೊಹ್ಲಿ ಈ ಮೈಲುಗಲ್ಲನ್ನು ಸ್ಥಾಪಿಸಿದರು. ಕೊಹ್ಲಿ ತಮ್ಮ 299ನೇ ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದು ದೇಶದ ಮೊದಲ ಭಾರತೀಯ ಹಾಗೂ ವಿಶ್ವದ 6ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ಇದಕ್ಕೂ ಮೊದಲು ವೆಸ್ಟ್​ ಇಂಡೀಸ್​ ದೈತ್ಯ ಕ್ರಿಸ್​ಗೇಲ್​ (14,275), ಕೀರನ್ ಪೊಲಾರ್ಡ್​(11,195), ಪಾಕಿಸ್ತಾನದ ಶೋಯಬ್ ಮಲಿಕ್(10,808), ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಟಿ20 ಮಾದರಿಯಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ.

ಮೂರು ಮಾದರಿಯಲ್ಲೂ 10 ಸಾವಿರ ರನ್ ಬಾರಿಸಿದ 2ನೇ ಬ್ಯಾಟರ್​

ರನ್​ ಮಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್​ನ ಮೂರು ಮಾದರಿಯ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಸಿಡಿಸಿ ವಿಶ್ವದ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಅವರು ಟಿ20ಯಲ್ಲಿ10,000*, ಲಿಸ್ಟ್​ ಎನಲ್ಲಿ(50 ಓವರ್​) 13,611 ರನ್​ ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ 10,014 ರನ್​ಗಳಿಸಿದ್ದಾರೆ. ಇವರಿಗಿಂತ ಮೊದಲು ಕ್ರಿಸ್ ಗೇಲ್ ಮಾತ್ರ ಈ ದಾಖಲೆ ಮಾಡಿದ್ದರು. ಗೇಲ್ ಪ್ರಥಮ ದರ್ಜೆಯಲ್ಲಿ 13,226, ಲಿಸ್ಟ್​ ಎನಲ್ಲಿ 13,189 ಮತ್ತು ಟಿ20 ಯಲ್ಲಿ 14, 275 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ 250 ವಿಕೆಟ್​ ಪಡೆದ ರವಿಚಂದ್ರನ್ ಅಶ್ವಿನ್

Last Updated : Sep 26, 2021, 9:33 PM IST

ABOUT THE AUTHOR

...view details