ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾ ಜನನದ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದ ಟ್ವೀಟ್ಗೆ 'ಭಾರತದಲ್ಲಿ 2021ರಲ್ಲಿ ಅತಿ ಹೆಚ್ಚು ಲೈಕ್' ಪಡೆದ ಟ್ವೀಟ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜನವರಿ 11, 2021ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್ 5.39 ಲಕ್ಷ ಲೈಕ್ ಗಳಿಸಿಕೊಂಡಿದೆ. 9,431 ಮಂದಿ ಕೊಹ್ಲಿಗೆ ಶುಭಾಶಯ ಕೋರಿದ್ದರೆ, 50.8 ಸಾವಿರ ಮಂದಿ ರೀಟ್ವೀಟ್ ಮಾಡಿಕೊಂಡಿದ್ದರು.
"ಇಂದು ಮಧ್ಯಾಹ್ನ ನಮಗೆ ಹೆಣ್ಣು ಮಗು ಜನಿಸಿದೆ ಎಂದು ಹೇಳಿಕೊಳ್ಳಲು ನಮಗೆ ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಶುಭಾಶಯ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು. ಅನುಷ್ಕಾ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ನಾವು ಹೊಸ ಜೀವನವನ್ನು ಆರಂಭಿಸಲಿದ್ದೇವೆ ಎಂದು ಭಾವಿಸುತ್ತಿದ್ದೇನೆ. ನಮ್ಮ ಖಾಸಗಿತನವನ್ನು ನೀವೆಲ್ಲರೂ ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ವಿರಾಟ್ ಟ್ವೀಟ್ ಮಾಡಿದ್ದರು.
ಭಾರತದಲ್ಲಿ ಎರಡನೇ ಹಂತದ ಕೋವಿಡ್ 19 ಸಮಯದಲ್ಲಿ ಭಾರತೀಯರ ಸ್ಥಿತಿ ಕಂಡು 50 ಸಾವಿಡ್ ಯುಎಸ್ ಡಾಲರ್ ಪಿಎಂ ಕೇರ್ಸ್ಗೆ ದೇಣಿಗೆ ನೀಡಿದ್ದ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಟ್ವೀಟ್ 4.87 ಲಕ್ಷ ಲೈಕ್, 21.9 ಸಾವಿರ ಕಮೆಂಟ್ ಮತ್ತು 1.14 ಲಕ್ಷ ರೀಟ್ವೀಟ್ ಪಡೆದುಕೊಂಡಿದೆ.
ಇದನ್ನೂ ಓದಿ:ODI ಗೆಲುವಿನ ಸರಾಸರಿಯಲ್ಲಿ ಕೊಹ್ಲಿಯೇ ಅಗ್ರ... ಭಾರತದ ನಾಯಕನಾಗಿ ವಿರಾಟ್ ಸಾಧನೆ ಹೀಗಿದೆ