ಕರ್ನಾಟಕ

karnataka

ETV Bharat / sports

ವಿಶ್ವಕಪ್​ ತಂಡದಲ್ಲಿ ಸಂಜುಗಿಲ್ಲ ಅವಕಾಶ.. ರಾಹುಲ್​ಗೆ ಮೊದಲ ಕೀಪರ್​ ಸ್ಥಾನ - ETV Bharath Kannada news

Team India Squad For World Cup 2023: ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 81 ರನ್​ ಗಳಿಸಿದ ಇಶಾನ್​ ಕಿಶನ್​ ವಿಶ್ವಕಪ್​ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

Team India Squad For World Cup 2023
Team India Squad For World Cup 2023

By ETV Bharat Karnataka Team

Published : Sep 3, 2023, 6:45 PM IST

ಪಲ್ಲೆಕೆಲೆ (ಶ್ರೀಲಂಕಾ): ಪಾಕಿಸ್ತಾನದ ವಿರುದ್ಧ ಆರಂಭಿಕರು ವೈಫಲ್ಯತೆ ಎದುರಿಸಿದ ನಂತರ ಮಧ್ಯಮ ಕ್ರಮಾಂಕದಲ್ಲಿ ಇಶಾನ್​ ಕಿಶನ್​ ಅರ್ಧಶತಕ ಗಳಸಿ ವಿಶ್ವಕಪ್​ ಆಯ್ಕೆಗಾರರ ಮನಸ್ಸು ಗೆದ್ದಿದ್ದಾರೆ. ಇದರಿಂದ ವಿಶ್ವಕಪ್​ ತಂಡಕ್ಕೆ ಅವರಿಗೆ ಸ್ಥಾನ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಅಲ್ಲದೇ ಗಾಯದಿಂದ ಚೇತರಿಸಿಕೊಂಡಿರುವ ಕೆ ಎಲ್​ ರಾಹುಲ್​ ಫಿಟ್​ ಆಗಿ ತಂಡಕ್ಕೆ ಮರಳುವ ಸಾಧ್ಯೆತ ಹೆಚ್ಚಿರುವುದರಿಂದ ಸಂಜು ಸ್ಯಾಮ್ಸನ್​ಗೆ ವಿಶ್ವಕಪ್​ ತಂಡದಲ್ಲಿ ಅವಕಾಶ ಸಿಗುವುದು ಅನುಮಾನವಾಗಿದೆ.

ಐಸಿಸಿ ನಿಯಮದ ಪ್ರಕಾರ ಸಪ್ಟೆಂಬರ್​ 5ರ ಒಳಗೆ ವಿಶ್ವಕಪ್​ ಆಡುವ 15 ಜನ ಸದಸ್ಯರ ತಂಡದ ಕರಡು ಪ್ರತಿಯನ್ನು ಸಲ್ಲಿಸಲಬೇಕು. ವಿಶ್ವಕಪ್​ಗೆ 18 ಜನರನ್ನು ಒಳಗೊಂಡ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದೇ ತಂಡ ಭಾರತದಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಆಡುವ ಸಾಧ್ಯತೆ. ಅದರಂತೆ ಸದ್ಯ ಏಷ್ಯಾಕಪ್​ನ ತಂಡದಿಂದ ಮೂವರನ್ನು ಕೈಬಿಟ್ಟು 15 ಜನರನ್ನು ಆಯ್ಕೆ ಮಾಡಬೇಕಿದೆ. ನಾಳೆ ನೇಪಾಳ ವಿರುದ್ಧದ ಏಷ್ಯಾಕಪ್​ ಪಂದ್ಯದ ವೇಳೆಯೇ ವಿಶ್ವಕಪ್​ನ ತಂಡ ಪ್ರಕಟವಾಗುವ ನಿರೀಕ್ಷೆ ಇದೆ.

ಪಾಕ್​ ಪಂದ್ಯದ ವೇಳೆ ಸಭೆ: ನಿನ್ನೆ ಪಾಕಿಸ್ತಾನದ ವಿರುದ್ಧದ ಪಂದ್ಯ ವೀಕ್ಷಣೆಗೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಶ್ರೀಲಂಕಾಕ್ಕೆ ತೆರಳಿದ್ದರು. ಈ ವೇಳೆ ವಿಶ್ವಕಪ್​ನ 15 ಆಟಗಾರರ ತಂಡದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. 81 ರನ್​ ಗಳಸಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಿಶನ್​ ವಿಶ್ವಕಪ್​ನ ಎರಡನೇ ವಿಕೆಟ್​ ಕೀಪರ್​ ಆಗುವ ನಿರೀಕ್ಷೆ ಇದೆ. ಏಷ್ಯಾಕಪ್​ಗೆ ಸ್ಟಾಂಡ್​​ಬೈ ಆಟಗಾರರಾಗಿರುವ ಸಂಜುಗೆ ಅವಕಾಶ ಅನುಮಾನ ಎನ್ನಲಾಗುತ್ತಿದೆ.

ಏಷ್ಯಾಕಪ್​ಗೆ ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಆಗಿರುವ ತಿಲಕ್​ ವರ್ಮಾಗೆ ವಿಶ್ವಕಪ್​ ಆಯ್ಕೆ ಸಿಗುವುದಿಲ್ಲ ಎನ್ನಲಾಗುತ್ತಿದೆ. ಟಿ20 ಟಾಪ್​ ಬ್ಯಾಟರ್​ ಸೂರ್ಯ ಕುಮಾರ್ ಯಾದವ್​ ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡಿದ ನಿದರ್ಶನ ಇಲ್ಲದಿದ್ದರೂ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ತಂಡಲ್ಲಿ ಸೇರಿಕೊಳ್ಳಲಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಗಾಯದಿಂದ ಚೇತರಿಸಿಕೊಂಡ ನಂತರ ಏಷ್ಯಾಕಪ್​ಗೆ ಆಯ್ಕೆ ಆಗಿರುವ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ. ವೇಗದ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಹಾಗೇ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಇರಲಿದ್ದಾರೆ. ಸ್ಪಿನ್​ ವಿಭಾಗ ಕುಲದೀಪ್​ ಯಾದವ್​ ಮತ್ತು ಜಡೇಜ ಒಳಗೊಳಡಿರುತ್ತದೆ. ನಿರೀಕ್ಷೆಯಲ್ಲಿರುವ ಚಹಾಲ್​ ಮತ್ತು ಆರ್​ ಅಶ್ವಿನ್​ಗೂ ಸ್ಥಾನ ಇಲ್ಲ. ತಂಡ ಮೂರನೇ ಸ್ಪಿನ್ನರ್​ ಆಗಿ ಅಕ್ಷರ್​ ಪಟೇಲ್​ ಆಲ್​ರೌಂಡರ್​ ಆಗಿಯೂ ಅವಕಾಶ ಪಡೆಯುವ ಸಾಧ್ಯತೆ ಇದೆ.

ತಂಡದ ಆರಂಭಿಕ ವಿಭಾಗದಲ್ಲಿ ರೋಹಿತ್​ ಶರ್ಮಾ, ಶುಭಮನ್​ ಗಿಲ್​ ಇದ್ದರೆ, ನಂತರ ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ ಇರಲಿದ್ದಾರೆ. ಈ ಕಾಂಬಿನೇಷನ್​ನ ತಂಡವು ವಿಶ್ವಕಪ್​ಗೆ ಆಯ್ಕೆ ಆಗಲಿದೆ.

2023 ರ ವಿಶ್ವಕಪ್‌ಗೆ ಭಾರತದ ತಾತ್ಕಾಲಿಕ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

ಇದನ್ನೂ ಓದಿ:ಏಷ್ಯಾಕಪ್​ 2023: ಭಾರತ - ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ.. ಸೂಪರ್​-4 ಹಂತಕ್ಕೆ ಬಾಬರ್​ ಪಡೆ

ABOUT THE AUTHOR

...view details