ನವದೆಹಲಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮುಗಿಯುತ್ತಿದ್ದಂತೆ ಭಾರತೀಯ ಕ್ರಿಕೆಟಿಗರಿಗೆ 20 ದಿನಗಳ ಕಾಲ ಬಯೋಬಬಲ್ನಿಂದ ಮುಕ್ತರಾಗಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮತ್ತೆ ಬಯೋಬಬಲ್‌ಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಭಾರತ ತಂಡ ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ WTC ಫೈನಲ್ಗಾಗಿ ಬಯೋಬಬಲ್ ಸೇರಿದೆ. ಜೂನ್ 18ರಿಂದ 22 ರವರೆಗೆ ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ 23 ಮೀಸಲು ದಿನವಾಗಿದೆ. ಮಳೆ ಅಥವಾ ಇನ್ಯಾವುದೇ ಅಡಚಣೆಯಿಂದ ಫೈನಲ್ನಲ್ಲಿ ತೊಂದರೆಯಾದರೆ ಈ ದಿನ ಆಡಿಸಲಾಗುತ್ತದೆ. 24ರಿಂದ ಜುಲೈ 13 ರವರೆಗೆ ಭಾರತ ತಂಡಕ್ಕೆ ಬಬಲ್ ಬಿಡುವು ನೀಡಲಾಗಿದೆ. ಮತ್ತೆ ಜುಲೈ 14ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಬಯೋಬಬಲ್ ಸೇರಲಿದೆ.