ಕರ್ನಾಟಕ

karnataka

ETV Bharat / sports

ಕೆ.ಎಲ್.ರಾಹುಲ್​ ಮಿಸ್ ಆಗಿದ್ದು ಟೀಂ ಇಂಡಿಯಾಗೆ ಹಿನ್ನಡೆ: ಸಂಜಯ್‌ ಮಾಂಜ್ರೇಕರ್ - ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿ

2007ರ ನಂತರ ಭಾರತವು ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆದ್ದಿಲ್ಲ. ಆದರೆ ಇದೀಗ ಎಜ್​ಬಾಸ್ಟನ್​ ಟೆಸ್ಟ್​ಗೆ ರಾಹುಲ್ ಲಭ್ಯವಿಲ್ಲದಿರುವುದು ಭಾರತೀಯ ಬ್ಯಾಟಿಂಗ್ ಲೈನ್​ ಅಪ್‌ಗೆ ಸವಾಲಾಗಲಿದೆ ಎಂದು ಮಾಜಿ ಟೀಂ ಇಂಡಿಯಾ ಆಟಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.

KL Rahul missing out is a massive setback for India; batting will be big challenge: Manjrekar
KL Rahul missing out is a massive setback for India; batting will be big challenge: Manjrekar

By

Published : Jun 24, 2022, 3:13 PM IST

ಮುಂಬೈ:ಟೀಂ ಇಂಡಿಯಾಓಪನರ್‌ ಬ್ಯಾಟರ್‌ಗಳಾದ​ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಸಾಕಷ್ಟು ರನ್ ಗಳಿಸಿದ್ದರಿಂದಲೇ 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕೊನೆಯ ಮತ್ತು ಐದನೇ ಪಂದ್ಯಕ್ಕೂ ಮುನ್ನ ಭಾರತವು 2-1 ರ ಮುನ್ನಡೆ ಸಾಧಿಸಲು ಸಾಧ್ಯವಾಗಿತ್ತು.

ಈ ಸರಣಿಯಲ್ಲಿ ಶರ್ಮಾ 4 ಪಂದ್ಯಗಳಿಂದ 368 ರನ್ ಗಳಿಸಿದ್ದರು. ಲಾರ್ಡ್ಸ್‌ ಮತ್ತು ಹಡಿಂಗ್ಲೆಗಳಲ್ಲಿ ಒಂದಿಷ್ಟು ಹಾಫ್ ಸೆಂಚುರಿಗಳನ್ನು ಬಾರಿಸಿದ್ದ ಶರ್ಮಾ, ಓವಲ್​ನಲ್ಲಿ ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್​ನಲ್ಲಿ ಗಳಿಸಿದ್ದ 127 ರನ್ ಗಳಿಸಿದ ಆಟ ಅದ್ಭುತವಾಗಿತ್ತು. ಇನ್ನೊಂದೆಡೆ, ರಾಹುಲ್ 315 ರನ್ ಗಳಿಸಿದ್ದರು. ರಾಹುಲ್ ಲಾರ್ಡ್ಸ್​ನಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಗಳಿಸಿದ 129 ರನ್​ಗಳು ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದವು.

ಆದರೆ, ಈ ಬಾರಿ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಇಂಗ್ಲೆಂಡ್​ಗೆ ತೆರಳುತ್ತಿದ್ದರೆ, ಎಜ್​ಬಾಸ್ಟನ್​ ಟೆಸ್ಟ್​ಗೆ ಗಾಯಗೊಂಡಿರುವ ರಾಹುಲ್ ಲಭ್ಯವಿಲ್ಲ. ಹೀಗಾಗಿ ಜುಲೈ 1 ರಿಂದ 5ರ ಪಂದ್ಯದಲ್ಲಿ ಪ್ರತಿಭಾನ್ವಿತ ಆಟಗಾರ ಶುಬ್ಮನ್ ಗಿಲ್ ಓಪನರ್‌ ಆಗಿ ಕ್ರೀಸಿಗಿಳಿಯಬಹುದು.

2007ರ ನಂತರ ಭಾರತವು ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆದ್ದಿಲ್ಲ. ಆದರೆ ಎಜ್​ಬಾಸ್ಟನ್​ ಟೆಸ್ಟ್​ಗೆ ರಾಹುಲ್ ಲಭ್ಯವಿಲ್ಲದಿರುವುದು ಭಾರತೀಯ ಬ್ಯಾಟಿಂಗ್ ಲೈನ್‌ಅಪ್‌ಗೆ ಸವಾಲಾಗಲಿದೆ ಎಂದು ಮಾಂಜ್ರೇಕರ್‌ ಕಳವಳ ವ್ಯಕ್ತಪಡಿಸಿದ್ದಾರೆ.

"ಈ ಬಾರಿ ಕೆ.ಎಲ್.ರಾಹುಲ್ ಆಡಲು ಲಭ್ಯವಿಲ್ಲದಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಆದರೆ ಶ್ರೇಯಸ್​ ಅಯ್ಯರ್ ಇರುವುದು ಭರವಸೆ ಮೂಡಿಸಿದೆ. ಇನ್ನು ಹನುಮ ವಿಹಾರಿ ಕೂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ." ಎಂದು ಅವರು ವಿಶ್ಲೇಷಿಸಿದ್ದಾರೆ.

ABOUT THE AUTHOR

...view details