ಏಷ್ಯಾಕಪ್ ಟೂರ್ನಿಯಲ್ಲಿ ಕೆಎಲ್ ರಾಹುಲ್ರ ನಿಧಾನಗತಿಯ ಬ್ಯಾಟಿಂಗ್ ಈಗ ಚರ್ಚಾ ವಿಷಯವಾಗಿದೆ. ರಾಹುಲ್ ರನ್ ಗಳಿಸಲು ಪರದಾಡಿದ್ದಲ್ಲದೇನು ನಿಧಾನಗತಿಯಾಗಿ ಬ್ಯಾಟ್ ಬೀಸಿದ್ದನ್ನು ಹಲವರು ಟೀಕಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಹುಲ್, ನಾನು ತಂಡಕ್ಕಾಗಿ ಶೇ.100 ರಷ್ಟು ಪ್ರಯತ್ನ ಹಾಕಿದ್ದೇನೆ. ಪ್ರತಿ ಸಲವೂ 200 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಲು ಆಗಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಟಿ-20 ಹೊಡಿ ಬಡಿ ಆಟವಾದ ಕಾರಣ ನಿಧಾನಗತಿ ಬ್ಯಾಟಿಂಗ್ನಿಂದ ತಂಡ ಸೋಲುವ ಸಂಭವ ಹೆಚ್ಚಿಸುತ್ತದೆ. ಹೀಗಾಗಿ ಆಟಗಾರ ಕಡಿಮೆ ಬಾಲ್ನಲ್ಲಿ ಹೆಚ್ಚು ರನ್ ಗಳಿಸಲು ಯುತ್ನಿಸಬೇಕು. ಏಷ್ಯಾಕಪ್ನಲ್ಲಿ ಇದರಲ್ಲಿ ರಾಹುಲ್ ಕೊಂಚ ಎಡವಿದ್ದರು. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತಂದಿತ್ತು.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬದಲಾಗಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಇಳಿದು ಮಿಂಚಿನ ಶತಕ ಸಿಡಿಸಿದ ಬಳಿಕ ಅವರನ್ನೇ ಆರಂಭಿಕನಾಗಿ ಇಳಿಸುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿದ್ದವು. ಕೆ ಎಲ್ ರಾಹುಲ್ರ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಮುಂಬರುವ ಟಿ-20 ವಿಶ್ವಕಪ್ನಲ್ಲಿ ರೋಹಿತ್ ಮತ್ತು ವಿರಾಟ್ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯಲಿದ್ದಾರಾ ಎಂಬ ಗೊಂದಲವೂ ಮೂಡಿತ್ತು.
ಇದಕ್ಕೆ ನಾಯಕ ರೋಹಿತ್ ಸ್ಪಷ್ಟನೆ ನೀಡಿ, ನನ್ನ ಜೊತೆ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ವಿರಾಟ್ 3ನೇ ಕ್ರಮಾಂಕದಲ್ಲೇ ಆಡ್ತಾರೆ ಅಂದಿದ್ದರು. ರಾಹುಲ್ ನಿಧಾನವಾಗಿ ಆಡುತ್ತಿರುವುದು ವಿಕೆಟ್ ತಂಡ ವಿಕೆಟ್ ಕಾಪಾಡಿಕೊಳ್ಳುವ ಯೋಜನೆ ಎಂದು ಹೇಳಿದಾಗ್ಯೂ, ಚುಟಕು ಕ್ರಿಕೆಟ್ನಲ್ಲಿ ಇದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬುದು ಇನ್ನೊಂದು ವಾದವಾಗಿತ್ತು.