ಜೋಹಾನ್ಸ್ಬರ್ಗ್:ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಬೆನ್ನು ನೋವಿನಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದು, ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಟಾಸ್ ಗೆದ್ದಿರುವ ಅವರು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ, ವಾಂಡರರ್ಸ್ನಲ್ಲಿ ಜಯ ಸಾಧಿಸಿ ಸರಣಿ ಗೆಲ್ಲುವ ಗುರಿ ಹೊಂದಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹನುಮ ವಿಹಾರಿಗೆ ಅವಕಾಶ ಲಭಿಸಿದೆ. ಕನ್ನಡಿದ ಕೆಎಲ್ ರಾಹುಲ್ಗೆ ಮೊದಲ ಬಾರಿಗೆ ದೇಶದ ಟೆಸ್ಟ್ ತಂಡ ಮುನ್ನಡೆಸುವ ಅವಕಾಶ ಲಭಿಸಿದೆ.
ಇನ್ನುಳಿದಂತೆ ಭಾರತವು ಮೊದಲ ಪಂದ್ಯವನ್ನಾಡಿದ ಆಟಗಾರರನ್ನೇ ಮುಂದುವರೆಸಿದೆ. ಹರಿಣಗಳ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಡಿಕಾಕ್ ನಿವೃತ್ತಿ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಆಗಿ ಕೈಲ್ ವೆರ್ರೆನ್ ಹಾಗೂ ಡೌನ್ನೆ ಮಡ್ಲರ್ ಬದಲಿಗೆ ಡುವಾನ್ನೆ ಒಲಿವಿಯರ್ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.